Bengaluru News: ಇನ್ನು ಮುಂದೆ ಬೆಂಗಳೂರಿನ ವಿಧಾನಸೌಧಕ್ಕೆ ಹೋಗುವಾಗ, ಬೇಕಾಬಿಟ್ಟಿ ಪಾಸ್ ತೆಗೆದುಕೊಂಡು ಹೋಗುವಂತಿಲ್ಲ. ಕ್ಯೂ ಆರ್ ಕೋಡ್ ಇರುವಂಥ ಪಾಸ್ ಬಳಸಿಯೇ, ವಿಧಾನಸೌಧ ಪ್ರವೇಶಿಸಬೇಕು ಎಂದು ಗೃಹಮಂತ್ರಿಗಳಾದ, ಜಿ.ಪರಮೇಶ್ವರ್ ಹೇಳಿದ್ದಾರೆ.
ವಿಧಾನಸೌಧದಲ್ಲಿರುವ ಬ್ಯಾಗೇಜ್ ಸ್ಕ್ಯಾನರ್ ಹಾಳಾಗಿದ್ದು, ಸಿಎಂ ಹಣ ಬಿಡುಗಡೆ ಮಾಡಿದ ಬಳಿಕ, ಈಗ ಬ್ಯಾಗೇಜ್ ಸ್ಕ್ಯಾನರ್ ಖರೀದಿಸಲಾಗಿದೆ. ಇದನ್ನು ಇಂದು ಗೃಹಸಚಿವ ಜಿ.ಪರಮೇಶ್ವರ್ ಚೆಕ್ ಮಾಡಿದ್ದು, ಇನ್ನು ಮುಂದೆ ಯಾವುದ್ಯಾವುದೋ ಪಾಸ್ ತೆಗೆದುಕೊಂಡು ವಿಧಾನಸೌಧ ಪ್ರವೇಶಿಸಲು ಅನುಕೂಲವಿಲ್ಲ. ಬದಲಾಗಿ ಕ್ಯೂ ಆರ್ ಕೋಡ್ ಇರುವ ಪಾಸ್ ಬಳಸಿಯೇ, ವಿಧಾನಸೌಧ ಪ್ರವೇಶಿಸಬಹುದು ಎಂದಿದ್ದಾರೆ.
ಅಲ್ಲದೇ, ಇನ್ನು ಮುಂದೆ ವಿಧಾನಸೌಧದ ಭದ್ರತೆಯನ್ನು ಇನ್ನೂ ಹೆಚ್ಚು ಮಾಡುತ್ತೇವೆ. ಕಳೆದ ಬಾರಿಯ ಸಮಾವೇಶದಲ್ಲಿ ಬ್ಯಾಗೇಜ್ ಸ್ಕ್ಯಾನರ್ ಇರಲಿಲ್ಲ. ಈ ಬಾರಿ ಸಮಾವೇಶದಲ್ಲಿ 3ರಿಂದ 4 ಕೋಟಿ ರೂಪಾಯಿ ಖರ್ಚು ಮಾಡಿ, ನಾಾಲ್ಕೂ ಕಡೆಗಳಲ್ಲಿ ಬ್ಯಾಗೇಜ್ ಸ್ಕ್ಯಾಮರ್ ಅಳವಡಿಸಿದ್ದೇವೆ ಎಂದು ಗೃಹಮಂತ್ರಿ ಹೇಳಿದ್ದಾರೆ.
ಪ್ರವಾಸಿಯ ಕಳೆದುಹೋಗಿದ್ದ ವಾಚ್ ಹಿಂದಿರುಗಿಸಿದ ಭಾರತೀಯ ಹುಡುಗ: ದುಬೈ ಪೊಲೀಸರಿಂದ ಸನ್ಮಾನ
ಕೊ* ಪ್ರಕರಣಗಳಲ್ಲಿ ಸರ್ಕಾರದ ಲೋಪ ಹೆಚ್ಚಾಗಿ ಕಾಣುತ್ತಿದೆ: ಶಾಸಕ ಟೆಂಗಿನಕಾಯಿ