Tuesday, September 23, 2025

Latest Posts

‘ಘನ ನ್ಯಾಯಾಲಯವನ್ನ ಕಾಮೆಂಟ್ ಮಾಡುವುದಕ್ಕೆ ಯಾರಿಗೂ ಅರ್ಹತೆ ಇಲ್ಲ’

- Advertisement -

Kolar News: ಕೋಲಾರ: ಸರ್ಕಾರ ಸ್ಯೂಸೈಡ್ ಮಾಡಿಕೊಂಡಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ, ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಭೈರತಿ ಸುರೇಶ್, ನಾನು ಕುಮಾರಸ್ವಾಮಿ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಬಗ್ಗೆ ಏನಾದರೂ ಕೇಳಿ ಹೇಳುತ್ತೇನೆ. ಅವರು ಡೈಲಿ ಹೇಳುತ್ತಿರುತ್ತಾರೆ ಬೆಳಗ್ಗೆ ಮಧ್ಯಾಹ್ನ ಸಂಜೆ,‌ ಎಲ್ಲದಕ್ಕೂ ಉತ್ತರ ನೀಡಲು ಆಗುತ್ತಾ? ಎಂದು ಮರುಪ್ರಶ್ನಿಸಿದ್ದಾರೆ.

ಡಿಕೆಶಿ ಸಿಬಿಐ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಭೈರತಿ ಸುರೇಶ್, ಘನ ನ್ಯಾಯಾಲಯ ಇದನ್ನ ಎತ್ತಿ ಹಿಡಿದಿದೆ ಅದಕ್ಕೇನು ಆರೋಪ ಮಾಡುತ್ತಾರೆ‌.  ಬಿಜೆಪಿ ಅವರು ಮಾಡಿದ್ದೇ ತಪ್ಪು,ಸಿಬಿಐ ಗೆ ಕೊಟ್ಟಿದ್ದೇ ತಪ್ಪು,  ಕಾಣುವಂತಹ ದೇವರು ಇರೋದೆ ನ್ಯಾಯಾಲಯ, ನ್ಯಾಯಾಲಯನೇ ಹೇಳಿದೆ ಬಿಜೆಪಿ ಅವರು ಮಾಡಿರುವುದು ತಪ್ಪು. ಕಾಂಗ್ರೆಸ್ ಅದನ್ನ ತೆಗೆದುಹಾಕಿರುವುದು ಸರಿ ಎಂದು ಘನ ನ್ಯಾಯಾಲಯ ಹೇಳಿದೆ. ಹೀಗಾಗಿ ಘನ ನ್ಯಾಯಾಲಯವನ್ನ ಕಾಮೆಂಟ್ ಮಾಡುವುದಕ್ಕೆ ಯಾರಿಗೂ ಅರ್ಹತೆ ಇಲ್ಲ ಎಂದು ಹೇಳಿದ್ದಾರೆ.

ಬಿ.ಆರ್.ಪಾಟೀಲ್ ಕುರಿತು ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರತಿಕ್ರಿಯೆ ನೀಡಿದ್ದು, ಅಳಂದ ಶಾಸಕ ಬಿ.ಆರ್.ಪಾಟೀಲ್‌ ಹಾಗೂ ಸಿದ್ದರಾಮಯ್ಯ ಸ್ನೇಹಿತರು. ನಿನ್ನೆ ರಾತ್ರಿ ಬಂದು ಅವರಿಬ್ಬರು ತಿಂಡಿ ತಿಂದು ಕಾಫಿ ಕುಡಿದಿದ್ದಾರೆ. ಭ್ರಷ್ಟಾಚಾರ ಎಂದು ಅವರು ಹೇಳಿಲ್ಲ, ಕೃಷ್ಣ ಬೈರೇಗೌಡ ಹೇಳಿದ್ದು, ಬಿ.ಆರ್.ಪಾಟೀಲ್ ತಿಳಿದುಕೊಂಡಿದ್ದು ಕನ್ಫ್ಯೂಷಿಯನ್ ಇದೆ ಅಷ್ಟೆ. ಮುಖ್ಯಮಂತ್ರಿಗಳು ಹೇಳಿದ್ದಾರೆ ಅವರಿಬ್ಬರು ಕುಳಿತು ಮಾತನಾಡುತ್ತಾರೆ‌ ಎಂದು ಭೈರತಿ ಸುರೇಶ್ ಹೇಳಿದ್ದಾರೆ.

ಬೆಂಗಳೂರಿನ 35 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ: ಇಮೇಲ್‌ನಲ್ಲಿತ್ತು ಮುಜಾಹಿದ್ದೀನ್ ಹೆಸರು

ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಆಟ

8 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು! ರಷ್ಯಾ ಮಹಿಳೆಯರಿಗೆ ಪುಟಿನ್ ಕರೆ

- Advertisement -

Latest Posts

Don't Miss