Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಎಲ್ಲವನ್ನೂ ಚುನಾವಣೆ ದೃಷ್ಟಿಯಿಂದ ನೋಡ್ತಾ ಬಂದಿದ್ದಾರೆ ಎಂದು ಹೇಳಿದರು.
ಇಷ್ಟು ದಿನ ರಾಮ ಇಲ್ಲ ಅಂದರೂ,ಅಲ್ಪ ಸಂಖ್ಯಾತರ ಒಲೈಕೆ ಮಾಡಿದ್ರು. ಬರೀ ಸಿದ್ದರಾಮಯ್ಯ,ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಅಷ್ಟೆ ಅಲ್ಲ. ಇವರ ತಾತ ಕೂಡಾ ಸೋಮನಾಥ ದೇವಾಲಯಕ್ಕೆ ಹೋಗಿರಲಿಲ್ಲ. ದೇವಾಲಯ ಆಗಬಾರದೆಂದು ಹೇಳಿದ್ರು. ಆ ವಂಶಸ್ಥರು,ಹಾಗೂ ಅವರು ಹಿಂಬಾಲಕರಿಂದ ಹೆಚ್ಚು ನೀರಿಕ್ಷೆ ಮಾಡಲು ಸಾಧ್ಯ ಇಲ್ಲ. ಅವರು ಲಬೋ ಲಬೋ ಹೊಯಕೊಂಡರು,ಜನ ಅವರ ಮಾತು ಕೇಳಲ್ಲ ಎಂದು ಬೆಲ್ಲದ್ ಹೇಳಿದ್ದಾರೆ.
ಸಿದ್ದರಾಮಯ್ಯ ಜೈ ಶ್ರೀರಾಮ್ ಘೋಷಣೆ ಕೂಗಿದ ವಿಚಾರದ ಬಗ್ಗೆ ಮಾತನಾಡಿ ಬೆಲ್ಲದ್, ಇವತ್ತು ದೇಶದ ವಾತಾವರಣ ನೋಡಿದ್ದಾರೆ. ಹೀಗಾಗಿ ಜೈ ಶ್ರೀರಾಮ್ ಅಂದಿದ್ದಾರೆ. ಇನ್ನಷ್ಟು ದಿನ ಹೋದ್ರೆ ರಾಮನ ಗುಡಿಯಲ್ಲಿ ಬಂದು ಕಸ ಹೊಡಿಯೋಕು ಬರ್ತಾರೆ ಎಂದು ಹೇಳುವ ಮೂಲಕ, ಸಿದ್ದರಾಮಯ್ಯ ಜೈ ಶ್ರೀರಾಮ್ ಘೋಷಣೆಗೆ ಅರವಿಂದ್ ಬೆಲ್ಲದ್ ವ್ಯಂಗ್ಯವಾಡಿದ್ದಾರೆ.
ಸಾಂಘವಾಗಿ ನೆರವೇರಿದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ನಮೋ ಸಾರಥ್ಯದಲ್ಲಿ ನೆರವೇರಿದ ಪೂಜೆ
‘ಇನ್ನು ಮುಂದೆ ಅಯೋಧ್ಯೆಯಲ್ಲಿ ಫೈರಿಂಗ್ ಸದ್ದು ಕೇಳುವುದಿಲ್ಲ, ರಾಮಕೀರ್ತನೆ ಕೇಳುತ್ತದೆ’