Friday, June 20, 2025

Latest Posts

ಮೋಸಗಾರನ ಬಲೆಗೆ ಬಿದ್ದ ವಿದ್ಯಾವಂತ ಮಹಿಳೆಯರು: 7 ರಾಜ್ಯ, 18 ಮದುವೆ..

- Advertisement -

ಭೀಭು ಪ್ರಕಾಶ್ ಸ್ವೈನ್ ಎಂಬ ವ್ಯಕ್ತಿ 7 ರಾಜ್ಯಗಳಲ್ಲಿ 18 ಮದುವೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈತನ ಕೆಲಸವನ್ನು 8 ತಿಂಗಳ ಹಿಂದೆ ತಿಳಿದಿದ್ದ ಪೊಲೀಸರು, ಈತನನ್ನ ಹಿಂಬಾಲಿಸುತ್ತಿದ್ದರು. ಈತ ಯಾರೊಂದಿಗೆ ಚಾಟ್ ಮಾಡುತ್ತಾನೆ. ಯಾರ್ಯಾರಿಗೆ ಕಾಲ್ ಮಾಡುತ್ತಾನೆ. ಎಲ್ಲೆಲ್ಲಿ ಹೋಗುತ್ತಾನೆ ಇದೆಲ್ಲವನ್ನ ಪೊಲೀಸರು ಗಮನಿಸುತ್ತಿದ್ದರು. ಹೀಗೆ ಗಮನಿಸಿ, ಮೂರು ದಿನದ ಹಿಂದೆ ಈತನನ್ನು ಅರೆಸ್ಟ್ ಮಾಡಿದ್ದಾರೆ. ಇದೀಗ ಈತನ ಬಣ್ಣ ಬಟಾ ಬಯಲಾಗಿದೆ.

ಇನ್ನು ಈ ಪಟಿಂಗನ ವಯಸ್ಸಿ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಯಾಕಂದ್ರೆ ಈತನಿಗೆ 66 ವರ್ಷ. ಈ ಮುದುಕ ತಾನು ಡಾಕ್ಟರ್ ಎಂದು ಸುಳ್ಳು ಹೇಳಿ ಇಷ್ಟೆಲ್ಲ ಮದುವೆ ಮಾಡಿಕೊಂಡಿದ್ದಾನೆ. ಇನ್ನು ಈತನಿಗೆ ಮದುವೆಯಾದ ಹೆಣ್ಣು ಮಕ್ಕಳೆಲ್ಲ, ಡಾಕ್ಟರ್, ಲಾಯರ್, ಇಂಜಿನಿಯರ್, ಆಫೀಸರ್, ಹೀಗೆ ದೊಡ್ಡ ದೊಡ್ಡ ಕೆಲಸದಲ್ಲಿರುವವರೇ. ಇನ್ನು ಇವರೆಲ್ಲ ಇವನ ಬಲೆಗೆ ಬಿದ್ದು ಹೇಗೆಂದರೆ ವೆಬ್‌ಸೈಟ್‌ ಮೂಲಕ. ಮದುವೆಗೆ ಸಂಬಂಧಿಸಿದ ವೆಬ್‌ಸೈಟ್‌ನಲ್ಲಿ ಸುಳ್ಳು ಮಾಹಿತಿಯನ್ನ ಕೊಟ್ಟ ಈ ವ್ಯಕ್ತಿ, 14 ಮಹಿಳೆಯರನ್ನು ವಿವಾಹವಾಗಿದ್ದಾನೆ.  

ಇವರು ವಿವಾಹವಾದ ಎಲ್ಲರೊಂದಿಗೂ ಸಂಸಾರ ಮಾಡುತ್ತಿಲ್ಲ. ಬದಲಾಗಿ ಅವರೊಂದಿಗೆ ವಿವಾಹವಾಗಿ, ಅವರ ಹಣ, ಒಡವೆಯನ್ನೆಲ್ಲ ದೋಚಿ ಪರಾರಿಯಾಗಿದ್ದಾನೆ. 14ನೇ ಪತ್ನಿ ಕೂಡ ಮೋಸ ಹೋಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿದ್ದಳು. ಹೀಗಾಗಿ ಪೊಲೀಸರು 8 ತಿಂಗಳಿಂದ ಇವನ ಮೇಲೆ ನಿಗಾ ಇರಿಸಿದ್ದರು. ಈತನ ಅಕೌಂಟ್‌ನಲ್ಲಿ ಒಂದು ಕೋಟಿಗೂ ಹೆಚ್ಚು ಮೋಸ ಮಾಡಿದ ಹಣವನ್ನು ಕೂಡಿಟ್ಟಿದ್ದಾನೆ. ಅಲ್ಲದೇ ಕೆಲವರಿಗೆ ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಸದ್ಯ ಈತನನ್ನು ಭೋಪಾಲ್ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

- Advertisement -

Latest Posts

Don't Miss