ಕಿಚ್ಚ ಸುದೀಪ್ ಅವರ ಹುಟ್ಟು ಬ್ಬಕ್ಕೆ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಸೆಪ್ಟೆಂಬರ್ ೨ರಂದು ಸುದೀಪ್ ಬರ್ತ್ ಡೇ. ಹಾಗಾಗಿ ಮನೆ ಮುಂದೆ ಅಭಿಮಾನಿಗಳು ಬರುವುದು ಬೇಡ ಎಂದು ಸುದೀಪ್ ಮನವಿ ಮಾಡಿದ್ದಾರೆ. ಅದಕ್ಕೆ ಕಾರಣ, ಮನೆ ಇರುವುದು ಸಣ್ಣ ರಸ್ತೆಯ ಪಕ್ಕ. ಅಲ್ಲಿ ಅಭಿಮಾನಿಗಳು ಸೇರಿದರೆ, ರಸ್ತೆ ಜಾಮ್ ಆಗುತ್ತೆ. ಅಷ್ಟೇ ಅಲ್ಲ, ಅಕ್ಕಪಕ್ಕದ ಮನೆಯವರಿಗೂ ತೊಂದರೆ ಆಗುತ್ತ. ಅದಿಷ್ಟೇ ಅಲ್ಲ, ಪೊಲೀಸರಿಗೂ ಅದು ತಲೆ ನೋವಾಗಿ ಪರಿಣಮಿಸುತ್ತೆ. ಆದ್ದರಿಂದ ಅಭಿಮಾನಿಗಳು ಮನೆಯ ಬಳಿ ಬರುವುದು ಬೇಡ. ನಾನೇ ನಿಮಗೆ ಸಿಗುತ್ತೇನೆ. ಜಯನಗರದ ಎಂಇಎಸ್ ಮೈದಾನದಲ್ಲಿ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ.
ಹಾಗಾಗಿ ಅಂದು ಬೆಳಗ್ಗೆ ೧೦ ರಿಂದ ೧೨ ಗಂಟೆಯವರೆಗೆ ಅಭಿಮಾನಿಗಳಿಗೆ ನಾನು ಸಿಗುತ್ತೇನೆ. ಅಲ್ಲಿಯೇ ನೀವು ನನ್ನನ್ನು ನೋಡಿ ಹರಸಬಹುದು ಎಂದಿದ್ದಾರೆ ಸುದೀಪ್. ಈ ನಡುವೆ, ನನಗೆ ಕೇಕ್ , ಹಾರ ತುರಾಯಿ ಅಗತ್ಯವಿಲ್ಲ. ಯಾಕೆಂದರೆ, ವಿನಾಕಾರಣ ಅದು ವೇಸ್ಟ್ ಎಂಬುದು ನನ್ನ ಭಾವನೆ. ಆದ್ದರಿಂದ ಅವುಗಳನ್ನೂ ತರಬೇಡಿ. ಕಳೆದ ಬಾರಿ ಮನೆಯ ಮುಂದೆ ಸುಮಾರು ೪೦ ಸಾವಿರ ಫ್ಯಾನ್ಸ್ ಬಂದಿದ್ದರಿಂದ ರಸ್ತೆ ಜಾಮ್ ಆಗಿತ್ತು. ಹಾಗಾಗಿ ಎಲ್ಲರೂ ಪ್ರೀತಿಯಿಂದ ಸಹಕರಿಸಬೇಕು. ನೀವು ಸಹಕರಿಸಿದರೆ, ಹುಟ್ಟುಹಬ್ಬವನ್ನು ಮತ್ತಷ್ಟು ಚೆನ್ನಾಗಿ ಆಚರಿಸಬಹುದು ಎಂದಿದ್ದಾರೆ ಸುದೀಪ್.