Hubli News: ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಬಂದಿರೋದು ಖುಷಿ ತಂದಿದೆ. ಕಳೆದ ಆರು ತಿಂಗಳ ಹಿಂದೆಯೇ ಶೆಟ್ಟರ್ ಘರ್ ವಾಪ್ಸಿ ಕುರಿತು ನನಗೆ ಹೇಳಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ದೊಡ್ಡವರ ಜೊತೆಗೆ ಸಭೆ ಇತ್ತು, ಹಾಗಾಗಿ ಶೆಟ್ಟರ್ ಬಿಜೆಪಿ ಸೇರ್ಪಡೆಗೆ ಹೋಗಲು ಸಾಧ್ಯವಾಗಿಲ್ಲ ಎಂದರು.
ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದ 28 ಕ್ಕೆ 28 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು, ಆಕಸ್ಮಿಕ ಶೆಟ್ಟರ್ ಸೇರ್ಪಡೆಗೆ ನನ್ನ ವಿರೋಧವಿಲ್ಲ, ವಿರೋಧ ಏನಾದರೂ ಇದ್ದರೆ ನಿಮಗೆ ಹೇಳತ್ತೇನೆ. ಇದೀಗ ಅವರು ವಾಪಾಸ್ ಬಂದಿರೋದು ಸಂತೋಷ, ಉಳಿದಿದ್ದು ಅವರನ್ನೇ ಕೇಳಿ ಎಂದರು.
ಶೆಟ್ಟರ್ ಸೇರ್ಪಡೆ ಕುರಿತು ಸ್ಥಳೀಯ ನಾಯಕರಿಗೆ ಮಾಹಿತಿ ಇತ್ತು. ನಾನು ದೆಹಲಿಯಲ್ಲಿದ್ದೆ, ಅರವಿಂದ ಬೆಲ್ಲದ ನನ್ನ ಜೊತೆಗೆ ಇರಲಿಲ್ಲ, ಆದರೆ ಹಿಂದಿನ ದಿನ ಜೊತೆಗೆ ಇದ್ದರು, ನಮಗೆ ಲಿಂಗಾಯತ ಸೇರಿದಂತೆ ಎಲ್ಲರೂ ಬೇಕು ಎಂದರು.
ಲಕ್ಷ್ಮಣ ಸವದಿ ಅವರಲ್ಲಿ ನಮ್ಮ ವೈಚಾರಿಕತೆ ರಕ್ತವಿದೆ. ಅವರು ಬಂದರೂ ನಮ್ಮ ಸ್ವಾಗತವಿದೆ ಎಂದರು.
ಧಾರವಾಡ ಲೋಕಸಭಾ ಚುನಾವಣೆ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷ ಈಗಾಗಲೇ ಚುನಾವಣೆ ತಯಾರಿ ನಡೆಸಿದೆ. ಅಭ್ಯರ್ಥಿ ಹೆಸರು ಘೋಷಣೆ ಮುನ್ನ ನಾನು ಏನೂ ಮಾತನಾಡುವುದಿಲ್ಲ, ಆದರೆ ನಾನು ಚುನಾವಣೆ ತಯಾರಿಯಲ್ಲಿದ್ದೇನೆ. ಧಾರವಾಡ ಲೋಕಸಭಾ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಹೇಳಿದರು.
ಈ ಮಧ್ಯೆ ಶಾಸಕ ಅರವಿಂದ ಬೆಲ್ಲದ ಪ್ರವೇಶ ಮಾಡಿ, ಅವರೇ ರೀ, ಅವರನ್ನು ಬಿಟ್ಟು ಯಾರು? ಅಭ್ಯರ್ಥಿ ಬಗ್ಗೆ ಯಾವ ಚರ್ಚೆ ಇಲ್ಲ, ಸಾಹೇಬರೇ ಅಭ್ಯರ್ಥಿ ಎಂದರು.
ಗಾಲಿ ಜನಾರ್ದನ ರೆಡ್ಡಿ ಕೂಡಾ ಓರಿಜಿನಲ್ ಬಿಜೆಪಿ, ಅವರು ಕೂಡಾ ಪುನಃ ಪಕ್ಷಕ್ಕೆ ಬರಬಹುದು, ಇವತ್ತು ಜಗದೀಶ್ ಶೆಟ್ಟರ್ ಕಾರ್ಯಕಾರಣಿ ಸಭೆಯಲ್ಲಿ ಸಿಕ್ಕಿದ್ರು, ವೆಲಕಮ್ ಬ್ಯಾಕ್ ಎಂದು ಹೇಳಿದ್ದೇನೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
‘ರಾಜ್ಯದಲ್ಲಿ ಏನೇ ಕೆಲಸ ಮಾಡಿದರೂ, ಮೋದಿ ಅವರ ಕೆಲಸವನ್ನು ಓವರ್ ಟೇಕ್ ಮಾಡಲು ಸಾಧ್ಯವಿಲ್ಲ’
ಸಿಎಂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಾಯಕತ್ವದ ಬಗ್ಗೆ ಶೆಟ್ಟರ್ ಹೇಳಿದ್ದೇನು..?