Technology News : ಒಂದು ಕಾಲದಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡು ಬಿಂದಾಸಾಗಿ ರಾಜ್ಯಭಾರ ಮಾಡುತ್ತಿತ್ತು ಆ ಒಂದು ಸೆಲ್ ಫೋನ್ ಆದರೆ ನಿರಂತರ ಟೆಕ್ ಲೋಕ ದಲ್ಲಿ ಸದ್ದು ಮಾಡುವುದನ್ನೇ ನಿಲ್ಲಿಸಿತ್ತು. ಆದರೆ ಇದೀಗ ಮತ್ತೆ ಸದ್ದು ಮಾಡಲಾರಂಭಿಸಿದೆ ಜನರ ಬಹು ಬೇಡಿಕೆಯ ಸೆಲ್ ಫೋನ್ ಹಾಗಿದ್ರೆ ಭಾರತದಲ್ಲಿ ಸೌಂಡ್ ಮಾಡುತ್ತಿರೋ ಸೆಲ್ ಫೋನ್ ಯಾವುದು ಏನಿದರ ಫೀಚರ್ಸ್ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್………
ಭಾರತದಲ್ಲಿ ಒಂದು ಕಾಲದಲ್ಲಿ ನೋಕಿಯಾ ಫೋನ್ ಎಲ್ಲರಿಗೂ ಪ್ರಿಯವಾಗಿತ್ತು. ಈಗ ಮತ್ತೆ ನೋಕಿಯಾ ಹೊಸ ಶೈಲಿಯಲ್ಲಿ ಮಾರುಕಟ್ಟೆಗೆ ಬರುತ್ತಿವೆ.
ನೋಕಿಯಾ G42 5G ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆ ಆಗಿದೆ. ಇದರ ಬೆಲೆ 6GB RAM + 128GB ಕಾನ್ಫಿಗರೇಶನ್ ಆಯ್ಕೆಗೆ ಕೇವಲ 12,599 ರೂ. ಎಂಬುವುದಾಗಿ ನಿಗದಿ ಮಾಡಲಾಗಿದೆ. ಕಡಿಮೆ ಬೆಲೆ ಆಗಿದ್ದರೂ ಈ ಫೋನಿನಲ್ಲಿ ಆಕರ್ಷಕ ಡಿಸ್ ಪ್ಲೇ, ಕ್ಯಾಮೆರಾ, ಬ್ಯಾಟರಿ ಆಯ್ಕೆ ನೀಡಲಾಗಿದೆ.
ವಿಶೇಷ ಎಂದರೆ G-ಸರಣಿಯ ಈ ಫೋನ್ ಬಜೆಟ್ ಬೆಲೆಗೆ ಲಭ್ಯವಿದ್ದು, ಬೊಂಬಾಟ್ ಸೇಲ್ ಆಗುವುದು ಖಚಿತ ಎನ್ನಲಾಗಿದೆ. ಇದರ ಮೂಲಕ ನೋಕಿಯಾ ಕಮ್ಬ್ಯಾಕ್ ಮಾಡಲಿದೆ .
ನೋಕಿಯಾ G42 5G ಬೆಲೆ ಮತ್ತು ಲಭ್ಯತೆ ಬಗ್ಗೆ ಮಾಹಿತಿ:
ಭಾರತದಲ್ಲಿ ನೋಕಿಯಾ G42 5G ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಸ್ಟೋರೇಜ್ ಮಾದರಿ ಬಿಡುಗಡೆ ಆಗಿದೆ. 6GB RAM + 128GB ಕಾನ್ಫಿಗರೇಶನ್ ಆಯ್ಕೆಗೆ ಕೇವಲ 12,599 ರೂ. ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ನೋಕಿಯಾ ವೆಬ್‌ಸೈಟ್ ಮೂಲಕ ಸೆಪ್ಟೆಂಬರ್ 15 ರಿಂದ ಖರೀದಿಗೆ ಲಭ್ಯವಿರುತ್ತದೆ ಎಂಬ ಮಾಹಿತಿ ಇದೆ.. ಪಿಂಕ್, ನೇರಳೆ ಮತ್ತು ಬೂದು ಬಣ್ಣಗಳಲ್ಲಿ ಈ ಫೋನ್ ಸ್ಟೈಲಿಶ್ ಆಗಿ ಮೂಡಿ ಬಂದಿದೆ.
ನೋಕಿಯಾ G42 5G ಯ ಫೀಚರ್ಸ್:
ನೋಕಿಯಾದ ಈ ಹೊಸ ಸ್ಮಾರ್ಟ್‌ಫೋನ್ 720 × 1612 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 6.56-ಇಂಚಿನ HD+ LCD ಡಿಸ್ ಪ್ಲೇ ಹೊಂದಿದೆ. 90Hz ರಿಫ್ರೆಶ್ ದರ, 560 nits ಬೈಟ್ನೆಸ್, 20: 9 ಅನುಪಾತ, ಮತ್ತು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ವಾಟರ್‌ಡ್ರಾಪ್ ನಾಚ್ ಒಳಗೊಂಡಿದೆ.
ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ನೊಂದಿಗೆ ಲೋಡ್ ಆಗಿದೆ. ನೋಕಿಯಾ ಆಂಡ್ರಾಯ್ಡ್ 14 ಮತ್ತು ಆಂಡ್ರಾಯ್ಡ್ 15 ಎರಡು ಆವೃತ್ತಿಯ ನವೀಕರಣಗಳ ಭರವಸೆ ನೀಡಿದೆ ಎನ್ನಲಾಗಿದೆ.
ಇದು ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಡೆಪ್ತ್ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು LED ಫ್ಲಾಶ್ ಒಳಗೊಂಡಿದೆ. ಮುಂಭಾಗ ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ನೋಕಿಯಾ G42 5G ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಒಳಗೊಂಡಿದೆ.
ಚಂದ್ರಯಾನ-3 ಯಶಸ್ವಿ ಉಡಾವಣೆ , ದಕ್ಷಿಣ ಧ್ರುವಕ್ಕಿಳಿದ ವಿಕ್ರಮ್ ಲ್ಯಾಂಡರ್
Ola Electric scooter: ಓಲಾ S1X ಎಲೆಕ್ಟ್ರಿಕ್ ಸ್ಕೂಟರ್ ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡಿತು
Research centers : ಭಾರತೀಯ ಪ್ರಯೋಗಾಲಯಗಳಲ್ಲಿ ಸಂಶೋಧನೆಯನ್ನು ನಿಧಾನಗೊಳಿಸಿದೆ..!