Saturday, July 27, 2024

Latest Posts

ಆಮೆಯ ಪೂಜೆ ಮಾಡುವುದರಿಂದ ಆಗುವ ಲಾಭಗಳೇನು..?

- Advertisement -

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು, ಸಾಲದ ಸಮಸ್ಯೆಗಳು ಮತ್ತು ಋಣಾತ್ಮಕ ಶಕ್ತಿಗಳು ಹೀಗೆ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳು ಇರುತ್ತದೆ, ಅದರಲ್ಲಿ ಮುಖ್ಯವಾಗಿ ಹಣಕಾಸಿನ ಸಮಸ್ಯೆ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಇರುತ್ತದೆ. ಮನೆಯಲ್ಲಿರುವ ಹಣಕಾಸಿನ ಸಮಸ್ಯೆ ನಿವಾರಣೆಯಾಗಬೇಕು, ಸಾಲದ ಸಮಸ್ಯೆಗಳು ದೂರವಾಗಬೇಕು, ಮನೆಯಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಬೇಕು ಎಂದರೆ ವಿಷ್ಣುವಿನ ಸ್ವರೂಪವಾದ ಆಮೆಯನ್ನು ಪೂಜಿಸಬೇಕು. ಆಮೆ ವಿಷ್ಣುವಿನ ಸ್ವರೂಪವಾಗಿದ್ದು ಇದನ್ನು ಪೂಜಿಸುವುದರಿಂದ ಮನೆಯಲ್ಲಿ ಇರುವ ಸಮಸ್ಯೆಗಳು ನಿವಾರಣೆಯಾಗುವುದಲ್ಲದೆ ಹಣಕಾಸಿನ ಸಮೃದ್ಧಿಯು ಕೂಡ ಉಂಟಾಗುತ್ತದೆ. ಹಾಗಾದರೆ ಆಮೆಯನ್ನು ಯಾವ ರೀತಿಯಾಗಿ ಪೂಜಿಸಿದರೆ ಹಣಕಾಸಿನ ಸಮೃದ್ಧಿ ನೆಲೆಸುತ್ತದೆ ಎಂದು ನೋಡೋಣ.

ಮೊದಲು ನೀರನ್ನು ತುಂಬಿಸಲು ನೆರವಾಗುವಂತಹ ರೀತಿಯಲ್ಲಿ ತಟ್ಟೆಯನ್ನು ತೆಗೆದುಕೊಳ್ಳಬೇಕು, ಅದಕ್ಕೆ ಅರ್ಧ ಭಾಗದಷ್ಟು ನೀರನ್ನು ತುಂಬಿ ಆ ನೀರಿನ ಒಳಗಡೆ ಒಂದು ರೂಪಾಯಿ ನಾಣ್ಯ ಮತ್ತು ಒಂದು ಸಣ್ಣದಾದ ಕರ್ಪೂರವನ್ನು ಹಾಕಬೇಕು, ನಂತರ ಇದರ ಮೇಲೆ ಆಮೆಯ ಪ್ರತಿಮೆಯನ್ನು ಇಡಬೇಕು. ಹೀಗೆ ಇಟ್ಟ ನಂತರ ಅದಕ್ಕೆ ಗಂಧ ಅರಿಶಿನ-ಕುಂಕುಮವನ್ನು ಹಚ್ಚಿ, ನಂತರ ತುಳಸಿ ದಳವನ್ನು ಇಡಬೇಕು, ಹೂವಿನಿಂದ ಅಲಂಕಾರವನ್ನು ಮಾಡಬೇಕು, ಹೀಗೆ ಮಾಡಿದ ನಂತರ ಇದನ್ನು ದೇವರ ಮನೆಯಲ್ಲಿ ಉತ್ತರ ದಿಕ್ಕಿಗೆ ಅಥವಾ ಈಶಾನ್ಯ ದಿಕ್ಕಿಗೆ ಇಡಬಹುದು. ನಂತರ ಇದ ಕ್ಕೂ ಕೂಡ ಪೂಜೆ-ಪುನಸ್ಕಾರಗಳನ್ನು ಸಲ್ಲಿಸುತ್ತಾ ಬರಬೇಕು. ಈ ರೀತಿಯಾಗಿ ವಿಷ್ಣು ಸ್ವರೂಪವಾದ ಆಮೆಯನ್ನು ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ರೀತಿಯ ಕಷ್ಟಗಳು ನಿವಾರಣೆಯಾಗುತ್ತವೆ. ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳ ದೂರವಾಗುತ್ತವೆ. ಮನೆಯಲ್ಲಿ ಹಣಕಾಸಿನ ಸಮೃದ್ಧಿ ಆರ್ಥಿಕ ಸಮೃದ್ಧಿ ಎನ್ನುವುದು ನಡೆಸುತ್ತದೆ.

ಅಷ್ಟೇ ಅಲ್ಲದೆ ಇದನ್ನು ಮಕ್ಕಳ ವಿದ್ಯಾಭ್ಯಾಸ ಮತ್ತು ಜ್ಞಾನದ ವೃದ್ಧಿಗಾಗಿ ಮಕ್ಕಳ ರೂಮಿನಲ್ಲಿ ಅಥವಾ ಮಕ್ಕಳು ಓದುವ ಟೇಬಲ್ ಮೇಲೆ ಇಡುವುದರಿಂದ ಮಕ್ಕಳ ಏಕಾಗ್ರತೆ ಮತ್ತು ಜ್ಞಾನ ಶಕ್ತಿ ವೃದ್ಧಿಯಾಗುತ್ತದೆ.

ಹಾಗಾಗಿ ಯಾರ ಮನೆಯಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗಿ ಇದೆಯೋ ಅವರು ಈಗಲೇ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು ನಿಯಮಬದ್ಧವಾಗಿ ನಂಬಿಕೆ ಇಟ್ಟು ಮಾಡಿದಂತಹ ಯಾವ ಕೆಲಸಗಳು ಕೂಡ ಫಲವನ್ನು ಕೊಡದೆ ಇರುವುದಿಲ್ಲ ಹಾಗಾಗಿ ನಂಬಿಕೆ ಮುಖ್ಯ, ಶ್ರೀಕೃಷ್ಣಪರಮಾತ್ಮ ಹೇಳುವಂತೆ ಜೀವನದಲ್ಲಿ ನಾವು ಶ್ರಮವನ್ನು ಪಡಬೇಕು ಫಲವನ್ನು ದೇವರಿಗೆ ಬಿಡಬೇಕು.

- Advertisement -

Latest Posts

Don't Miss