Thursday, May 1, 2025

Latest Posts

ಎನ್‌ಆರ್‌ಜಿ ಕೆಲಸ ಪ್ರತಿ ವರ್ಷ ಮಾರ್ಚ್‌ 31ರ ಒಳಗೆ ಪೂರ್ಣಗೊಳಿಸಬೇಕು : ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚನೆ

- Advertisement -

Political News: ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಮನರೇಗಾ ಅಡಿಯಲ್ಲಿ ಕೈಗೊಳ್ಳುವ ಎಲ್ಲ ಕಾಮಗಾರಿಗಳನ್ನು 2025ರ ಮಾರ್ಚ್‌ 31ರ ಒಳಗೆ ಪೂರ್ಣಗೊಳಿಸುವಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯು ಎಲ್ಲ ಜಿಲ್ಲಾ ಪಂಚಾಯತ್‌ನ ಸಿಇಒಗಳಿಗೆ ಸೂಚನೆ ನೀಡಿದೆ. ಈ ಮೂಲಕ ಯಾವುದೇ ಕಾಮಗಾರಿಗಳನ್ನು ವರ್ಷಾಂತ್ಯಕ್ಕೆ ಕೈಗೊಂಡು ಮುಂಬರುವ ಆರ್ಥಿಕ ವರ್ಷದಲ್ಲಿ ಅವುಗಳನ್ನು ಮುಂದುವರೆಸುವುದನ್ನು ಇಲಾಖೆಯು ನಿರ್ಬಂಧಿಸಿದೆ. ಅಲ್ಲದೆ ಯಾವುದೇ ಕಾಮಗಾರಿಗಳನ್ನು ಆರಂಭಿಸಬೇಕಾದಲ್ಲಿ ಅವುಗಳು ಮಾರ್ಚ್‌ 31ರ ಒಳಗೆಯೇ ಪೂರ್ಣಗೊಳಿಸಲು ಸಾಧ್ಯವೇ? ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.

ಅಲ್ಲದೆ ಕಾಮಗಾರಿಯನ್ನು ಇಲಾಖೆಯು ನಿಗದಿಪಡಿಸಿದ ಅವಧಿಯೊಳಗೆ ಮುಗಿಸಲು ಅವಕಾಶವಿದ್ದಲ್ಲಿ ಮಾತ್ರ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಬೇಕು. ಇನ್ನೂ ಅಂತಿಮ ಹಂತಗಳಲ್ಲಿ ಆರಂಭಿಸಿರುವ ಕೆಲಸಗಳನ್ನು ಸಾಫ್ಟ್‌ವೇರ್‌ನಲ್ಲಿ ಫ್ರೀಜ್‌ ಮಾಡಿ ಮುಂದುವರೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆಯುಕ್ತರು ತಮ್ಮ ಸೂಚನೆಯಲ್ಲಿ ಹೇಳಿದ್ದಾರೆ. ಇನ್ನೂ ಇಲಾಖೆಯ ಈ ನಿರ್ಧಾರಕ್ಕೆ ರಾಜ್ಯದ ಗ್ರಾಮ ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ಪಿಡಿಒಗಳಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ಅಲ್ಲದೆ ಈ ಆದೇಶವನ್ನು ವಾಪಸ್‌ ಪಡೆಯವಂತೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯ ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್‌ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಇನ್ನೂ ರಾಜ್ಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ವಾರದ ಅವರು ಗ್ರಾಮೀಣಾಭಿವೃದ್ಧಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಈ ಎರಡೂ ಸಂಘಟನೆಗಳ ವತಿಯಿಂದ ನಿರ್ಧಾರಕ್ಕೆ ಅಕ್ರೋಶ ವ್ಯಕ್ತವಾಗಿದೆ.

ಪ್ರಸ್ತುತ ಪದ್ಧತಿಗೆ ಕೇಂದ್ರದ ಬೇಸರ..

ಅಂದಹಾಗೆ ಈ ಮನರೇಗಾ ಯೋಜನೆಯಡಿಯಲ್ಲಿ ಅನುಮೋದಿತ ಕ್ರಿಯಾ ಯೋಜನೆಯ ಕಾಮಗಾರಿಗಳನ್ನು ಆಯಾ ವರ್ಷದಲ್ಲಿಯೇ ಪೂರ್ಣಗೊಳಿಸಬೇಕಾಗಿರುತ್ತದೆ. ಆದರೆ ಪ್ರತಿ ವರ್ಷದಲ್ಲಿ ಕೆಲವು ಜಿಲ್ಲಾ ಪಂಚಾಯತಿಗಳು ಒಂದೇ ವರ್ಚದಲ್ಲಿ ಹೆಚ್ಚಿನ ಸಲ ಅತೀ ಹೆಚ್ಚಿನ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡುತ್ತವೆ ಈ ವಿಚಾರಕ್ಕೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಬೇಸರವನ್ನು ಹೊರಹಾಕಿದೆ. ಅಲ್ಲದೆ ಪ್ರತಿ ವರ್ಷದ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ಸಮುದಾಯಗಳ ಕಾಮಗಾರಿಗಳನ್ನು ಕಡೆಗಣಿಸಿ ಕೇವಲ ಒಂದು ಮಾನವ ದಿನ ಸೃಷ್ಟಿಸಿ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಮಾಡಿ ಮತ್ತೇ ಅವುಗಳನ್ನೇ ಮುಂದಿನ ವರ್ಷಕ್ಕೆ ಅನುಷ್ಠಾನಗೊಳಿಸುವದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಸಚಿವಾಲಯವು ಆಕ್ಷೇಪ ವ್ಯಕ್ತಪಡಿಸಿದೆ.

- Advertisement -

Latest Posts

Don't Miss