Tuesday, November 5, 2024

Latest Posts

ದೀಪಾವಳಿಯ ದಿನ ಪಟಾಕಿ ಸುಡುವ ಬದಲು ನೋಟು ಸುಟ್ಟ ವ್ಯಕ್ತಿ

- Advertisement -

National News: ದೀಪಾವಳಿ ಅಂದ್ರೆ ದೀಪಗಳ ಹಬ್ಬ, ಈ ದಿನ ಮನೆಯಲ್ಲಿ ದೀಪಗಳನ್ನು ಹಚ್ಚಿ, ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳಲಾಗುತ್ತದೆ. ಇನ್ನು ಈ ಹಬ್ಬದ ವಿಶೇಷ ಅಂದ್ರೆ, ಪಟಾಕಿ ಹಚ್ಚುವುದು. ಆದರೆ ಇಲ್ಲೋರ್ವ ವ್ಯಕ್ತಿ ಪಟಾಕಿ ಸುಡುವ ಬದಲು, ಹಣವನ್ನು ಸುಟ್ಟು ಹಾಕಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

100 ಮತ್ತು 500 ರೂಪಾಯಿಯ ನೋಟನ್ನು ಸುಟ್ಟು ಹಾಕಿದ್ದು, ನೆಟ್ಟಿಗರು ಈ ವೀಡಿಯೋಗೆ ಬೇಸರ ಹೊರಹಾಕಿದ್ದಾರೆ. ಹಣ ಹೆಚ್ಚಾಗಿದ್ದರೆ, ಹಣ ಸುಡುವ ಬದಲು, ಅಗತ್ಯವಿರುವವರಿಗೆ, ಬಡವರಿಗೆ ನೀವು ಹಣ ನೀಡಬಹುದು ಎಂದಿದ್ದಾರೆ.

ಆದರೆ ವೀಡಿಯೋವನ್ನು ಸರಿಯಾಗಿ ನೋಡಿದರೆ, ನೋಟಿನ ಮೇಲೆ ಫುಲ್ ಆಫ್ ಫನ್ ಎಂದು ಬರೆದಿದೆ. ಹಾಗಾಗಿ ಇದು ನಕಲಿ ನೋಟ್ ಎಂದು ಅಂದಾಜಿಸಲಾಗಿದೆ. ಆದರೆ ತನಿಖೆ ಬಳಿಕ, ಇದು ಅಸಲಿ ನೋಟಾ, ನಕಲಿ ನೋಟಾ ಎಂದು ತನಿಖೆ ಬಳಿಕ ತಿಳಿಯಬೇಕಿದೆ.

ಯಾರ ಬಳಿ ಎಷ್ಟೇ ದುಡ್ಡಿದರೂ, ಆತ ಎಷ್ಟೇ ಶ್ರೀಮಂತನಿದ್ದರೂ, ಹಣವನ್ನು ಸುಡುವುದು ಕಾನೂನಿನ ಪ್ರಕಾರ ಅಪರಾಧ. ಅಂಥವರಿಗೆ ಶಿಕ್ಷೆ ನೀಡಲಾಗುತ್ತದೆ. ಆರ್‌ಬಿಐ ಪ್ರಕಾರ, ಇದೊಂದು ಅಪರಾಧವಾಗಿದ್ದು, ಈ ವ್ಯಕ್ತಿ ನಿಜವಾಗಿಯೂ ಹಣ ಸುಟ್‌ಟಿದ್ದರೆ, ಅವನಿಗೆ ತಕ್ಕ ಶಿಕ್ಷೆಯಾಗುತ್ತದೆ.

ವೀಡಿಯೋಗಾಗಿ ಇಲ್ಲಿ ಪ್ರೆಸ್ ಮಾಡಿ.

- Advertisement -

Latest Posts

Don't Miss