www.karnatakatv.net :ರಾಯಚೂರು : ನಗರದ ಪಶು ಸಂಗೋಪನ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಸ್ಥಾಳಂತರಕ್ಕೆ ವಿರೋಧಿಸಿ ಇಂದು ಹಲವು ಸಂಘಟನೆಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಪಶು ಸಂಗೋಪನ ಜಂಟಿ ಕಾರ್ಯಾಲಯ ರಾಯಚೂರಿನಿಂದ ಕಲ್ಬುರ್ಗಿ ಗೆ ಸ್ಥಳಾಂತರ ಮಾಡುವುದಕ್ಕೆ ನಾವು ಬಿಡುವುದಿಲ್ಲ ಎಂದು ಸಂಘಟನಕಾರರು ಒತ್ತಾಯ ಮಾಡಿದರು. ಕಚೇರಿಯನ್ನು ಸ್ಥಳಾಂತರ ಮಾಡುವಂತೆ ಪಶು ಪಾಲನ ಪಶು ವೈದ್ಯಕೀಯ ಇಲಾಖೆಯಿಂದ ಪತ್ರ ಬರೆದಿರುವುದನ್ನು ವಿರೋಧಿಸಿ ಪತ್ರದ ಮುಖಾಂತರ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನಿಡಿದ್ರು.
ಅನೇಕ ವರ್ಷಗಳಿಂದ ಯಾವುದೇ ಸಮಸ್ಯೆಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಕಚೇರಿ ಏಕಾಏಕಿ ಸ್ಥಳಾಂತರ ಮಾಡುವುದು ಇದು ರಾಯಚೂರು ಜನರಿಗೆ ಅನ್ಯಾಯಮಾಡಿದಂತಾಗಿದೆ ಎಂದರು . ಮುಂದಿನ ದಿನಗಳಲ್ಲಿ ಸ್ಥಳಾಂತರ ಮಾಡುವ ಕಾರ್ಯ ನಡೆದರೆ ಉಗ್ರ ಹೊರಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು