Tuesday, December 17, 2024

Latest Posts

ಬೆಂಗಳೂರಿನಲ್ಲಿ ಅಕ್ಕಿ ಕಳ್ಳಸಾಗಣೆ ವೇಳೆ ಅಧಿಕಾರಿಗಳ ದಾಳಿ: ಎರಡೂವರೆ ಟನ್ ಅಕ್ಕಿ ಮತ್ತು ರಾಗಿ ಪಡಿತರ ಸೀಜ್..!

- Advertisement -

Bengaluru News: ಬೆಂಗಳೂರು : ಅಕ್ಕಿ ಕಳ್ಳಸಾಗಣೆ ವೇಳೆ ಅಧಿಕಾರಿಗಳು ದಾಳಿ ಮಾಡಿದ್ದು, ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳಸಾಗಣೆ ವೇಳೆ ಅಕ್ಕಿ, ರಾಗಿ ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಅಕ್ಕಿ ಸಾಗಾಣಿಕೆ ವೇಳೆ ವಾಹನ ಸಮೇತ ಸೀಜ್ ಮಾಡಿದ್ದಾರೆ. ಎರಡೂವರೆ ಟನ್ ಅಕ್ಕಿ ಮತ್ತು ರಾಗಿ ಪಡಿತರ ಸೀಜ್ ಮಾಡಿದ್ದಾರೆ. ಅಧಿಕಾರಿಗಳು ಹೊಸಕೆರೆಹಳ್ಳಿ ಕೆ.ಇ.ಬಿ ಜಂಕ್ಷನ್ ಬಳಿ ವಾಹನವನ್ನು ಸೀಜ್ ಮಾಡಿದ್ದಾರೆ. ಅಬುಸೈಯ್ಯದ್, ತೌಸಿಫ್ ಪಾಷ, ಮಹಮ್ಮದ್ ಫಿರೋಜ್ ಬಂಧಿಸಿದ್ದಾರೆ.

ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಅಕ್ಕಿ, ರಾಗಿ ಸಾಗಾಣಿಕೆ ಮಾಡ್ತಿದ್ದರು. ತಪಾಸಣೆ ವೇಳೆ ಪಡಿತರ ಅಕ್ಕಿ ಮತ್ತು ರಾಗಿ ಕಳ್ಳಸಾಗಾಣಿಕೆ ಬೆಳಕಿಗೆ ಬಂದಿದೆ. ಪ್ಲಾಸ್ಟಿಕ್ ಚೀಲದಲ್ಲಿ ಸರ್ಕಾರದ ಅಕ್ಕಿ ಮತ್ತು ರಾಗಿ ಸಾಗಾಟ ಮಾಡುತ್ತಿದ್ದು, ನಾಲ್ವರ ವಿರುದ್ಧ ಗಿರಿನಗರ ಠಾಣೆಯಲ್ಲಿ FIR ದಾಖಲಾಗಿದೆ. ಗಿರಿನಗರ ಠಾಣೆಗೆ ಫುಡ್ ಇನ್ಸ್ಪೆಕ್ಟರ್ ದೊಡ್ಡಬಸವೇಗೌಡ ದೂರು ನೀಡಿದ್ದು, ಪ್ರಕರಣ ಸಂಬಂಧ ಗಿರಿನಗರ ಪೊಲೀಸರಿಂದ ಮೂವರ ಬಂಧನವಾಗಿದೆ.

‘ಬಿಜೆಪಿಯವರು ಯಾರೂ ದೇಶದ ಸ್ವಾತಂತ್ರ್ಯಕ್ಕಾಗಿ ಅಪ್ಪಿತಪ್ಪಿಯೂ ಹೋರಾಡಿದವರಲ್ಲ’

ಮೊಹಬ್ಬತ್‌ಕಿ ದುಕಾನ್ ಉದ್ಘಾಟಿಸಿದ ಡಿಸಿಎಂ ಡಿಕೆಶಿ: ಹಿಂದಿ ಬೇಡಾ, ಕನ್ನಡದ ಹೆಸರಿಡಿ ಎಂದ ನೆಟ್ಟಿಗರು

ನಾನು ಅನ್‌ಮ್ಯಾರೀಡ್ ಎಂದು ಸುಳ್ಳು ಹೇಳಿದ ಸಂತೋಷ್: ಹಳ್ಳಿಕಾರ್‌ಗೆ 2 ವರ್ಷದ ಮಗುನೂ ಇದೆಯಾ..?

- Advertisement -

Latest Posts

Don't Miss