Tuesday, November 18, 2025

Latest Posts

‘ಹೈಕಮಾಂಡ್‌ಗೆ ಕಪ್ಪ ಸಲ್ಲಿಸಲು ಹಾದಿಬೀದಿಯಲ್ಲಿ, ಸಿಕ್ಕಿದ ಕಡೆಯೆಲ್ಲಾ ವಸೂಲಿ ಮಾಡಲಾಗುತ್ತಿದೆ’

- Advertisement -

Political News: ಮಾಜಿ ಸಿಎಂ ಕುಮಾರಸ್ವಾಮಿ ಸಾಲು ಸಾಲು ಟ್ವೀಟ್ ಮಾಡುವ ಮೂಲಕ, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ದಂಧೆಗೆ ಯಾವ ಹುಲ್ಲುಗಾವಲಾದರೇನು? ಹೈಕಮಾಂಡ್ ಗೆ ಕಪ್ಪ ಸಲ್ಲಿಸಬೇಕೆಂದು ಹಾದಿಬೀದಿಯಲ್ಲಿ ಹೇಳಿಕೊಂಡು ಸಿಕ್ಕಿದ ಕಡೆಯೆಲ್ಲಾ ವಸೂಲಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಕೈಗಾರಿಕೆ, ಉದ್ಯಮ ಚಟುವಟಿಕೆಗೆ ಒಪ್ಪಿಗೆ ಕೊಡಲು KIADB ಇದೆ. ಏಕಗವಾಕ್ಷಿ ವ್ಯವಸ್ಥೆ ಅಡಿಯಲ್ಲಿ ಪ್ರಕ್ರಿಯೆ ನಿರಾತಂಕವಾಗಿ ನಡೆಯುತ್ತಿದೆ. ಅದಕ್ಕೂ ಮುನ್ನ ಉನ್ನತಮಟ್ಟದ ಹೂಡಿಕೆ ಅನುಮೋದನೆ ಸಮಿತಿ ಒಪ್ಪಿಗೆಯನ್ನೂ ಕೊಡುತ್ತದೆ. ಇಷ್ಟೆಲ್ಲ ಇದ್ದ ಮೇಲೆ ಇಲ್ಲಿ BDA ಕೆಲಸ ಏನು? ಯಾರ ಕಿಸೆ ಭರ್ತಿ ಮಾಡಲಿಕ್ಕೆ BDA ಇಂಥ ಅಡ್ಡದಾರಿ ತುಳಿದಿದೆ? ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರು ವ್ಯಾಪ್ತಿಯಲ್ಲಿ ತನ್ನ ಅನುಮೋದನೆ ಇಲ್ಲದೆ ಉದ್ಯಮ ಪಾರ್ಕ್ ರಚನೆ, ಅಭಿವೃದ್ಧಿ, ಕೈಗಾರಿಕಾ ಸಮುಚ್ಚಯಗಳ ನಿರ್ಮಾಣ ಮಾಡಬಾರದು ಎಂದು BDA ಫರ್ಮಾನು ಹೊರಡಿಸಿರುವುದು ಬೆಂಗಳೂರು ‘ನಗದಾಭಿವೃದ್ಧಿ’ ಇಲಾಖೆ ಕೈಚಳಕ, ಅನುಮಾನವೇ ಇಲ್ಲ. ತೆಲಂಗಾಣ ಎಲೆಕ್ಷನ್ ಗೆ ಕಲೆಕ್ಷನ್ ಮಾಡಿದಂತೆ ಈಗ ಲೋಕಸಭೆ ಚುನಾವಣೆಗೆ ವಸೂಲಿ ಶುರುವಾಗಿದೆ ಎಂದು ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ..

ಘರ್ ವಾಪ್ಸಿ ವೇಳೆ ಜಗದೀಶ್ ಶೆಟ್ಟರ್ ಏನು ಬೇಡಿಕೆ ಇಟ್ಟಿದ್ದಾರೋ ಗೊತ್ತಿಲ್ಲ: ಮಹೇಶ್ ಟೆಂಗಿನಕಾಯಿ

ಪವಿತ್ರಾ ಗೌಡಗೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ವಿಜಯಲಕ್ಷ್ಮೀ ದರ್ಶನ್

ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ

- Advertisement -

Latest Posts

Don't Miss