Saturday, July 5, 2025

Latest Posts

ಜೀವವನ್ನೇ ಕಸಿದುಕೊಂಡ ನೂಡಲ್ಸ್: ನಿಮ್ಮ ಮಕ್ಕಳಿಗೆ ಈ ತಿಂಡಿ ಕೊಡುವ ಮುನ್ನ ಹುಷಾರ್

- Advertisement -

Tamil Nādu: ತಮಿಳುನಾಡಿನಲ್ಲಿ ಆರ್ಡರ್ ಮಾಡಿ, ತರಿಸಿಕೊಂಡಿದ್ದ ನೂಡಲ್ಸ್ ತಿಂದು ಬಾಲಕಿ ಸಾವನ್ನಪ್ಪಿದ್ದಾಳೆ. ತಿರುಚ್ಚಿಯಲ್ಲಿ ಈ ಘಟನೆ ನಡೆದಿದ್ದು, ತಿರುವೆರುಂಪುರ್ ನ ಬಾಲಕಿ ಸ್ಟೆಫಿ ಜಾಕ್ವಲಿನ್ (15) ನೂಡಲ್ಸ್ ತಿಂದು ಸಾವನ್ನಪ್ಪಿದ್ದಾಳೆ.

ಈಕೆಯ ತಾಯಿ ರಾತ್ರಿಯ ಹೊತ್ತು ಈಕೆಗಾಗಿ ನೂಡಲ್ಸ್ ಆರ್ಡರ್ ಮಾಡಿ, ತರಿಸಿಕೊಟ್ಟಿದ್ದಾಳೆ. ರಾತ್ರಿ ನೂಡಲ್ಸ್‌ ತಿಂದು ಮಲಗಿದ ಮಗಳು, ಮರುದಿನ ಬೆಳಿಗ್ಗೆ ಎಷ್ಟು ಹೊತ್ತಾದರೂ ಎದ್ದಿಲ್ಲ. ಇದಾದ ಬಳಿಕ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಬಾಲಕಿ ಅದಾಗಲೇ ಮೃತಪಟ್ಟಿದ್ದಾಳೆದು ವೈದ್ಯರು ಹೇಳಿದ್ದಾರೆ.

ಬಳಿಕ ಈ ಬಗ್ಗೆ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಆಗ ಆಕೆ ನೂಡಲ್ಸ್ ತಿಂದ ಬಳಿಕ, ಸಾವನ್ನಪ್ಪಿದ್ದಾಳೆಂದು ತಿಳಿದು ಬಂದಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

- Advertisement -

Latest Posts

Don't Miss