Hubli News: ಹುಬ್ಬಳ್ಳಿ: 20 ದಿನಗಳಿಂದ ನಾವು ಹೋರಾಟ ಪ್ರಾರಂಭ ಮಾಡಿದ್ವಿ. ಹೋರಾಟಕ್ಕೆ ಧರ್ಮಯುದ್ದ ಅಂತಾ ಕರೆದಿದ್ದೆವು. ಸ್ವಾಭಿಮಾನದ ಚುನಾವಣೆ ಎಂದು ನಾವು ಹೇಳಿದ್ದೆವು, ನಾನು ನಾಮಪತ್ರ ವಾಪಸ್ ಪಡೆದಿದ್ದೇನೆ. ಆದ್ರೆ ಧರ್ಮಯುದ್ದದಿಂದ ಹಿಂದೆ ಸರಿದಿಲ್ಲ ಎಂದ ಫ.ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಮೋಹನ ಲಿಂಬಿಕಾಯಿ ನಿವಾಸದಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆ ಮಾಡಿದ ನಂತರವೂ ಎರಡು ಪಕ್ಷದ ನಾಯಕರು ನಮ್ಮ ಜೊತೆ ಚರ್ಚೆ ಮಾಡಿದ್ರು. ನಿನ್ನೆ ಸಿಎಮ್, ಡಿಸಿಎಮ್, ಮಾಜಿ ಸಿಎಮ್ ಕೂಡ ಮಾತಾಡಿದ್ರು. ಎಲ್ಲ ವಿಚಾರಕ್ಕೆ ನಾನು ಉತ್ತರ ಕೊಟ್ಟಿದ್ದೆ. ನಮ್ಮ ಗುರುಗಳು ನನಗೆ ನಾಮಪತ್ರ ವಾಪಸ್ ಪಡೆಯಲು ಸೂಚನೆ ಕೊಟ್ಟಿದ್ರು. ಹೀಗಾಗಿ ವಾಪಸ್ ಪಡೆದಿದ್ದೇನೆ. ನಮ್ಮ ಧರ್ಮಯುದ್ದ ಮುಂದುವರೆಯುತ್ತದೆ. ಚುನಾವಣೆ ಒಂದು ಹೊರತು ಪಡಿಸಿ ಎಲ್ಲ ವರ್ಗದಲ್ಲಿ ಧರ್ಮಯುದ್ದ ಮುಂದುವರೆಯುತ್ತದೆ. ನಮ್ಮ ಧರ್ಮಯುದ್ಧಲ್ಲಿ ಯಾರೂ ಬೇಡ ಅಂತಾ ಹೇಳಿದ್ವಿ ಅವರ ವಿರುದ್ದ ಹೋರಾಟ ಮುಂದುವರಿಯುತ್ತೆ ಎಂದರು.
ಎರಡು ಪಕ್ಷದವರೂ ಸಪೋರ್ಟ್ ಮಾಡಿ ಅನ್ನೋ ಬೇಡಿಕೆ ಇದೆ. ಹಿಂದೆ ಯಾರೂ ನನಗೆ ಸಪೋರ್ಟ್ ಮಾಡಿದ್ದರೋ, ಅವರ ಜೊತೆ ನಾನು ಸಭೆ ಮಾಡ್ತೀನಿ. ರಾಜಕೀಯದಲ್ಲಿ ಬದಲಾವಣೆ ಸರ್ವೆ ಸಾಮಾನ್ಯ.
ನನ್ನನ್ನು ಹಿಂದಕ್ಕೆ ಸರಿಸೋ ವ್ಯಕ್ತಿ ರಾಜಕೀಯ ರಂಗದಲ್ಲಿ ಇಲ್ಲ ಎಂದಿದ್ದೆ, ಈಗಲೂ ಅದಕ್ಕೆ ಬದ್ದ.
