Saturday, February 8, 2025

Latest Posts

Motorola: ಆಗಸ್ಟ್ 1 ರಂದು ಅನಾವರಣಗೊಳ್ಳಲಿದೆ ಮೋಟೋ ಜಿ14 ಮೊಬೈಲ್

- Advertisement -

ತಂತ್ರಜ್ಞಾನ: ಹೊಸ ಫೀಚರ್ಸ್ ನೊಂದಿಗೆ ಮಾರುಕಟ್ಟೆಗೆ ಪ್ರತಿದಿನವೂ  ಮೊಬೈಲ್ ಕಂಪನಿಗಳು ನಾ ಮುಂದು ತಾ ಮುಂದು ಎಂದು ವಿಭಿನ್ನ ರೀತಿಯಲ್ಲಿ ಅಡ್ವಾಸ್ಡ್ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಹೆಜ್ಜೆ ಇಡುತ್ತಿವೆ ಅದೇ ರೀತಿ ಗ್ರಾಹಕರ ಅಭಿರುಚಿಗೆ ತಕ್ಕಂತೆ  ಹಾಗೂ ಕೈಗೆಟುಕುವ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ  ಮೋಟೊರೋಲಾ ಕಂಪನಿಯ ಮೋಟೋ G14

ಕಡಿಮೆ ಬೆಲೆಯಿಂದ ಹಿಡಿದು ದುಬಾರಿ  ಬೆಲೆಯ ಮೊಬೈಲ್ ಗಳನ್ನು ಗ್ರಾಹಕರಿಗೆ ಆಕರ್ಷಣಿಯ ರೀತಿಯಲ್ಲಿ ಸ್ಮಾರ್ಟ ಪೋನ್ ಗಳನ್ನು ಬಿಡುಗಡೆ ಮಾಡುವ ಸಂಸ್ಥೆ ಮೊಟೋರೋಲಾ  ಯಾವಾಗಲೂ ಮುಂಚುಣಿಯಲ್ಲಿದೆ. ಭಾರತದಲ್ಲಿ ಮೊಟೋ  ಜಿ14 ಅನ್ನು ಅನಾವರಣಗೊಳಿಸಲು ಮುಂದಾಗಿದೆ.ಮುಂದಿನ ತಿಂಗಳ ಆಗಸ್ಟ 1 ರಂದು ಮದ್ಯಾಹ್ನ 12 ಗಂಟೆಗೆ ಸ್ಮಾರ್ಟ್​ ಪೋನ್ ದೇಶದಲ್ಲಿ ಅನಾವರಣಗೊಳಿಸಲಿದೆ.ಈ ಕಾಮರ್ಸ್ ತಾಣವಾದ ಫ್ಲಿಪ್ ಕಾರ್ಟ್ ಆಗಸ್ಟ್ 1 ರಿಂದ ಮದ್ಯಾಹ್ನ 12 ಗಂಟೆಯಿಂದ ಇದರ ಪ್ರೀಬುಕ್ಕಿಂಗ್ ಶುರುವಾಗಲಿದೆ ಎಂದು ತಿಳಿಸಿದೆ.

ಇನ್ನು ಈ ಮೊಬೈಲ್ ನ ವೈಶಿಷ್ಟ್ಯಗಳು: ಹಿಂದುಗಡೆ ಡ್ಯೂಯಲ್ ಕ್ಯಾಮೆರಾ ಸೆಟಪ್ ಮತ್ತು  ಎಲ್ ಇಡಿ ಫ್ಲಾಶ್ ಇರುವುದು ಖಚಿತವಾಗಿದೆ. ಆದರೆ, ಮೂಲಗಳ ಪ್ರಕಾರ ಇದು 6.5-ಇಂಚಿನ ಪೂರ್ಣ HD+ ಡಿಸ್ ಪ್ಲೇಯನ್ನು ಹೊಂದಿರಬಹುದು ಎನ್ನಲಾಗಿದೆ. ಈ ಫೋನ್ 4GB RAM ಮತ್ತು 128gb UFS 2.2 ಸ್ಟೋರೇಜ್ ಜೊತೆಗೆ ಆಕ್ಟಾ-ಕೋರ್ unisocT616 Soc ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ.

Water Falls :ಜಲಪಾತದಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆ…!

Raghav Chadda : ರಾಘವ್ ಚಡ್ಡಾಗೆ ಕುಕ್ಕಿದ ಕಾಗೆ : ಶನಿ ದೋಷ ಎಂದ ನೆಟ್ಟಿಗರು…!

Satish jarakihole: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

- Advertisement -

Latest Posts

Don't Miss