ಅವಘಡಗಳಲ್ಲಿ ಜನರ ಪ್ರಾಣ ರಕ್ಷಿಸಲು ಅಣುಕು ಪ್ರದರ್ಶನಗಳು ಸಹಕಾರಿ: ಡಾ: ಹೆಚ್.ಎನ್ ಗೋಪಾಲ ಕೃಷ್ಣ

ಯಾವುದಾದರೂ ಅವಘಡಗಳು ಸಂಭವಿಸಿದಾಗ ಜನರ ಪ್ರಾಣ ರಕ್ಷಿಸಲು ಅಣುಕು‌ ಪ್ರದರ್ಶನಗಳು ಸಹಕಾರಿ ಎಂದು ಜಿಲ್ಲಾಧಿಕಾರಿ ಡಾ ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ ಕೊಪ್ಪದ ಎನ್ ಎಸ್.ಎಲ್ ಸಕ್ಕರೆ ಕಾರ್ಖಾನೆಯಲ್ಲಿ‌ ಆಯೋಜಿಸಲಾಗಿದ್ದ ರಾಸಾಯನಿಕ ವಿಪತ್ತು ಸನ್ನಿವೇಶವನ್ನು ಆಧರಿಸಿ ಅಣುಕು ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿದರು.

ಪೇರಲೆ ಹಣ್ಣಿನ ಸೇವನೆ ಮಾಡಿದ್ರೆ ಆರೋಗ್ಯಕ್ಕಾಗಲಿದೆ ಈ ಲಾಭಗಳು..

ಕಾರ್ಖಾನೆಗಳಲ್ಲಿ ಬೆಂಕಿ‌ ಅವಘಡಗಳು ಯಾವ ಸಮಯದಲ್ಲಿ,ಯಾವ ಸಂದರ್ಭದಲ್ಲಿ ನಡೆಯುತ್ತದೆ ಹೇಳಲು ಸಾಧ್ಯವಿಲ್ಲ. ಅದರೆ ಜಿಲ್ಲಾಡಳಿತದ ವಿಪತ್ತು ನಿರ್ವಾಹಣಾ ಘಟಕಕ್ಕೆ ಮಾಹಿತಿ ತಲುಪಿಸಿದರೆ ಅಗ್ನಿಶಾಮಕ ದಳ, ಪೊಲೀಸ್, ಆರೋಗ್ಯ ಹಾಗೂ ಇನ್ನಿತರೆ ಇಲಾಖೆಗಳು ಒಟ್ಟಿಗೆ ಕಾರ್ಯನಿರ್ವಹಿಸಿ ಪ್ರಾಣ ಹಾಗೂ ಆಸ್ತಿಯನ್ನು ರಕ್ಷಿಸುತ್ತಾರೆ ಎಂದರು.

ಅಣುಕು‌ ಪ್ರದರ್ಶನಗಳಿಂದ ಅವಘಡದ ಸಂದರ್ಭದಲ್ಲಿ ಯಾರಿಗೆ ಕರೆ ಮಾಡಬೇಕು.ಇಲಾಖೆಗಳ ಪಾತ್ರ, ಅವಘಡವಾಗದಂತೆ ಯಾವ ರೀತಿ ಸಾರ್ವಜನಿಕರು ಮುನ್ನಚ್ಚರಿಕಾ ಕ್ರಮ ವಹಿಸಬಹುದು ಎಂದು ತಿಳಿಯುತ್ತದೆ. ಅಣುಕು ಪ್ರದರ್ಶನದಲ್ಲಿ ಭಾಗವಹಿಸಿರುವ ಮಕ್ಕಳು ತಮ್ಮ ಮನೆಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಈ ಅಣುಕು ಪ್ರದರ್ಶನ ತುಂಬಾ ಯಶಸ್ವಿಯಾಗಿ ನಡೆದಿದೆ. ಎಲ್ಲಾ ತಂಡದವರು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಆತಂಕ ಘಟನೆಗಳು ನಡೆದರೆ ಇಲಾಖೆಗಳು ರಕ್ಷಣೆ ನೀಡಲು ಸನ್ನದ್ಧರಾಗಿರಬೇಕು. ಅಗ್ನಿ ಶಾಮಕ ದಳದವರು ತಮ್ಮ ಬಳಿ ಇರುವ ಸಲಕರಣೆಳು ಸುಸ್ಥಿತಿಯಲ್ಲಿರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಮನೆಗಳಲ್ಲಿ ನಡೆಯುವ ಸಣ್ಣ ಸಣ್ಣ ಅಗ್ನಿ ದುರಂತವನ್ನು ತಪ್ಪಿಸುವುದಕ್ಕೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಎಂದರು.

