ನಮ್ಮ ಗುರಿ ಇರೋದು ಕಾಂಗ್ರೆಸ್‌ನ್ನು ಹಾಸನದಿಂದ‌ ದೂರ ಮಾಡಬೇಕು : ಸಂಸದ ಪ್ರಜ್ವಲ್ ರೇವಣ್ಣ

Hassan News: ಹಾಸನ: ಮೈತ್ರಿ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವಿಚಾರದ ಬಗ್ಗೆ ಹಾಸನದಲ್ಲಿ ಮಾತನಾಡಿದ ಸಂಸಜ ಪ್ರಜ್ವಲ್ ರೇವಣ್ಣ, ಆ ರೀತಿ ಏನೂ ಇಲ್ಲವೆಂದಿದ್ದಾರೆ.

ಜಿಲ್ಲಾ ವಕೀಲರ ಸಂಘದಲ್ಲಿ ಮತಯಾಚನೆ ಮಾಡಿದ ಪ್ರಜ್ವಲ್‌, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಆ ರೀತಿ ಏನೂ ಇಲ್ಲ. ಸೆಂಟ್ರಲ್‌ನಿಂದ ಬಿಜೆಪಿಯ ಜನರಲ್ ಸೆಕ್ರೆಟರಿ ಬಂದಿದ್ದಾರೆ. ಅವರು ದೇವೇಗೌಡರು ಕುಳಿತುಕೊಂಡು ಚರ್ಚೆ ಮಾಡ್ತಾರೆ. ಒಂದು ಸೀಟ್ ಹೆಚ್ಚುವರಿಯಾಗಿ ಕೇಳುತ್ತಿದ್ದೇವೆ. ಅದರ ಬಗ್ಗೆ ಚರ್ಚೆ ಆಗುತ್ತೆ, ಚರ್ಚೆ ಆದ್ಮೇಲೆ ಎಲ್ಲಾ ಸರಿ ಹೋಗುತ್ತೆ. ಅದರ ಬಗ್ಗೆ ಏನು ತೊಂದರೆ ಇಲ್ಲ. ಒಂದು ಸೀಟ್ ಹೆಚ್ಚುವರಿಯಾಗಿ ಕೇಳ್ತಿದ್ದಾರೆ, ಅದು ಚರ್ಚೆ ಆದ್ಮೇಲೆ ಸರಿ ಹೋಗುತ್ತೆ ಎಂದಿದ್ದಾರೆ.

ಹಾಸನದಲ್ಲಿ ಬಿಜೆಪಿ ನಾಯಕರ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಅದರ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ನನ್ನ ಗಮನಕ್ಕೆ ಬಂದರೆ ಚರ್ಚೆ ಮಾಡ್ತಿನಿ. ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡ್ತಾ ಇದ್ದೀವಿ. ಬಿಜೆಪಿಯ ಹಿರಿಯ ಮುಖಂಡರು, ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ನಾನು ಕೂಡ ಯಡಿಯೂರಪ್ಪ ಸಾಹೇಬರ ಟೈಂ ಕೇಳಿ ನಾಳೆ, ನಾಡಿದ್ದರೊಳಗೆ ಭೇಟಿ ಮಾಡ್ತಿನಿ. ಎಲ್ಲರೂ ಒಂದೇ ವಿಶ್ವಾಸದಲ್ಲಿ ಚುನಾವಣೆ ಎದುರಿಸುತ್ತೇವೆ. ನಮ್ಮ ಗುರಿ ಇರೋದು ಕಾಂಗ್ರೆಸ್‌ನ್ನು ಹಾಸನದಿಂದ‌ ದೂರ ಮಾಡಬೇಕು. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಮಂತ್ರಿ ಮಾಡಿ ದೇವೇಗೌಡರ ಕೈ ಬಲಪಡಿಸಬೇಕು. ಜಿಲ್ಲೆಯ ಅಭಿವೃದ್ಧಿಗೋಸ್ಕರ ಎಲ್ಲಾ ರೀತಿ ಶ್ರಮಿಸುತ್ತೇವೆ ಎಂದಿದ್ದಾರೆ.

ಮಂಡ್ಯದಿಂದ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಆ ವಿಚಾರದ ಬಗ್ಗೆ ನಮ್ಮ ಹತ್ತಿರ ಮಾಹಿತಿ ಇಲ್ಲ. ಮಂಡ್ಯದ ಜನ ತೀರ್ಮಾನ ಮಾಡ್ತಾರೆ. ಅಲ್ಲಿಯ ಕಾರ್ಯಕರ್ತರ ಒತ್ತಡ ಕೂಡ ಇದೆ. ಅವರೆಲ್ಲರೂ ಏನು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ, ದೇವೇಗೌಡರು ಏನು ಸೂಚಿಸಿತ್ತಾರೆ. ಕುಮಾರಣ್ಣ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದರ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ತಿಳಿಸುತ್ತಾರೆ. ಎಲ್ಲರ ವಿಶ್ವಾಸ ಪಡೆದು ಚುನಾವಣೆಗೆ ಹೋಗುವ ಕೆಲಸ ಮಾಡ್ತಾರೆ

ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..

ಟಿಕೇಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಸಂಸದ ಮುನಿಸ್ವಾಮಿ ಏನು ಹೇಳಿದರು ಗೊತ್ತಾ..?

10 ದಿನದಲ್ಲಿ 100 ಕೋಟಿ ಗಳಿಕೆ ದಾಟಿದ ಶೈತಾನ್ ಸಿನಿಮಾ

About The Author