ಐದಲ್ಲ.. ಹತ್ತಲ್ಲ.. ಬರೋಬ್ಬರಿ 30 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ MLA ಚನ್ನಾರೆಡ್ಡಿ..?

Yadagiri News: ಯಾದಗಿರಿ : ಯಾದಗಿರಿ ಪಿಎಸ್‌ಐ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ PSI ಕುಟುಂಬಸ್ಥರು ಕಾಂಗ್ರೆಸ್ ಶಾಸಕರೊಬ್ಬರ ವಿರುದ್ಧ, PSI ಪರಶುರಾಮ ಕುಟುಂಬಸ್ಥರು ಇದೀಗ ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪ ಮಾಡುತ್ತಿದ್ದಾರೆ.

ಹೌದು ಯಾದಗಿರಿ PSI ಪರಶುರಾಮ್ ಸಾವಿಗೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ವಿರುದ್ಧ ಕುಟುಂಬಸ್ಥರು ಇದೀಗ ಆರೋಪ ಮಾಡುತ್ತಿದ್ದಾರೆ. ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. ಕಳೆದ ವರ್ಷವಷ್ಟೇ 30 ಲಕ್ಷ ರೂಪಾಯಿ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡಿದ್ದ ಯಾದಗಿರಿ ನಗರ ಠಾಣೆಗೆ ಪೋಸ್ಟಿಂಗ್ ಹಾಕಿಸಿಕೊಂಡಿದ್ದ.

ಎಂಪಿ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ತಿಂಗಳು ವರ್ಗಾವಣೆಯಾಗಿದ್ದ. ನೀತಿ ಸಂಹಿತೆ ಮುಗಿದ ಕೂಡಲೇ ಮತ್ತೆ ಠಾಣೆಗೆ ವಾಪಸ್ ಆಗಿದ್ದಾನೆ. ಇದರಿಂದ ಸಾಲದ ಸುಳಿಗೆ ಸಿಲುಕಿದ್ದ ಪಿಎಸ್‌ಐ ಪರಶುರಾಮ್. ಮತ್ತೆ ನಿಯಮ ಬಾಹಿರವಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಒಂದು ವರ್ಷ ಪೂರೈಸುವ ಮೊದಲೇ ವರ್ಗಾವಣೆಯಾಗಿತ್ತು. ಇದರಿಂದ ಪಿಎಸ್‌ಐ ಪರಶುರಾಮ್ ಒತ್ತಡಕ್ಕೆ ಒಳಗಾಗಿದ್ದ.ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಇದೀಗ ಶಾಸಕ ಚೆನ್ನ ರೆಡ್ಡಿ ಪಾಟೀಲ್ ವಿರುದ್ಧ ಲಂಚಕ್ಕೆ ಬೇಡಿಕೆಟ್ಟ ಆರೋಪ ಕೇಳಿ ಬಂದಿದೆ.

About The Author