India vs England: ಭಾರತ ಇಂಗ್ಲೆಂಡ್ ಪಂದ್ಯ ರದ್ದಾದರೆ?

ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ. ನಾಳೆ (ಜೂ.26)ಗಯಾನಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್​​ಪ್ರವೇಶಿಸಲಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಈ ಪಂದ್ಯ ರದ್ದಾದರೆ..? ಫೈನಲ್‌ಗೆ ಪ್ರವೇಶ ಪಡೆಯೋರ್ಯಾರು?

ಬುಧವಾರ ನಡೆಯುವ ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಈ ಪಂದ್ಯ ಮುಗಿಸೋಕೆ ಒಟ್ಟು 7ಗಂಟೆ 20ನಿಮಿಷ ನೀಡಲಾಗುವುದು. ಆದರೆ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾದಲ್ಲಿ ಫಲಿತಾಂಶ ಸಾಧಿಸಲು 250 ನಿಮಿಷಗಳ ಕಾಲಾವಕಾಶವನ್ನು ನೀಡಲಾಗಿದೆ. ಹೆಚ್ಚುವರಿ ಸಮಯದಲ್ಲಿ ಕೂಡಾ ಮಳೆಯಿಂದ ಒಂದು ಎಸೆತದ ಆಟವೂ ಸಾಧ್ಯವಾಗದಿದ್ದರೆ, ಸೂಪರ್ 8 ಹಂತದಲ್ಲಿ ಇಂಗ್ಲೆಂಡಿಗಿಂತ ಉತ್ತಮ ಸಾಧನೆ ಮಾಡಿರುವ ಆಧಾರದಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಲಿದೆ.

ಸೂಪರ್ 8 ಹಂತದ ಗ್ರೂಪ್ 1ರಲ್ಲಿ ಭಾರತ ಅಗ್ರ ಸ್ಥಾನ ಪಡೆದಿದ್ದರೆ, ಗ್ರೂಪ್ 2ರಲ್ಲಿ ಇಂಗ್ಲೆಂಡ್ 2ನೇ ಸ್ಥಾನದಲ್ಲಿದ್ದಿದ್ದು ಇದೀಗ ಭಾರತಕ್ಕೆ ಇದು ವರದಾನವಾಗಿದೆ. ಐಸಿಸಿಯ ಇನ್ನೊಂದು ಪ್ರತ್ಯೇಕ ನಿಯಮದ ಪ್ರಕಾರ ಪಂದ್ಯ ಆಡಿ ಫಲಿತಾಂಶ ಹೊರಬೀಳಬೇಕಿದ್ದರೆ ತಲಾ 10ಒವರ್ ನ ಇನ್ನಿಂಗ್ಸ್ ನಡೆಯಲೇಬೇಕು. ಹಾಗೆಯೇ ಫೈನಲ್ ನಲ್ಲೂ ಇದೇ ನಿಯಮ ಅನ್ವಯವಾಗಲಿದೆ. ಗುಂಪು ಹಂತ ಹಾಗೂ ಸೂಪರ್ 8 ಹಂತದಲ್ಲಿ ಈ ನಿಯಮವಿಲ್ಲ, ಕನಿಷ್ಠ 5 ಒವರ್ ನಡೆದಿದ್ದರೆ ಸಾಕಾಗಿತ್ತು ಫಲಿತಾಂಶ ಪಡೆಯಬಹುದಿತ್ತು.

About The Author