Chidradurga News: ಇಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನಲ್ಲಿ ವೀರ ವನಿತೆ ಓಬವ್ವನವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಮುದಾಯದ ಎಲ್ಲಾ ಬಾಂಧವರು ಯುವಕರು ಚಿಂತಕರು ಭಾಗಿಯಾಗಿದ್ದರು. ವಿಶೇಷವಾಗಿ ಚಳ್ಳಕೆರೆ ತಾಲೂಕಿನ ಶಾಸಕರಾದ ರಘುಮೂರ್ತಿ ರವರು ಬಹಳ ಉತ್ಸುಕತೆಯಿಂದ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ನಾರಿ ಶಕ್ತಿಯ ಪ್ರತೀಕ, ಒನಕೆ ಓಬವ್ವ ಜಯಂತಿ. ಚಿತ್ರದುರ್ಗದ ಕೋಟೆಯ ರಕ್ಷಣೆಗಾಗಿ ಶತ್ರು ಸೈನಿಕರನ್ನು ಸದೆಬಡಿದ ಕನ್ನಡ ನಾಡಿನ ವೀರ ವನಿತೆ ಒನಕೆ ಓಬವ್ವ. ಅವರ ಶೌರ್ಯ, ಸಾಹಸ ಇತಿಹಾಸದ ಪುಟಗಳಲ್ಲಿ ಅಜರಾಮರ. ಅವರಂತೆಯೇ ನಮ್ಮ ಜಿಲ್ಲೆಯ ಚಲವಾದಿ ಮಹಿಳೆಯರು ಶೌರ್ಯ ಪರಾಕ್ರಮ ಧೈರ್ಯವನ್ನು ಎಲ್ಲಾ ಕ್ಷೇತ್ರದಲ್ಲಿ ಬೆಳೆಸಿಕೊಂಡು, ಸಮಾಜದ ಮುನ್ನೆಲೆಗೆ ಬರಬೇಕು ಅವರ ಆದರ್ಶಗಳು ಮೆರೆಯಬೇಕೆಂದು ಕಿವಿ ಮಾತನ್ನು ಹೇಳಿದರು. ಈ ಸಂದರ್ಭದಲ್ಲಿ ತಾಲೂಕಿನ ಚಲವಾದಿ ಸಮುದಾಯದ ಅಧ್ಯಕ್ಷರು, ಪದಾಧಿಕಾರಿಗಳು, ಸಂಘಟಕರು, ವಿಷ್ಣು ವೇಷಧಾರಿಯಾದ ಸೋಮು ಪಾರಿಜಾತ . ಗಾಯಕ ಕೆ.ಟಿ .ಮುತ್ತುರಾಜ್ ಚಂದ್ರಪ್ಪ ಹೇಮಂತ್ ತಿಪ್ಪೇಶ್ ತಿಪ್ಪೇಸ್ವಾಮಿ ಮುಂತಾದವರು ಭಾಗಿಯಾಗಿದ್ದರು.
ವರದಿ :- ಆಂಜನೇಯ. ನಾಯಕನಹಟ್ಟಿ, ಕರ್ನಾಟಕ ಟಿವಿ, ಚಿತ್ರದುರ್ಗ
ಗಾಜಾದಲ್ಲಿ ಯುದ್ಧವಾಗುತ್ತಿದ್ದರೂ, 57 ಮುಸ್ಲಿಂ ರಾಷ್ಟ್ರಗಳ ಶೃಂಗಸಭೆಗೆ ಕರೆ..
ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಕೇಳಿದಾಗ, ಉತ್ತರಿಸದೇ ಹೊರಟ ಬೆಲ್ಲದ್..
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ..