ಸ್ಯಾಂಡಲ್ ವುಡ್ ನ ಜನಪ್ರಿಯ ನಟರಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು. ಕನ್ನಡ ಸಿನಿ ರಂಗಕ್ಕೆ ಹಲವು ಸಿನಿಮಾಗಳನ್ನ ನೀಡಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ‘ನಟ ರಾಕ್ಷಸ’ ಎಂದೇ ಕರೆಸಿಕೊಳ್ಳುವ ಇವರು ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ನಟ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇದೀಗ ಇವರ ಹೊಸ ಸಿನಿಮಾದ ರಿಲೀಸ್ ಡೇಟ್ ಅನ್ನು ಫಿಕ್ಸ್ ಮಾಡಲಾಗಿದೆ.
ಧನಂಜಯ್ ನಟನೆಯ Once Upon A Time in ‘ಜಮಾಲಿಗುಡ್ಡ’ ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದ್ದು, ಇದೀಗ ಸಿನಿಮಾದ ರಿಲೀಸ್ ಡೇಟ್ ಅನ್ನು ಘೋಷಣೆ ಮಾಡಲಾಗಿದೆ. ಕುಶಾಲ್ ಗೌಡ ನಿರ್ದೇಶನದ ಈ ಸಿನಿಮಾವನ್ನು ಸೆಪ್ಟೆಂಬರ್ 9 ರಂದು ತೆರೆಯ ಮೇಲೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
Once Upon A Time in ‘ಜಮಾಲಿಗುಡ್ಡ’ 90ರ ದಶಕದಲ್ಲಿ ನಡೆಯುವ ವಿಭಿನ್ನ ಕಥೆಯಾಗಿದ್ದು, ಬಾರ್ ಸಪ್ಲೇಯರ್ ಪಾತ್ರದಲ್ಲಿ ಡಾಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಧನಂಜಯ್ ವೃತ್ತಿ ಬದುಕಿನ ವಿಭಿನ್ನ ಸಿನಿಮಾವಾಗಿದ್ದು, ಇವರ ಪಾತ್ರ ಪಯಣದಲ್ಲಿಯೇ ಸಾಗುತ್ತೆ. ಧನಂಜಯ್ ಗೆಟಪ್ ಮತ್ತು ಕಾಸ್ಟ್ಯೂಮ್ ನೋಡಿ್ದರೆ ಈ ಚಿತ್ರ ರಗಡ್ ಆಗಿದೆ ಅಂತ ಅನಿಸುತ್ತದೆ.
ಡಾಲಿ ಜೊತೆ ಅದಿತಿ ಪ್ರಭುದೇವ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೂ ಪ್ರಕಾಶ್ ಬೆಳವಾಡಿ, ಭಾವನ ರಾಮಣ್ಣ, ಕಾಮಿಡಿ ಕಿಲಾಡಿಗಳು ಸಂತು, ತ್ರಿವೇಣಿ, ಪ್ರಾಣ್ಯ, ನಂದ ಗೋಪಾಲ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನು ಈ ಸಿನಿಮಾದ ಡಬ್ಬಿಂಗ್ ನಡೆಯುತ್ತಿದ್ದು, ಅದೂ ಕೂಡ ಅಂತಿಮ ಹಂತದಲ್ಲಿದೆ. ಈ ಕಾರಣಕ್ಕೆ ಚಿತ್ರತಂಡ ಸೆಪ್ಟೆಂಬರ್ 9 ರಂದು ಸಿನಿಮಾವನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ.
ಈ ಸಿನಿಮಾ ಶ್ರೀಹರಿ ಅವರ ನಿರ್ಮಾಣದಲ್ಲಿ ಮೂಡಿ ಬರ್ತಿದ್ದು, ಕುಶಾಲ್ ಗೌಡ ಅವರ ನಿರ್ದೇಶನ ಈ ಸಿನಿಮಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಕಾರ್ತಿಕ್ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನವಿದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