ಸರ್ಬಿಯಾ: ನಿರೀಕ್ಷೆಯಂತೆ ಅಗ್ರ ಟೆನಿಸ್ ಆಟಗಾರ ನವೋಕ್ ಜೋಕೊವಿಕ್ ಮುಂಬರುವ ಪ್ರತಿಷ್ಠಿತ ಯುಎಸ್ ಓಪನ್ ಟೂರ್ನಿ ಆಡುತ್ತಿಲ್ಲಘಿ ಎಂದು ತಿಳಿಸಿದ್ದಾರೆ.
ಗುರುವಾರ ಟ್ವೀಟರ್‍ನಲ್ಲಿ ಈ ಬಾರಿ ಬೇಸರಗೊಂಡು ಯುಎಸ್ ಓಪನ್ ಆಡಲು ನ್ಯೂಯಾರ್ಕ್‍ಗೆ ಹೋಗುತ್ತಿಲ್ಲ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾಗದಳು. ನನ್ನ ಸಹ ಆಟಗಾರರಿಗೆ ಶುಭಾಶಯಗಳು.
ನಾನು ಸಕಾರಾತ್ಮಕವಾಗಿರುತ್ತೇನೆ. ಅವಕಾಶಕ್ಕಾಗಿ ಕಾಯುತ್ತಿರುತ್ತೇನೆ. ಟೆನಿಸ್ ಲೋಕದಲ್ಲಿ ನಿಮ್ಮ ನೋಡುತ್ತೇನೆ ಎಂದಿದ್ದಾರೆ.
ಲಸಿಕೆ ಹಾಕಿಕೊಳ್ಳದವರಿಗೆ ಅಮೆರಿಕದಲ್ಲಿ ನಿರ್ಬಂಧ
ಲಸಿಕೆ ಹಾಕಿಸಿಕೊಳ್ಳದ ವಿದೇಶಿಯರಿಗೆ ಅಮರಿಕ ಅಥವಾ ಕೆನಡಾ ದೇಶಗಳಲ್ಲಿ ಪ್ರವೇಶವಿಲ್ಲ. ಈ ಹಿಂದೆ ಟೆನಿಸ್ ಅಸೋಸಿಯೇಷನ್ ಲಸಿಕೆ ಹಾಕಿಕೊಳ್ಳದ ಆಟಗಾರರು ಭಾಗವಹಿಸಬಹುದೆಂದು ಹೇಳಿತ್ತು.
ಇದೀಗ ತನ್ನ ನಿಯಮವನ್ನು ಬದಲಿಸಿಕೊಂಡು ಸರ್ಕಾರದ ನಿಯಮಗಳನ್ನು ಪಾಲಿಸುವುದಾಗಿ ಹೇಳಿದೆ. ಇದೀಗ ಜೋಕೊವಿಕ್ ಯುಎಸ್ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ.