Thursday, April 17, 2025

Latest Posts

ಭಾರತದಲ್ಲಿ ಪದಕಗಳ ಸಂಖ್ಯೆ 12 ಕ್ಕೆ ಏರಿಕೆ…!

- Advertisement -

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದಲ್ಲಿ ಪದಕಗಳ ಸಂಖ್ಯೆಯನ್ನು 12 ಕ್ಕೆ ಏರಿಸಿದ್ದಾರೆ. ಒಲಂಪಿಕ್ಸ್ ಅಥವಾ ಪ್ಯಾರಾಲಿಂಪಿಕ್ಸ್ ನ ಒಂದೇ ಆವೃತ್ತಿಯ ಎರಡು ವೈಯಕ್ತಿಕ ಪದಕವನ್ನು ಗೆದ್ದಿರುವ ಸಾಧನೆಯನ್ನು ಶೂಟರ್ ಅವನಿ ಲೇಖರಾ ಮಾಡಿದ್ದಾರೆ.

1960ರಲ್ಲಿ ಆರಂಭವಾಗಿ 11 ಆವೃತ್ತಿಗಳನ್ನು ಕಂಡಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಇದೇ ಮೊದಲ ಬಾರಿಗೆ 2020 ಟೋಕಿಯೊ ಪ್ಯಾರಾಲಿಂಪಿಕ್ಸ್ ಭಾರತ 12 ಪದಕಗಳನ್ನು ಗೆದ್ದಿದೆ.

ಈ ವಾರದ ಆರಂಭದಲ್ಲಿ ಅವನಿ ಚಿನ್ನ ಗೆದ್ದಿದ್ದರು. ನಂತರ ಇಂದು ಕಂಚಿನ ಪದಕ ಗೆದ್ದು ಬೀಗಿದರು. ಇದಕ್ಕೂ ಮುನ್ನ ಪುರುಷರ ಹೈಜಂಪ್ ಟಿ64 ಫೈನಲ್‌ನಲ್ಲಿ ಕ್ರೀಡಾಪಟು ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆದ್ದರು.

ಪ್ಯಾಡ್ಲರ್ ಭಾವಿನಾ ಪಟೇಲ್ ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪರ ಮೊದಲ ಪದಕವನ್ನು ಗೆದ್ದಿದ್ದರು. ನಿಶಾದ್ ಕುಮಾರ್, ದೇವೇಂದ್ರ ಜಜಾರಿಯಾ, ಪ್ರವೀಣ್ ಕುಮಾರ್, ಯೋಗೀಶ್ ಕತುನಿಯಾ ಮತ್ತು ಮರಿಯಪ್ಪನ್ ತಂಗವೇಲು ಬೆಳ್ಳಿ ಪದಕ ಗೆದ್ದಿದ್ದಾರೆ. ಅವನಿ, ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್ ಚಿನ್ನ ಗೆದ್ದರೆ, ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಂದರ್ ಸಿಂಗ್ ಗುರ್ಜಾರ್, ಸಿಂಘರಾಜ್ ಅಧಾನ ಮತ್ತು ಶರದ್ ಕುಮಾರ್ ಭಾರತಕ್ಕೆ ಕಂಚು ಗೆದ್ದಿದ್ದಾರೆ.

- Advertisement -

Latest Posts

Don't Miss