Saturday, July 12, 2025

Latest Posts

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ: ಅಂಜುಮನ್ ಚುನಾವಣೆ ವಿರೋಧಿಸಿ ಕುಟುಂಬಸ್ಥರ ಆಕ್ರೋಶ..!

- Advertisement -

Hubli News: ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ಆವರಣದಲ್ಲಿ ನಡೆದಿದ್ದ ಕಲ್ಲು ತೂರಾಟ ಪ್ರಕರಣ ಈಗ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಈಗಾಗಲೇ ಹುಬ್ಬಳ್ಳಿಯ ಅಂಜುಮನ್ ಇ-ಇಸ್ಲಾಂ ಸಂಸ್ಥೆ ಚುನಾವಣೆ ರಂಗೇರುತ್ತಿದ್ದಂತೆಯೇ ಗಲಭೆ ಪ್ರಕರಣದ ಬಂಧಿತರ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ.

ಹೌದು. ಇದೇ 18 ರಂದು ನಡೆಯುವ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ನಿಟ್ಟಿನಲ್ಲಿ ಅಂಜುಮನ್ ಸಂಸ್ಥೆ ಚುನಾವಣೆ ನಡೆಸದಂತೆ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಹಳೆಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಜೈಲು ಸೇರಿರುವ ಕುಟುಂಬಸ್ಥರಿಂದ ಕಣ್ಣೀರು ಹಾಕಿದ್ದು, ನಾಮಪತ್ರ ಸಲ್ಲಿಕೆ ಆಗಮಿಸುತ್ತಿರುವ ಅಭ್ಯರ್ಥಿಗಳಿಗೆ ಅಡ್ಡಗಟ್ಟಿ ಆಕ್ರೋಶ ಹೊರಹಾಕುತ್ತಿರುವ ಪಾಲಕರು ಕೂಡಲೇ ಬಿಡುಗಡೆ ಮಾಡಿಸುವಂತೆ ಆಗ್ರಹಿಸಿದ್ದಾರೆ.

ಅಭ್ಯರ್ಥಿಗಳು ಮತ್ತು ಪಾಲಕರ ನಡುವೆ ವಾಗ್ವಾದ ನಡೆದಿದ್ದು,ಮೊದಲು ನಮ್ಮ‌ ಮಕ್ಕಳನ್ನು ಜೈಲಿನಿಂದ ಮುಕ್ತಿಗೊಳಿಸಿ. ಆಮೇಲೆ ಅಂಜುಮನ್ ಸಂಸ್ಥೆಯ ಚುನಾವಣೆ ನಡೆಸಿ. ನಮ್ಮ ಮಕ್ಕಳಿಲ್ಲದೇ ಜೀವನ ನಡೆಸುವುದು ಕಷ್ಟಕರವಾಗಿದೆ. ಇನ್ನೂ ಎರಡೂ ತಿಂಗಳು ಕಳೆದ್ರೆ ನಮ್ಮ ಮಕ್ಕಳು ಬಂಧನವಾಗಿ ಎರಡೂ ವರ್ಷ ಕಳೆಯುತ್ತೆ. ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ಆದ್ರೂ ಪೊಲೀಸರು ನಮ್ಮ ಮಕ್ಕಳನ್ನ ಅರೆಷ್ಟ್ ಮಾಡಿದ್ದಾರೆ. ಈಗ ಮಕ್ಕಳನ್ನ ಮೊದಲು ಬಿಡುಗಡೆ ಮಾಡಲು ಕಾನೂನು ಹೋರಾಟ ಮಾಡಿ. ಆಮೇಲೆ ಚುನಾವಣೆ ಮಾಡಿ ಎನ್ನುತ್ತಿರುವ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸ್ವಂತ ತಂಗಿಯ ಬಗ್ಗೆಯೇ ಅಸೂಯೆ: ಮದುವೆಗಿಟ್ಟಿದ್ದ ಆಭರಣ ಕದ್ದ ಅಕ್ಕ

ಗಲಾಟೆ ಎಬ್ಬಿಸೋದು ಬಿಜೆಪಿ ಕೆಲಸ, ಚುನಾವಣೆ ಬಂದ್ರೆ ಸಾಕು ಇವರ ಆಟ ಚಾಲು ಆಗತ್ತೆ: ಸಚಿವ ತಿಮ್ಮಾಪುರ

ಸುಳ್ಳು ಸಾವಿನ ಸುದ್ದಿಯ ಪ್ರಚಾರ: ನಟಿ ಪೂನಂ ಪಾಂಡೆ ವಿರುದ್ಧ ಎಫ್‌ಐಆರ್ ದಾಖಲು

- Advertisement -

Latest Posts

Don't Miss