ಬೆಂಗಳೂರು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಾಳೆ ಜೂ 12ರಿಂದ ಒಂದು ವಾರದ ಕಾಲ ನಡೆಯಲಿದೆ. ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಗಾಗಿ ಶಿಕ್ಷಕರು ಆನ್ ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಗಾಗಿ ನಾಳೆಯಿಂದ ಜೂನ್ 19ರವರೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಕೆ ಬಳಿಕ ಆನ್ ಲೈನ್ ನಲ್ಲೇ ಅಕ್ನಾಲೆಡ್ಜ್ ಮೆಂಟ್ ( ಅರ್ಜಿ ಸ್ವೀಕೃತಿ) ಪಡೆಯಬಹುದಾಗಿದೆ. ಇನ್ನು ಸ್ವೀಕೃತಿಯನ್ನು ಜೂ 20ರೊಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕಿದ್ದು, ಅರ್ಜಿ ಪರಿಶೀಲನೆ ಮತ್ತು ಅನುಮೋದನೆ ಅಂದೇ ನಡೆಯಲಿದೆ. ಜೂ 22ರೊಳಗೆ ಪ್ರಾಧಿಕಾರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ವೀಕರಿಸಿದ ಅರ್ಜಿಗಳನ್ನು ಸಲ್ಲಿಸಲಿದ್ದಾರೆ.
ನಿರುದ್ಯೋಗಿಗಳಿಗೆ ಇಲ್ಲಿದೆ ಗುಡ್ ನ್ಯೂಸ್!! ಮಿಸ್ ಮಾಡದೇ ಈ ವಿಡಿಯೋ ನೋಡಿ