Friday, July 11, 2025

Latest Posts

ಪುನೀತ್ ರಾಜ್ ಕುಮಾರ್ ಸಂಸ್ಥೆಯಿಂದ “o2″ಸಿನಿಮಾ ಬರ್ತಿದೆ

- Advertisement -

www.karnatakatv.net : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ನಲ್ಲಿ ಇದೀಗ 02 ಅನ್ನುವ ಹೊಸ ಚಿತ್ರವೊಂದು ಮೂಡಿಬರ್ತಿದೆ.. ಈ ಹಿಂದೆ ಸಾಕಷ್ಟು ವರ್ಷಗಳ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ  ಹಾಗೂ ನಟ ಪ್ರಭುದೇವಾ ಅವರೂ ಸಹ ರಾಸಾಯನಿಕ ಹೆಸರಿನ ಹೆಚ್ ಟು ಓ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದ್ರು.. ಅದೇ ರೀತಿ ಈಗ ಪುನೀತ್ ಕೂಡ 02 ಅನ್ನುವ ಮೆಡಿಕಲ್ ಥ್ರಿಲ್ಲರ್ ಪ್ರಕಾರಕ್ಕೆ ಸೇರುವ ಚಿತ್ರವನ್ನ ನಿರ್ಮಿಸಲು ಮುಂದಾಗಿದ್ದಾರೆ.. ಈಗಾಗ್ಲೇ ಪುನೀತ್ ಅವರು ತಮ್ಮ ಪಿಆರ್ ಕೆ ಬ್ಯಾನರ್ ನಲ್ಲಿ ಮಾಯಾಬಜಾರ್, ಕವಲುದಾರಿ ಅಂತಹ ಉತ್ತಮ ಚಿತ್ರಗಳನ್ನ ನಿರ್ಮಿಸಿದ್ದಾರೆ.. ಈ ಚಿತ್ರಗಳಷ್ಟೇ ಅಲ್ಲದೆ ಫ್ರೆಂಚ್ ಬಿರಿಯಾನಿ, ಲಾ ಸಿನಿಮಾಗಳ ಬಳಿಕ ಇತ್ತೀಚೆಗಷ್ಟೇ ಫ್ಯಾಮಿಲಿ ಪ್ಯಾಕ್ ಅನ್ನುವ ಚಿತ್ರವನ್ನೂ ಘೋಷಣೆ ಮಾಡಿದ್ರು.. ಆ ಪೈಕಿ ಫ್ರೆಂಚ್ ಬಿರಿಯಾನಿ ಹಾಗೂ ಲಾ ಚಿತ್ರಗಳು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿವೆ.. ಅಂದಹಾಗೆ ಸದ್ಯ ಅಪ್ಪು ನಿರ್ಮಿಸ್ತಿರುವ 02 ಚಿತ್ರಕ್ಕೆ ಪ್ರಶಾಂತ್ ರಾಜ್ ಹಾಗೂ ರಾಘವ್ ಅನ್ನುವ ಇಬ್ಬರು ಹೊಸ ನಿರ್ದೇಶಕರು ಆಕ್ಷನ್ ಕಟ್ ಹೇಳಲಿದ್ದಾರೆ.. ಇದುವರೆಗೂ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡ್ತಾ ಬಂದಿರುವ ಪಿಆರ್ ಕೆ ಪ್ರೊಡಕ್ಷನ್ ಈಗ್ಲೂ ಕೂಡ ನವ ಪ್ರತಿಭೆಗಳಿಗೆ ಅವಕಾಶ ನೀಡಿದೆ.. ಈ ಹಿಂದೆ ಮಾಯಾಬಜಾರ್ ಚಿತ್ರವನ್ನ ನಿರ್ದೇಶನ ಮಾಡಿದ್ದ ರಾಧಾಕೃಷ್ಣ ಅವರೂ ಸಹ ಈ ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.. ಮೆಡಿಕಲ್ ಥ್ರಿಲ್ಲರ್ ಚಿತ್ರಕತೆಯ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಮೂಡಿಬಂದಿರುವುದು ಬಹಳ ಕಡಿಮೆ.. ಹಾಗಾಗಿ ಸಹಜವಾಗಿಯೇ ಪಿಆರ್ ಕೆ ಬ್ಯಾನರ್ ನಲ್ಲಿ ಮೂಡಿಬರ್ತಿರುವ ಈ 02 ಸಿನಿಮಾ ಪ್ರೇಕ್ಷಕರಲ್ಲಿ ಕ್ಯೂರಿಯಾಸಿಟಿಯನ್ನ ಹೆಚ್ಚಿಸಿದೆ..   

ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss