Astrology:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ಪ್ರತಿ ತಿಂಗಳು ತನ್ನ ಸ್ಥಳವನ್ನು ಬದಲಾಯಿಸುತ್ತದೆ, ನವೆಂಬರ್ ತಿಂಗಳಲ್ಲಿ 5ಗ್ರಹಗಳು ತನ್ನ ಸ್ಥಾನವನ್ನು ಬದಲಾಯಿಸುತ್ತದೆ, ಇದು ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ…? ಎಂದು ನೋಡೋಣ .
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವೆಂಬರ್ ತಿಂಗಳು ಅತ್ಯಂತ ಮಹತ್ವ ಎಂದು ಹೇಳಬಹುದು .ಏಕೆಂದರೆ ಈ ತಿಂಗಳಲ್ಲಿ 5 ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಈ ಪ್ರಕ್ರಿಯೆಯು ನವೆಂಬರ್11 ರಿಂದ ನವೆಂಬರ್24 ರವರೆಗೆ ನಡೆಯುತ್ತದೆ. ನವೆಂಬರ್11 ರಂದು ಶುಕ್ರ, ನವೆಂಬರ್13 ರಂದು ಮಂಗಳ ಮತ್ತು ಬುಧ, ನವೆಂಬರ್16 ರಂದು ಸೂರ್ಯ ಮತ್ತು ನವೆಂಬರ್24 ರಂದು ಗುರುವು ಮೀನ ರಾಶಿಯನ್ನು ಪ್ರವೇಶಿಸಲಿದೆ. ಈ ರಾಶಿಯ ರೂಪಾಂತರವು ಯಾವ ರಾಶಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ ತಿಂಗಳು ಕನ್ಯಾ ರಾಶಿಯವರಿಗೆ ಅವರು ಊಹಿಸದಷ್ಟು ಬೆಳವಣಿಗೆಯನ್ನು ತರುತ್ತದೆ. ಸೂರ್ಯ ಮತ್ತು ಗುರು ಉತ್ತಮ ಸ್ಥಾನದಲ್ಲಿರುವುದು ಲಾಭದಾಯಕ. MNC ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಲಾಭ ದಾಯಕವಾಗಿದೆ .
ಸಿಂಹ ರಾಶಿಯವರಿಗೆ ಶುಕ್ರನ ಪ್ರವೇಶ ಉತ್ತಮ ಲಾಭವನ್ನು ತರುತ್ತದೆ. ಶುಕ್ರನು ವೃಶ್ಚಿಕ ರಾಶಿಗೆ ಪ್ರವೇಶಿಸುವುದು ಲಾಭದಾಯಕ. ಮತ್ತು ಮಂಗಳನ ಪ್ರವೇಶ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಈ ರಾಶಿಯವರಿಗೆ ವ್ಯವಹಾರದಲ್ಲಿ ಬುಧನು ಲಾಭವನ್ನು ನೀಡುತ್ತಾನೆ. ವ್ಯಾಪಾರ ಆರಂಭಿಸಲು ಇದು ಸೂಕ್ತ ಸಮಯ.
ನವೆಂಬರ್ ತಿಂಗಳಲ್ಲಿ ಕರ್ಕಾಟಕ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಸೂರ್ಯ ಗೋಚರ ಮತ್ತು ಗುರುವಿನ ವಕ್ರದೃಷ್ಟಿ ಶುಭ ಫಲಿತಾಂಶಗಳನ್ನೂ ನೀಡುತ್ತಾನೆ. ಈ ಸಮಯದಲ್ಲಿ ವ್ಯಾಪಾರವು ಲಾಭವನ್ನು ತರಬಹುದು. ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾ ಅನುಕೂಲಕರವಾಗಿದೆ, ಹೊಸ ಅವಕಾಶಗಳು ದೊರೆಯಲಿವೆ, ಅದರೊಂದಿಗೆ ವೃತ್ತಿಯೂ ಬೆಳೆಯುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯ ಅಧಿಪತಿಯಾದ ಗುರುವಿನ ವಕ್ರದೃಷ್ಟಿ ಕಾರಣದಿಂದಾಗಿ ,ಈ ರಾಶಿಯವರಿಗೆ ಬಹಳಷ್ಟು ಲಾಭ ದಾಯಕವಾಗಿದೆ. ಸಂತಾನವಿಲ್ಲದೆ ಇರುವವರಿಗೆ ಸಂತಾನವಾಗುವ ಸಾಧ್ಯತೆ ಇದೆ. ಮತ್ತು ಸೂರ್ಯನು ಲಾಭವನ್ನು ತಂದು ಕೊಡುತ್ತಾನೆ. ಈ ಅವಧಿಯಲ್ಲಿ ಅವರು ಯಶಸ್ಸನ್ನು ಪಡೆಯುತ್ತಾರೆ. ಶುಕ್ರನ ಪ್ರವೇಶ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭಗಳನ್ನು ತಂದು ಕೊಡುತ್ತಾನೆ .
ಜ್ಯೋತಿಷ್ಯದ ಪ್ರಕಾರ ಭಾನುವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ…?
ಜ್ಯೋತಿಷ್ಯದ ಪ್ರಕಾರ ಶನಿವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?
ಜ್ಯೋತಿಷ್ಯದ ಪ್ರಕಾರ ಶುಕ್ರವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?