Hubli News: ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಟೋರಿಯಸ್ ಕ್ರಿಮಿನಲ್ ಜೊತೆಗೆ, ಗೋವಾದಿಂದ ಎಸ್ಕೇಪ್ ಆಗಿದ್ದ ಗೋವಾ ಪೊಲೀಸ್‌ನನ್ನು ಕೂಡ ಬಂಧಿಸಿದ್ದಾರೆ.
ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ಕಾವಲಿಗಾಗಿ ಅಮಿತ್ ನಾಯಕ ಎಂಬ ಪೊಲೀಸ್‌ನನ್ನು ಕರ್ತವ್ಯಕ್ಕೆಂದು ನೇಮಕ ಮಾಡಲಾಗಿತ್ತು. ಗೋವಾ ಪೊಲೀಸ್ ಕ್ರೈಂ ಬ್ರಾಂಚ್ ನಲ್ಲಿ ಅಮಿತ್ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅಮಿತ್ ನಾಯಕ್ ಸುಲೇಮಾನ್ ಸಿದ್ಧಿಕಿಯನ್ನು ಕಸ್ಟಡಿಯಿಂದ ತಪ್ಪ್ಸಿಕೊಳ್ಳಲು ಸಹಾಯ ಮಾಡಿದ್ದಾನೆ.
ಹಾಗೆ ತಪ್ಪಿಸಿಕೊಂಡಲು ಹೋಗಲು ಸಹಕರಿಸಲು ಸುಲೇಮಾನ್ ಸಿದ್ಧಿಕಿ ಸಾಮಾನ್ಯ ಕಳ್ಳನಲ್ಲ ಬದಲಾಗಿ, ಹೈದ್ರಾಬಾದ್, ಪುಣೆ, ದೆಹಲಿ, ಗೋವಾ ಸೇರಿ ಇನ್ನೂ ಕೆಲವು ರಾಜ್ಯಗಳಲ್ಲಿ ಸುಲೇಮಾನ್ ಮೇಲೆ ಹಲವಾರು ಕೇಸ್‌ಗಳಿದೆ. ಕೊಲೆ, ಕೊಲೆ ಯತ್ನ, ಬೆದರಿಕೆ, ವಂಚನೆ ಪ್ರಕರಣಗಳಲ್ಲಿ ಈ ಸುಲೇಮಾನ್ ಭಾಗಿಯಾಗಿದ್ದಾನೆ. ಭೂ ಮಾಫಿಯಾ ದಂಧೆಯಲ್ಲಿಯೂ ಸಾರ್ವಜನಿಕರನ್ನು ಹೆದರಿಸುವುದು ಅವರಿಂದ ದುಡ್ಡು ಕೀಳುವುದು, ದರೋಡೆ, ಮರ್ಡರ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಆದರೆ ನಿನ್ನೆ ಮಧ್ಯರಾತ್ರಿ ಸುಲೇಮಾನ್ ಸಿದ್ಧಿಕಿಯನ್ನು ಅಮಿತ್ ನಾಯಕ ಕಸ್ಟಡಿಯಿಂದ ಪರಾರಿಯಾಗಲು ಸಹಾಯ ಮಾಡಿದ್ದಾನೆ. ಅಲ್ಲದೇ, ಇವನೊಂದಿಗೆ ಅಮಿತ್ ತಾನೂ ಪರಾರಿಯಾಗಿದ್ದಾನೆ. ಗೋವಾದಿಂದ ತಲೆ ಮರೆಸಿಕೊಳ್ಳಲು ಇಬ್ಬರೂ ಹುಬ್ಬಳ್ಳಿಗೆ ಬಂದು, ಹುಬ್ಬಳ್ಳಿ ಪೊಲೀಸರು ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸರು ಕ್ರಿಮಿನಲ್‌ಗಳನ್ನ ಅರೆಸ್ಟ್ ಮಾಡಿದ್ದಾರೆ.