Monday, December 23, 2024

Latest Posts

ಅಂಬಾನಿಗೆ ಬೆದರಿಕೆ ಹಾಕಿದ್ದೂ ಬೇರೆ ಯಾರೂ ಅಲ್ಲ, ಆತಂಕ ಮೂಡಿಸಿದೆ ಈ ವಿದ್ಯಾರ್ಥಿಗಳ ನಡೆ..!

- Advertisement -

Mumbai News: ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ರಾಜ್ವೀರ್ ಕಾಂತ್ ಹಾಗೂ ತೆಲಂಗಾಣ ಮೂಲದ ಕಾಮರ್ಸ್ ಓದುತ್ತಿರುವ ವಿದ್ಯಾರ್ಥಿ ಗಣೇಶ್ ರಮೇಶ್ ವನಪರ್ಧಿ (19) ಬಂಧಿತರು. ಈ ಇಬ್ಬರು ಬೇರೆ ಬೇರೆ ರಾಜ್ಯದಿಂದಲೇ 500 ಕೋಟಿ ರೂಪಾಯಿ ಕೊಡುವಂತೆ ಮುಖೇಶ್ ಅಂಬಾನಿಗೆ ಪ್ರತ್ಯೇಕವಾಗಿ ಇ-ಮೇಲ್ ಮೂಲಕ ಜೀವ ಬೆದರಿಕೆ ಹಾಕಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ.

ಅಂಬಾನಿಗೆ ಜೀವ ಬೆದರಿಕೆಯ ಇ-ಮೇಲ್ ಅನ್ನು ಅಕ್ಟೋಬರ್ 27 ರಂದು ಶಾದಾಬ್ ಖಾನ್ ಎನ್ನುವ ಹೆಸರಿಲ್ಲಿ ರಾಜ್ವೀರ್ ಕಾಂತ್ ಕಳುಹಿಸಿದ್ದನು. ಕಂಪ್ಯೂಟರ್ ಸೈನ್ಸ್ ಓದುತ್ತಿರುವ ಈ ವಿದ್ಯಾರ್ಥಿ ನಿತ್ಯ ಡಾರ್ಕ್ವೆಬ್ನಲ್ಲಿ ಸಾಕಷ್ಟು ಸಮಯ ಕಳೆಯುತ್ತಾನೆ. ಇದರಿಂದಲೇ ಈ ರೀತಿಯಲ್ಲಿ ಬೆದರಿಕೆಯಿಂದ ಹಣ ಗಳಿಸಲು ಪ್ಲಾನ್ ಮಾಡಿದ್ದನು. ತಾನು ಇರುವ ಯಾವುದೇ ಸ್ಥಳ ಗೊತ್ತಾಗದಂತೆ ಮರೆಮಾಚಲು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (VPN) ಅನ್ನು ಬಳಸಿದ್ದನು.

ಇನ್ನೊಬ್ಬ ಆರೋಪಿ ತೆಲಂಗಾಣದ ಗಣೇಶ್, ಕಳೆದ ವಾರ ಮುಖೇಶ್ ಅಂಬಾನಿಗೆ ಇ-ಮೇಲ್ ಮಾಡಿದ್ದ ಆರೋಪಿ ಬರೋಬ್ಬರಿ 500 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದನು. ಹಣ ಕೊಡದಿದ್ದರೇ ಶಾರ್ಪ್ ಶೂಟರ್ಗಳ ಮೂಲಕ ಹತ್ಯೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದನು. ತನ್ನ ಬಗ್ಗೆ ಮಾಹಿತಿ ಯಾರಿಗೂ ಗೊತ್ತಾಗಂತೆ ಜಾಗ್ರತೆ ವಹಿಸಲು ಬೆಲ್ಜಿಯಂ ಐ.ಪಿ. ಅಡ್ರೆಸ್ ಬಳಸಿ ಇ ಮೇಲ್ ಮಾಡಿದ್ದನು. ಈ ಬಗ್ಗೆ ಮುಂಬೈ ಪೊಲೀಸರು ಬೆಲ್ಜಿಯಂ ಮೂಲದ ಪೊಲೀಸರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ತನಿಖೆಯ ದಿಕ್ಕು ತಪ್ಪಿಸಲು ಈ ರೀತಿ ಮಾಡಿದ್ದಾನೆ ಎಂದು ನಂತರ ಗೊತ್ತಾಗಿದೆ. ಸದ್ಯ ಸೆರೆಯಾಗಿರುವ ಇಬ್ಬರು ಆರೋಪಿಗಳನ್ನು ಪೊಲೀಸರು ಇನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹುಟ್ಟಿದ ಮಗುವಿಗೆ ಸ್ನಾನ ಬೇಕೋ..? ಬೇಡವೋ..?

ಕಾಂಗ್ರೆಸ್‌ನಲ್ಲಿ ಸಿದ್ಧರಾಮಯ್ಯ ಹಾಗೂ ಡಿಕೆಶಿ ಎರಡು ಬಣಗಳಿವೆ: ಮಾಜಿ ಸಚಿವ ಶ್ರೀರಾಮುಲು

ಹಾಸನಾಂಬ ದೇಗುಲದ ಕಳಸ ಪ್ರತಿಷ್ಠಾಪನೆಗೆ ಕರಿಯಲಿಲ್ಲವೆಂದು ಜಿಲ್ಲಾಧಿಕಾರಿ ವಿರುದ್ಧ ಶಾಸಕರು ಗರಂ

- Advertisement -

Latest Posts

Don't Miss