Friday, November 22, 2024

Latest Posts

Late age marriage:ವೃದ್ದನನ್ನು (76) ಮದುವೆಯಾದ 46 ಮಹಿಳೆ

- Advertisement -

ಒಡಿಶಾ: ಪ್ರೀತಿಗೆ ಕಣ್ಣಿಲ್ಲ ಜಾತಿ ಧರ್ಮದ ಭೇದವಿಲ್ಲ ಅಂತಾರೆ ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಎನ್ನುತ್ತಿದ್ದರು ಇದನ್ನು ಈ ಜೋಡಿ ನಿರೂಪಿಸಿದ್ದಾರೆ. ಮದುವೆಯಾಗಲು ಹುಡುಗ ಹಾಗಿರಬೇಕು ಶ್ರೀಮಂತನಾಗಿರಬೇಕು, ನೋಡೋಕೆ  ಚೆನ್ನಾಗಿರಬೇಕು  ಹಾಗೇ ಹೀಗೆ ಅಂತ ಈಗಿನ ಕಾಲದ ಹುಡುಗಿಯರು  ಏನೆಲ್ಲ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ ಆದರೆ ಮದುವೆಯಾದ ಸ್ವಲ್ಪ ದಿನದಲ್ಲೆ ದೂರವಾಗುತ್ತಾರೆ ಆದರೆ ಇಲ್ಲೊಂದು ಜೋಡಿ ವಯಸ್ಸಿನಲ್ಲಿ ಅಜಗಜಾಂತರ ಅಂತರವಿದ್ದರೂ ಪ್ರೀತಿಗೆ ಸೋಲಿಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ.

ಈ ಲೇಟ್ ಏಜ್ ಮದುವೆ ಒಡಿಶಾದ ಗಂಜಂ ಜಿಲ್ಲೆಯಲ್ಲಿ ನಡೆದಿದ್ದು, ಭಂಜನಗರ್​ ಕೋರ್ಟ್​ನಲ್ಲಿ ಜುಲೈ 19ರಂದು ಹಿರಿಯ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.ಒಡಿಶಾದ ಗಂಜಾಂ ಜಿಲ್ಲೆಯ ಸಂಖೆಮುಂಡಿ ಮಂಡಲದ ಅಡಪದ ಗ್ರಾಮದ ರಾಮಚಂದ್ರ ಸಾಹು ಎಂಬ 76 ವರ್ಷದ ವ್ಯಕ್ತಿ 47 ವರ್ಷದ ಸುಲೇಖಾ ಸಾಹು ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿ ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ರಾಮಚಂದ್ರ ಸಾಹು ಅವರ ಮೊದಲ ಪತ್ನಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರ ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿದ್ದಾರೆ. ಒಬ್ಬ ಮಗಳು ತನ್ನ ಅತ್ತೆ ಮನೆಯಲ್ಲಿದ್ದರೆ, ಇನ್ನೊಬ್ಬ ಮಗಳು ಸಾವನ್ನಪ್ಪಿದ್ದಾರೆ.

ರಾಮಚಂದ್ರ ಕಳೆದ 18 ವರ್ಷಗಳಿಂದ ಒಂಟಿ ಜೀವನ ನಡೆಸುತ್ತಿದ್ದರು. ಅವರನ್ನು ಮದುವೆ ಸಮಾರಂಭದಲ್ಲಿ ನೋಡಿದ್ದರು. ಮೊದಲ ನೋಟದಲ್ಲೇ ಆಕೆಯ ಮೇಲೆ ಪ್ರೀತಿ ಉಂಟಾಗಿದ್ದು, ಮದುವೆಯಾಗಲು ನಿರ್ಧರಿಸಿದ್ದಾರೆ. ಎಂಟು ವರ್ಷಗಳ ಹಿಂದೆ ಭಂಜನಗರ ವ್ಯಾಪ್ತಿಯ ಕುಳಗಾರ ಗ್ರಾಮದ ತ್ರಿನಾಥ ಸಾಹು ಎಂಬುವರ ಪುತ್ರಿ ಸುರೇಖಾ (46) ರಾಮಚಂದ್ರನ ಮದುವೆ ಪ್ರಸ್ತಾಪಕ್ಕೆ ಅವಿವಾಹಿತರಾಗಿದ್ದ ಸುಲೇಖಾ ಕೂಡ ಒಪ್ಪಿದ್ದಾರೆ , ಅವರು ಜುಲೈ 19 ರಂದು ಭಂಜ್‌ನಗರ ನ್ಯಾಯಾಲಯದಲ್ಲಿ ವಿವಾಹವಾದರು. ಇದಾದ ಬಳಿಕ ದೇವಸ್ಥಾನದಲ್ಲಿ ವಿಧಿವಿಧಾನಗಳ ಪ್ರಕಾರ ಮತ್ತೆ ವಿವಾಹವಾಗಿದ್ದಾರೆ.

Motorola: ಆಗಸ್ಟ್ 1 ರಂದು ಅನಾವರಣಗೊಳ್ಳಲಿದೆ ಮೋಟೋ ಜಿ14 ಮೊಬೈಲ್

Water Falls :ಜಲಪಾತದಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆ…!

Narendra Modi : ಮೂರನೇ ಅವಧಿಯಲ್ಲಿ ಅಗ್ರಸ್ಥಾನದ ಆರ್ಥಿಕತೆ ಗ್ಯಾರಂಟಿ ಘೋಷಿಸಿದ ನಮೋ..?!

 

 

 

 

- Advertisement -

Latest Posts

Don't Miss