ಹರಿದ್ವಾರದ ಮಂಗ್ಲೌರ್‌ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನಗೆ ಮೋದಿಯನ್ನ ಕಂಡ್ರೆ ಹೆದರಿಕೆಯಾಗಲ್ಲ, ಬದಲಾಗಿ ಅವರ ಸೊಕ್ಕನ್ನ ನೋಡಿ ನಗು ಬರುತ್ತದೆ. ಅವರು ತಮ್ಮೆಲ್ಲ ಸಮಯವನ್ನು ಕಾಂಗ್ರೆಸ್ಸಿಗಾಗಿ ಮೀಸಲಿಡುತ್ತಿದ್ದಾರೆಂದು ರಾಹುಲ್ ಹೇಳಿದ್ದಾರೆ.
ಅಲ್ಲದೇ, ಪಾರ್ಲಿಮೆಂಟ್‌ನಲ್ಲಿ ಭಾಷಣ ಮಾಡುವಾಗ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕಾಗಿ ಸಮಯ ವ್ಯರ್ಥ ಮಾಡುತ್ತಾರೆ. ಆದರೆ ನಾನು ಚೀನಾ ಬಗ್ಗೆ ಕೇಳಿರುವ ಪ್ರಶ್ನೆಗೆ ಮಾತ್ರ ಉತ್ತರಿಸುವುದಿಲ್ಲವೆಂದು ಹೇಳಿದ್ದಾರೆ. ರಾಹುಲ್ ಕೇಳುವುದಿಲ್ಲವೆಂದು ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದರ ಅರ್ಥವೇನು ಗೊತ್ತಾ..? ರಾಹುಲ್ ಈಡಿ, ಸಿಬಿಐ ಒತ್ತಡಕ್ಕೆಲ್ಲ ಮಣಿಯುವುದಿಲ್ಲವೆಂಬುದೇ ಇದರ ಅರ್ಥ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇವರ ಮಾತನ್ನು ನಾನು ಯಾಕೆ ಕೇಳಬೇಕು..? ಇವರು ನೋಟ್ ಬ್ಯಾನ್ ಮಾಡಿ, ಜಿಎಸ್‌ಟಿ ಹೆಚ್ಚಿಸಿ, ಸಣ್ಣ ವ್ಯಾಪಾರಿಗಳು, ಮಧ್ಯಮ ವರ್ಗದ ವ್ಯಾಪಾರಿಗಳ ವ್ಯಾಪಾರವನ್ನ ಹಾಳುಮಾಡಿದ್ದಾರೆ. ಕಾರ್ಮಿಕರ, ರೈತರ ಜೀವನವನ್ನ ಹಾಳು ಮಾಡಿದ್ದಾರೆ. ನಾನು ಮೋದಿಯನ್ನು ನೋಡಿ ಹೆದರಲ್ಲ, ಬದಲಾಗಿ ಅವರ ಸೊಕ್ಕನ್ನ ನೋಡಿ ನಗುತ್ತೇನೆಂದು ಹೇಳಿದ್ದಾರೆ.
ಪಾರ್ಲಿಮೆಂಟ್‌ನಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಭಾರತ- ಚೀನಾ ಗಡಿ ಗಲಾಟೆ ಬಗ್ಗೆ ಪ್ರಶ್ನಿಸಿತ್ತು. ಅದಕ್ಕೆ ಪ್ರಧಾನಿ ಮೋದಿ, ಹೇಳಬೇಕಾದ ವಿವರಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯವು ಮಾಹಿತಿ ನೀಡಿದ್ದಾರೆ. ನಾನು ಮತ್ತೆ ಆ ವಿಷಯಗಳ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಸದನದಲ್ಲಿ ಕುಳಿತುಕೊಳ್ಳದ, ಇಲ್ಲಿನ ಮಾತನ್ನ ಕೇಳಿಸಿಕೊಳ್ಳದ ವ್ಯಕ್ತಿಗೆ ನಾನು ಏನೆಂದು ಉತ್ತರಿಸಲಿ..? ಎಂದು ಮೋದಿ ರಾಹುಲ್ ಬಗ್ಗೆ ಮಾತನಾಡಿದ್ದರು. ಇಂದು ರಾಹುಲ್ ಇದೇ ವಿಷಯವನ್ನಿಟ್ಟುಕೊಂಡು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.