Uttara Pradesh: ಉತ್ತರಪ್ರದೇಶದಲ್ಲಿ ಮೊದಲೆಲ್ಲ ಭಯೋತ್ಪಾದಕರು, ಮಾಫಿಯಾ, ದರೋಡೆ, ಅತ್ಯಾಚಾರ ಮಾಡುವವರ ಮನೆಯ ಮೇಲೆ ಬುಲ್ಡೋಜರ್ ಬಾಬಾ, ಬುಲ್ಡೋಜರ್ ನುಗ್ಗಿಸುತ್ತಿದ್ದರು. ಇದೀಗ ಹೊಸ ರೂಲ್ಸ್ ಜಾರಿಗೆ ಬರಲಿದ್ದು, ಪ್ರಶ್ನೆ ಪತ್ರಿಕೆ ಲೀಕ್ ಮಾಡುವವರು ಮತ್ತು ಅಂಥ ಪ್ರಕರಣದಲ್ಲಿ ಯಾಾರ್ಯಾರು ಭಾಗಿಯಾಗುತ್ತಾರೋ, ಅಂಥವರ ಮನೆ ಮೇಲೆ ಬುಲ್ಡೋಜರ್ ಪ್ರಹಾರ ನಡೆಯಲಿದೆ.
ಇತ್ತೀಚೆಗೆ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆಗಿ, ಹಲವು ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿರುವ ಹಿನ್ನೆಲೆ ಉತ್ತರಪ್ರದೇಶದಲ್ಲಿ ಈ ರೀತಿ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ, ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಬಂದಿದ್ದಾರೆ. ಯಾರು ಪ್ರಶ್ನೆ ಪತ್ರಿಕೆ ಲೀಕ್ ಮಾಡುತ್ತಾರೋ, ಅಥವಾ ಆ ಕೆಲಸಕ್ಕೆ ಸಾಥ್ ಕೊಡುತ್ತಾರೋ, ಅಂಥವರಿಗೆ ದಂಡ, ಜೈಲು ಶಿಕ್ಷೆ ಜೊತೆಗೆ, ಮನೆ ಮೇಲೆ ಬುಲ್ಡೋಜರ್ ಹತ್ತಿಸುವ ಕಾರ್ಯಕ್ರಮವೂ ನಡೆಯುತ್ತದೆ.
ಈ ಮೊದಲು ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಸಿಎಂ ಆದಾಗ, ಭಯೋತ್ಪಾದಕರು ಮತ್ತು ಕಲ್ಲು ತೂರಾಟ ನಡೆಸುವ ಕಿಡಿಗೇಡಿಗಳು, ಅತ್ಯಾಚಾರಿಗಳ ಮನೆ ಮೇಲೆ ಬುಲ್ಡೋಜರ್ ಹತ್ತಿಸಿ, ಮನೆ ಧ್ವಂಸ ಮಾಡಿದ್ದರು. ಹಾಗಾಗಿ ಅವರನ್ನು ಬುಲ್ಡೋಜರ್ ಬಾಬಾ ಅಂತಲೇ ಕರೆಯಲಾಗುತ್ತದೆ. ಅಲ್ಲದೇ, ಯೋಗಿ ತೆಗೆದುಕೊಂಡ ಈ ನಿರ್ಧಾರದಿಂದ, ಉತ್ತರಪ್ರದೇಶದಲ್ಲಿ ಕ್ರೈಂ ಕಡಿಮೆಯಾಗಿದೆ.