ಎಸ್ಸಿ ,ಎಸ್ಟಿ ಸಮಾವೇಶ ಯಶಸ್ವಿಗೊಳಿಸಲು ಚಲುವರಾಯ ಸ್ವಾಮಿ ಕರೆ..

ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ಗುರುರಾಜ್ ರವರು ಅಣುಕು ಪ್ರದರ್ಶನದ ಮಾಹಿತಿಯನ್ನು ಹಂತ ಹಂತವಾಗಿ ವಿವರಿಸಿದರು. ಸ್ಫೋಟವಾದಂತಹ ಸ್ಥಳದಲ್ಲಿದ ಕೆಲಸ ಮಾಡುವ ಕಾರ್ಮಿಕರು ಮಾಹಿತಿ ನೀಡಿದ ನಂತರ ಯಾವ ರೀತಿಯಾಗಿ ಸಮಸ್ಯೆಯನ್ನು ಬಗೆಹರಿಸಬೇಕು ಮತ್ತು ಅಪಾಯದಿಂದ ಪಾರಾಗುವಂತಹ ಮಾರ್ಗಸೂಚಿಯನ್ನು ಪ್ರದರ್ಶನ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು.

ಸ್ಥಳದಲ್ಲಿ ಅಸ್ವಸ್ಥಗೊಂಡ ವ್ಯಕ್ತಿಗಳಿಗೆ ಪ್ರಥಮ ಚಿಕಿತ್ಸೆ ನೀಡುವಂತಹ ಕಾರ್ಯವನ್ನು ಆರೋಗ್ಯ ಇಲಾಖೆಯು ಆಂಬುಲೆನ್ಸ್ ಸಹಾಯದೊಂದಿಗೆ ಕೈಗೊಂಡಿತು. ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿಯನ್ನು ನಿಯಂತ್ರಿಸುವ ಕೆಲಸ ನಿರ್ವಹಿಸಿದರು. ಪೊಲೀಸ್ ಇಲಾಖೆಯು ಸ್ಥಳದಲ್ಲಿ ಜನ ಸಂದಣಿಯಾಗದಂತೆ ರಕ್ಷಣಾ ಕಾರ್ಯಗಳು ಸುಗಮವಾಗಿ ನಡೆಯುವಂತೆ ಕೆಲಸ ನಿರ್ವಹಿಸಿದರು.

ಅಣುಕು ಪ್ರದರ್ಶನದಲ್ಲಿ ಅಗ್ನಿಶಾಮಕದಳ ಇಲಾಖೆಯಲ್ಲಿ ಉಪಯೋಗಿಸುವ ವಿವಿಧ ಬಗೆಯ ಸಲಕರಣೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಮದ್ದೂರು ತಾಲ್ಲೂಕು ಉಪಾತಹಶೀಲ್ದಾರ್ ಜಿ.ಎಂ ಸೋಮಶೇಖರ್, NSL Sugars Ltd ಕಂಪನಿಯ ಉಪಾಧ್ಯಕ್ಷ ಪಿ.ಜಿ.ಕೆ ದತ್ತ, ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಹೆಚ್ ನಿರ್ಮಾಲ, ಅಗ್ನಿಶಾಮಕ ದಳದ ಅಧಿಕಾರಿ ಮನೋಜ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

About The Author