Wednesday, April 16, 2025

Latest Posts

ಮಂಡ್ಯನಾ ಯಾರೂ ಮಂಗಳೂರು ಮಾಡಲ್ಲ. ಮಂಡ್ಯ ಮಂಡ್ಯನೇ: ಮಾಜಿ ಸಚಿವ ಸಿ.ಟಿ.ರವಿ

- Advertisement -

Hassan News: ಹಾಸನ : ಹಾಸನಕ್ಕಿಂದು ಭೇಟಿ ನೀಡಿದ ಮಾಜಿ ಸಚಿವ ಸಿ.ಟಿ.ರವಿ, ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಅಭಿಯಾನ ಆರಂಭ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಮನೆ ಮನೆಯಲ್ಲಿ ಹನುಮ ಧ್ವಜ ಹಾರಿಸುತ್ತೇವೆ, ಯಾವ ಲೈಸೆನ್ಸ್‌ನ ಅವಶ್ಯಕತೆ ಇಲ್ಲ. ನನ್ನ ಮನೆ ಮೇಲೆ ಹನುಮ ಧ್ವಜ ಹಾರಿಸಲು ಯಾರದ್ದಾದರೂ ಅಪ್ಪಣೆ ಬೇಕೇನು..? ಅಪ್ಪಣೆ ಅವಶ್ಯಕತೆ ಇಲ್ಲಾ, ಹನುಮಧ್ವಜ ಹಾರಿಸುತ್ತೇವೆ. ಹನುಮಧ್ವಜದ ಮೂಲಕವೇ ಒಂದು ಸಂದೇಶವನ್ನು ಕೊಡ್ತಿವಿ ಎಂದು ಸಿ.ಟಿ.ರವಿ ಹೇಳಿದ್ದಾರೆ.

ರಾಮಮಂದಿರ ರೀತಿ ಉಳಿದ ದೇವಾಲಯಗಳಿಗೆ ಅನುದಾನ ನೀಡುವ ವಿಚಾರದ ಬಗ್ಗೆ ರವಿ ಮಾತನಾಡಿದ್ದು,  ನೂರಲ್ಲ ಸಾವಿರ ಕೋಟಿ ಕೊಡಲಿ. ಸಾವಿರ ಕೋಟಿ ಕೊಟ್ಟರು ಕಡಿಮೆನೇ. ಹೊಯ್ಸಳ ಕಾಲದ ದೇವಾಯಗಳು ಇವೆ. ನೂರು ಕೋಟಿ ಅಲ್ಲ ಸಾವಿರ ಕೋಟಿ ಕೊಡಬೇಕು. ನಮ್ಮ ಹುಂಡಿ ತೆಗೆಯೋದು ಮಾಡುತ್ತಿದ್ದರು. ಈಗಲಾದರೂ ಜನಜಾಗೃತಿ ಆಗಬೇಕು. ಒಂದು ಸಾವಿರ ಅಲ್ಲ ಹತ್ತು ಸಾವಿರ ಕೋಟಿ ಕೊಟ್ಟರು ಬೇಲೂರುನಲ್ಲಿರುವ ದೇವಸ್ಥಾನ ಕಟ್ಟಲು ಆಗುತ್ತಾ..? ಎಲ್ಲಾ ದೇವಾಲಯಗಳನ್ನು ಉಳಿಸಿಕೊಳ್ಳಬೇಕು. ಇಷ್ಟು ವರ್ಷ ಹುಂಡಿ ಹಣವನ್ನು ಲೂಟಿ ಹೊಡೆದಿದ್ದೀರಾ. ಆ ಪಾಪದ ಪ್ರಾಯಶ್ಚಿತ್ತಕ್ಕಾಗಿ ಪ್ರತಿವರ್ಷ ದೇವಾಲಯಗಳಿಗೆ ಸಾವಿರ ಕೋಟಿ ಹಣ ಕೊಡಬೇಕು ಎಂದು ಸಿ.ಟಿ.ರವಿ ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಮಂಡ್ಯವನ್ನು ಮಂಗಳೂರು ಮಾಡಲು ಆಗಲ್ಲ ಎಂಬು ಸಚಿವ ಚೆಲುವರಾಯಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ರವಿ ಪ್ರತಿಕ್ರಿಯಿಸಿದ್ದು, ಯಾವ ರಾಜಕಾರಣ ನಡೆಯುತ್ತೆ ಅಂತ ಜನ ತೀರ್ಮಾನ ಮಾಡ್ತಾರೆ. ರಾಷ್ಟ್ರ ಧ್ವಜ ಸರ್ವಮಾನ್ಯ ಅದು ಎತ್ತರಕ್ಕಿಂತ ಎತ್ತದಲ್ಲಿರಬೇಕು. ಹನುಮಧ್ವಜ ತೆಗೆದು ರಾಷ್ಟ್ರ ಧ್ವಜ ಹಾರಿಸಬೇಕಿತ್ತಾ..? ಇನ್ನೊಂದು ಧ್ವಜಸ್ತಂಭವನ್ನು ನೆಟ್ಟು ಹನುಮಧ್ವಜಕ್ಕಿಂತ ಎತ್ತರದಲ್ಲಿ ಹಾರಿಸಬೇಕಿತ್ತು. ಒಡೆದಾಳುವ ರಾಜಕಾರಣ ಭಾಗವಾಗಿಯೇ ಹನುಮಧ್ವಜ ವಿರುದ್ಧ ರಾಷ್ಟ್ರಧ್ವಜ ಎತ್ತಿ ಕಟ್ಟಿದ್ರಿ. ಮಂಡ್ಯನಾ ಯಾರೂ ಮಂಗಳೂರು ಮಾಡಲ್ಲ. ಮಂಡ್ಯ ಇಂಡಿಯಾದೊಳಗೆ ಇದೆ ಅನ್ನೋದನ್ನ ನೆನೆಪಿಟ್ಟುಕೊಳ್ಳಲಿ. ಮಂಡ್ಯ ಪಾಕಿಸ್ತಾನದೊಳಗೆ ಇಲ್ಲ, ಮಂಡ್ಯ ಇಂಡಿಯಾದಲ್ಲೇ ಇದೆ, ಮಂಡ್ಯ ಮಂಡ್ಯನೇ ಎಂದು ರವಿ ಹರಿಹಾಯ್ದಿದ್ದಾರೆ.

