ದೆಹಲಿ: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸೋ ಉದ್ದೇಶದಿಂದ ಇಂದು ಪ್ರಧಾನಿ ನರೇಂದ್ರ ಮೋದಿ ಒಂದು ‘ರಾಷ್ಟ್ರ ಒಂದು ಚುನಾವಣೆ’ ಸಂವಾದಕ್ಕೆ ಸರ್ವಪಕ್ಷ ಸಭೆ ನಡೆಸಿದ್ದಾರೆ.
ಪದೇ ಪದೇ ಚುನಾವಣೆಗಳು ನಡೆಯೋದ್ರಿಂದ ಸರ್ಕಾರದ ಹಣ ವ್ಯರ್ಥವಾಗೋದಲ್ಲದೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ಮಾರಕ ಅನ್ನೋದು ಪ್ರಧಾನಿ ಮೋದಿ ಅಭಿಪ್ರಾಯ. ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ಇಂದು ಸರ್ವಪಕ್ಷ ಸಭೆ ಕೈಗೊಂಡಿರೋ ಪ್ರಧಾನಿ ಮೋದಿ ವಿಪಕ್ಷಗಳ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಇನ್ನು ಸರ್ವಪಕ್ಷ ಸಭೆಗೆ ತೆಲಂಗಾಣ ಸಿಎಂ ಕೆಸಿಆರ್,ಮಮತಾ ಬ್ಯಾನರ್ಜಿ ಮಾಯಾವತಿ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ ಮೊದಲಾದವರು ಗೈರಾಗಿದ್ದಾರೆ. ಇನ್ನು ತಮ್ಮ ಗೈರುಹಾಜರಿಗೆ ಸಮಜಾಯಿಷಿ ನೀಡಿರುವ ಮಾಯಾವತಿ, ಚುನಾವಣೆಯಲ್ಲಿ ಇವಿಎಂ ಬಳಕೆ ಕುರಿತಾಗಿ ಚರ್ಚೆ ಇದ್ದಿದ್ದರೆ ನಾನು ಸಭೆಗೆ ಬರುತ್ತಿದ್ದೆ ಅಂತ ಹೇಳಿದ್ದಾರೆ. ಒಂದು ರಾಷ್ಟ್ರ ಒಂದು ಚುನಾವಣೆ ಕುರಿತಾಗಿ ವಿಪಕ್ಷಗಳು ಈಗಾಲೇ ವಿರೋಧ ವ್ಯಕ್ತಪಡಿಸುತ್ತಿದ್ದು ಅವೈಜ್ಞಾನಿಕ ಅಂತ ಹೇಳಿವೆ.
ಎಲ್ರ ಕಾಲೆಳಿತದೆ ಕಾಲ!! ಅಂದು ಕುಸ್ತಿ ಇಂದು ದೋಸ್ತಿ..!! ಮಿಸ್ ಮಾಡದೇ ಈ ವಿಡಿಯೋ ನೋಡಿ