ನಾನು ರಾಜಕೀಯ ನಾಯಕರ ಮಾತು ಕೇಳಿ ವಾಪಸ್ ಪಡೆದಿಲ್ಲ. ನನ್ನ ಗುರಿ ಮುಟ್ಟುವರೆಗೂ ಹೂಮಾಲೆ ಧರಿಸುವುದಿಲ್ಲ. ಧರ್ಮಯುದ್ದದಲ್ಲಿ ಜಯ ಸಿಗೋ ವರೆಗೂ ಮಾಲೆ ಧರಿಸಲ್ಲ. ನಾನು ಬಿಜೆಪಿ ಅಭ್ಯರ್ಥಿಗೆ ವಿರೋಧ ಮಾಡಿದ್ದೇನೆ. ರಾಜ್ಯದ ನಾಯಕರು ಅವರ ಪರ ಮಾತಾಡಿದ್ರು. ನಿನ್ನೆ ಮದ್ಯರಾತ್ರಿ ನನ್ನ ಜೊತೆ ಬಿಜೆಪಿ ಶಾಸಕರಿದ್ದಾರೆ. ನನ್ನನ್ನು ಬೆಂಬಲಿಸಿದ ಯಾವುದೇ ವ್ಯಕ್ತಿಯನ್ನು ನಾನು ಬಿಟ್ಟುಕೊಡಲ್ಲ. ಬಿಟ್ಟುಕೊಡೋ ಪ್ರಸಂಗ ಬರಲ್ಲ. ಅವರನ್ನು ರಕ್ಷಣೆ ಮಾಡೋ ತಾಕತ್ ನನಗೆ ಇದೆ. ಮಠಾಧಿಪತಿ ಸ್ವಾತಂತ್ರ್ಯ ನಲ್ಲ, ಈ ಮಾತು ನಾನು ಹೇಳಿದ್ದೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ ಪೇಮೆಂಟ್ ಸ್ವಾಮೀಜಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪೇಮೆಂಟ್ ಗಿರಾಕಿ ಎಂದು ನಾನು ನಾಮಪತ್ರ ವಾಪಸ್ ಪಡೆಯೋ ಮುಂಚೆ ಹೇಳಿದ್ದಾರೆ. ಅವರ ಲೇವಲ್ ರಾಜ್ಯಕ್ಕೆ ಗೊತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ ವಿರುದ್ದ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದರು.
ಅವರನ್ನ ಮಾತಾಡಸ್ತೀದಾರೆ, ಅವರು ಮಾತಾಡತಿಲ್ಲ, ಅವರ ಪಕ್ಷದ ವಿರುದ್ದವೇ ಮಾತಾಡ್ತಾರೆ. ಒಬ್ಬ ನಾಯಕನು ಅವರ ಬಾಯಿಗೆ ಲಗಾಮ್ ಹಾಕೋ ಕೆಲಸ ಮಾಡಿಲ್ಲ. ಯತ್ನಾಳದು ಬ್ರೇನ್ ಲೆಸ್ ಬಾಡಿ. ಹಣಕ್ಕಾಗಿ ಚುನಾವಣೆಗೆ ನಿಲ್ಲೋದು ಕೆಲವರು ಇರ್ತಾರೆ. ಆದ್ರೆ ನನಗೆ ಹಣದ ಅವಶ್ಯಕತೆ ಇಲ್ಲ. ಹಣದ ಆರೋಪ ಮಾಡಿದವರು, ಭೂಮಿ ಮೇಲೆ ಹಣ ಕೊಟ್ಟವರು ಇದ್ರೆ ತೋರಿಸಿ ಎಂದು ಸವಾಲು ಹಾಕಿದರು.
ಮುಸ್ಲಿಂ ವ್ಯಾಪಾರಸ್ಥರಿಂದ ಹುಬ್ಬಳ್ಳಿ ಬಂದ್: ಬಿಕೋ ಎನ್ನುತ್ತಿದೆ ಹುಬ್ಬಳ್ಳಿಯ ಮಾರ್ಕೆಟ್..!
ನೇಹಾ ಕೊಲೆಗಾರರ ಬಗ್ಗೆ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ: ಸ್ವಪಕ್ಷದ ಕಾರ್ಪೊರೇಟರ್ನಿಂದಲೇ ಆರೋಪ
ನೇಹಾ ಹತ್ಯೆ ಖಂಡಿಸಿ ಬಿಜೆಪಿ Protest: ಸಿದ್ರಾಮುಲ್ಲಾಖಾನ್‌ಗೆ ಧಿಕ್ಕಾರ ಅಂದ ಪ್ರತಿಭಟನಾಕಾರರು..