ಮಂಡ್ಯದಲ್ಲಿರುವ ಹನುಮ ಭಕ್ತರು ಯಾರಿಗೂ ತಲೆ ತಗ್ಗಿಸಲ್ಲ, ತಲೆ ಎತ್ತಿಕೊಂಡು ಓಡಾಡುವವರು. ಹನುಮನಿಗೋಸ್ಕರ ಜೀವ ಕೊಡಲು ತಯಾರಾಗಿರುವವರು. ಮಂಡ್ಯವನ್ನು ಇನ್ನೇನೋ ಮಾಡ್ತಿವಿ ಅಂತ ಹೊರಡಬೇಡಿ ಎಂದು ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿಸಚಿವ ಬಿ.ಶಿವರಾಂ 40% ಕಮಿಷನ್ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನೋ ಡೌಟ್ 40% ಅಂಡ್ ಎಬೋ, ಇನ್ನೇನು ಸಾಕ್ಷಿ ಬೇಕು. ಈ ರಾಜ್ಯದಲ್ಲಿ ಮಾಜಿಸಚಿವರೇ ಹೇಳಿದ ಮೇಲೆ, ಇನ್ನೇನು ಬೇಕು..? ಮುಂಚೆ ಸಿದ್ದರಾಮಯ್ಯ ಕದ್ದುಮುಚ್ಚಿ ಮಾಡೋರು. ಡಿನೋಟಿಫಿಕೇಷನ್ ಅನ್ನುವ ಪದ ಬಳಸಿದ್ರೆ ಜನಕ್ಕೆ ಗೊತ್ತಾಗುತ್ತೆ ಅಂತ ರಿಡೂ ಅನ್ನುವ ಪದ ಬಳಸಿದ್ರು. ಈಗಾ ಯಾವ ಮುಲಾಜಿಲ್ಲ, ಬಂಡತನ, ಎಲ್ಲಾ ಅಂಗಡಿ ಬಾಗಿಲು ತೆರೆದುಕೊಂಡು ಕುಳಿತಿದ್ದಾರೆ. ಅಂಗಡಿ ಬಾಗಿಲು ಒಂದೇ ಲಾವ್ ಲಾವ್ ಲಾವ್. ವಾಸ್ತವಿಕವಾಗಿರುವುದನ್ನೇ ಶಿವರಾಂ ಹೇಳಿದ್ದಾರೆ ನಿಜಾನೂ. ಸತ್ಯ ಹೇಳಲು ಹಿಂಜರಿಯಬೇಕಿಲ್ಲ, ಸತ್ಯವನ್ನೇ ಹೇಳಿದ್ದಾರೆ ಎಂದು ರವಿ ವ್ಯಂಗ್ಯವಾಡಿದ್ದಾರೆ.

ಮಂಡ್ಯದಲ್ಲಿ ಕುಮಾರಸ್ವಾಮಿ ಬರುತ್ತಿದ್ದಂತೆ ಪ್ರೀತಂಗೌಡ ಹಾಗೂ ನಾರಾಯಣಗೌಡ ತೆರಳಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ,  ಅವರು ಬಂದ ಮೇಲೆ ಸ್ವಾಗತ ಮಾಡಿದ ಮೇಲೆ ತೆರಳಿದರು. ಅನ್ಯ ಕಾರ್ಯದ ನಿಮಿತ್ತ ತೆರಳುತ್ತೀವಿ ಅಂತ ಮೊದಲೇ ಹೇಳಿದ್ರು. ಆ ಕಾರಣಕ್ಕೇ ಹೋಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಪೊಲೀಸ್ ಠಾಣೆಯಲ್ಲೇ ಶಿವಸೇನಾ ನಾಯಕನ ಮೇಲೆ ಬಿಜೆಪಿ ಶಾಸಕನಿಂದ ಫೈರಿಂಗ್

- Advertisement -

Latest Posts

Don't Miss