National Political News: ಉತ್ತರಪ್ರದೇಶದ ಅಯೋಧ್ಯೆಯಲ್ಲಿ 15 ಸಾವಿರ ಕೋಟಿ ರೂಪಾಯಿ ಯೋಜನೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಮ ಮಂದಿರ ಉದ್ಘಾಟನೆಯ ದಿನ ಪ್ರತಿಯೊಬ್ಬರು ನಿಮ್ಮ ನಿಮ್ಮ ಮನೆಯಲ್ಲಿ ದೀಪ ಬೆಳಗಬೇಕು ಎಂದು ಕರೆ ನೀಡಿದ್ದಾರೆ.
ಅಯೋಧ್ಯೆ ರೈಲ್ವೆ ನಿಲ್ಧಾಣ, ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಈ ಐತಿಹಾಸಿಕ ಕ್ಷಣವು ನಮಗೆಲ್ಲ ಅದೃಷ್ಟದಿಂದ ಬಂದಿದೆ. ನಾವು ಭಾರತಕ್ಕಾಗಿ ಹೊಸ ಸಂಕಲ್ಪವನ್ನು ಮಾಡಬೇಕು. ಹೊಸ ಶಕ್ತಿ ತುಂಬಬೇಕು. ಇದಕ್ಕಾಗಿ ಎಲ್ಲ ದೇಶವಾಸಿಗಳು ಜನವರಿ 22ರಂದು ತಮ್ಮ ಮನೆಯಲ್ಲಿ ದೀಪ ಬೆಳಗಿ, ದೀಪಾವಳಿ ಆಚರಿಸಬೇಕು ಎಂದಿದ್ದಾರೆ.
ಜನವರಿ 22ಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಡೆಯಲಿದೆ. ಆದರೆ ಇದೇ ದಿನ ಎಲ್ಲ ರಾಮಭಕ್ತರೂ ಅಯೋಧ್ಯೆಗೆ ಬರಲು ಸಾಧ್ಯವಿಲ್ಲ. ಕಾರ್ಯಕ್ರಮ ಮುಗಿದ ಬಳಿಕ, ಬಿಡುವು ಮಾಡಿಕೊಂಡು ಅಯೋಧ್ಯೆಗೆ ಬಂದು, ರಾಮನ ದರ್ಶನ ಮಾಡಿ. ಆದರೆ ಜನವರಿ 22ರಂದೇ ಎಲ್ಲರೂ ಅಯೋಧ್ಯೆಗೆ ಬರುವ ಸಾಹಸ ಮಾಡಬೇಡಿ ಎಂದು ಪ್ರಧಾನಿ ಮೋದಿ ಎಲ್ಲರಲ್ಲಿ ಮನವಿ ಮಾಡಿದ್ದಾರೆ.
ಇನ್ನು ಅಯೋಧ್ಯೆಯ ರೈಲ್ವೆ ನಿಲ್ದಾಣಕ್ಕೆ ಅಯೋಧ್ಯಾ ಧಾಮ್ ಎಂದು ನಾಮಕರಣ ಮಾಡಲಾಗಿದೆ. ಅಯೋಧ್ಯೆಯ ಏರ್ಪೋರ್ಟ್‌ಗೆ ಮಹರ್ಷಿ ವಾಲ್ಮೀಕಿ ಏರ್ಪೋರ್ಟ್ ಎಂದು ನಾಮಕರಣ ಮಾಡಲಾಗಿದೆ. ಈ ಎರಡೂ ಸ್ಥಳಗಳ ವಿಶೇಷತೆ ಅಂದ್ರೆ, ಇದರ ಕಟ್ಟಡಗಳು ರಾಮನಿಗೆ ಸಂಬಂಧಿಸಿದ ಶೈಲಿಯ ಕಟ್ಟಡವಾಗಿದೆ. ಇಲ್ಲಿ ರಾಮನ ಭಿತ್ತಿಚಿತ್ರಗಳನ್ನು ಬಿಡಿಸಲಾಗಿದೆ.
‘ಪ್ರಣವಾನಂದ ಸ್ವಾಮೀಜಿ ಅಲ್ಲ ಸ್ವಾಮೀಜಿನೇ ಅಲ್ಲ. ನಾನು ತಲೆಕಟ್ಟೋರಿಗೆ ಉತ್ತರ ಕೊಡಲ್ಲ’
ಕೊಬ್ಬರಿಗೆ ಬೆಲೆ ಏರಿಕೆ: ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ ಮಾಜಿ ಸಿಎಂ ಕುಮಾರಸ್ವಾಮಿ




