ನಮ್ಮದು ಹಿಂದೂ ವಿರೋಧಿ ಮಾನಸಿಕತೆ ವಿರುದ್ಧದ ಹೋರಾಟ: ಗಂಗಾಧರ್ ಕುಲಕರ್ಣಿ

Dharwad News: ಧಾರವಾಡ: ತಡಕೋಡ ಗಲಾಟೆ ವಿಚಾರವಾಗಿ ನೊಟೀಸ್ ಪಡೆದಿದ್ದ ಗಂಗಾಧರ್ ಕುಲಕರ್ಣಿ ವಿಚಾರಣೆಗೆ ಹಾಜರಾಗಿದ್ದು, ಬಳಿಕ ಮಾಧ್ಯಮದವರ ಬಳಿ ಮಾತನಾಡಿದ್ದಾರೆ.

ತಡಕೋಡ ಘಟನೆ ಹಿನ್ನೆಲೆ ವಿಚಾರಣೆಗೆ ಕರೆದಿದ್ದರು. ಇವತ್ತು ವಿಚಾರಣೆಗೆ ಹಾಜರಾಗಿದ್ದೆ. ಡಿವೈಎಸ್ಪಿ, ಪಿಎಸ್‌ಐ ಅವರು ಇದ್ದರು. ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಪೊಲೀಸರ ಕ್ರಮದ ಬಗ್ಗೆ ನಮ್ಮ ತಕರಾರು ಇಲ್ಲ. ನಮ್ಮದು ಹಿಂದೂ ವಿರೋಧಿ ಮಾನಸಿಕತೆ ವಿರುದ್ಧದ ಹೋರಾಟ. ಸುಪ್ರೀಂ ಕೋರ್ಟ್ ತೀರ್ಪಿನಡಿ ರಾಮಮಂದಿರ ಆಗಿದೆ ಎಂದು ಗಂಗಾಧರ್ ಹೇಳಿದ್ದಾರೆ.

ಸುಪ್ರಿಂಕೋರ್ಟ್ ತೀರ್ಪಿಗೆ ಸವಾಲು ಹಾಕಿದಂತೆ ಸದ್ದಾಂ ಸ್ಟೇಟಸ್ ಇಟ್ಟಿದ್ದ. ಅವತ್ತು ಇಂಥದ್ದೇ ಆರೇಳು ಕಡೆ ಆಗಿದೆ. ಇಸ್ಲಾಮಿಕ್ ಪವರ್ ತೋರಿಸುತ್ತೇವೆ. ಹಸಿರು ಧ್ವಜ ಹಾರಿಸುತ್ತೇವೆ ಅಂತಾ ಸ್ಟೇಟಸ್ ಇಟ್ಟಿದ್ದರು. ನಮ್ಮದು ಅದರ ವಿರುದ್ಧದ ಹೋರಾಟ. ಅದರ ವಿರುದ್ಧ ನಾವು ಸದ್ದಾಂ ಮನೆಗೆ ಹೋಗುವ ಪೋಸ್ಟ್ ಹಾಕಿದ್ದೆವು. ಆ ರೀತಿಯ ಮಾನಸಿಕತೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನೆಲ್ಲ ನಾನು ಪೊಲೀಸರಿಗೆ ತಿಳಿಸಿದೆ ಎಂದಿದ್ದಾರೆ.

ಅವರು ಈಗೆಲ್ಲ ಸರಿ ಹೋಗುತ್ತಿದೆ. ನಿಮ್ಮ ಸಹಕಾರ ಬೇಕು ಅಂತಾ ಕೇಳಿದ್ದಾರೆ. ನಾವು ಕಾನೂನು ವಿರುದ್ಧ ಎಂದಿಗೂ ಹೋಗುವುದಿಲ್ಲ. ಸದ್ದಾಂ ಸ್ಟೇಟಸ್ ಇಟ್ಟ ಮಾಹಿತಿ ಪೊಲೀಸರಿಗೆ ತಿಳಿಸಿದ್ದೇ ನಾವು. ಆತ ಎಲ್ಲೆಲ್ಲಿ ಹೋಗಿದ್ದ ಎಲ್ಲವೂ ಗೊತ್ತಿತ್ತು. ನಾವು ಅಲ್ಲಿಯೇ ಹೋಗಬಹುದಿತ್ತು. ಆದರೆ ನಾವು ಕಾನೂನಿಗೆ ಗೌರವ ಕೊಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದೆವು.

ತಡಕೋಡದಲ್ಲಿ ಅಶಾಂತಿಯಾಗುವುದು ಬೇಡ. ಇದಕ್ಕೆ ಸಹಕಾರ ಕೊಡಿ ಎಂದು ಕೇಳಿದರು. ಗ್ರಾಮದ ವಾತಾವರಣ ಕೆಡಿಸುವ ಉದ್ದೇಶ ನಮಗಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಪೊಲೀಸರು ಮುಂದೆ ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಅದನ್ನು ನೋಡಿ ನಾವು ಮುಂದುವರೆಯುತ್ತೇವೆ ಎಂದು ಹೇಳಿದ್ದಾರೆ ಎಂದು ಕುಲಕರ್ಣಿ ಹೇಳಿದ್ದಾರೆ.

ರಾಮಮಂದಿರ ಉದ್ಘಾಟನೆಯಾದ ಬಳಿಕ, ಸದ್ದಾಂ ಎಂಬ ಯುವಕ, ರಾಮಮಂದಿರದ ಫೋಟೋ ಮೇಲೆ ಹಸಿರು ಧ್ವಜ ಹಾರಿಸಿ, ಇಸ್ಲಾಮಿಕ್ ಪವರ್ ಎಂದು ಬರೆದಿದ್ದ. ಇದನ್ನು ವಿರೋಧಿಸಿ, ಕುಲಕರ್ಣಿ ಹೇಳಿಕೆ ನೀಡಿದ್ದರು. ಈ ಕಾರಣಕ್ಕಾಗಿ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು.

ಆಸ್ಟ್ರೇಲಿಯಾಕ್ಕೆ ಕೊಕೇನ್‌ ರಫ್ತು ಮಾಡುತ್ತಿದ್ದ ಭಾರತೀಯ ದಂಪತಿಯ ಬಂಧನ

ಸಾವರ್ಕರ್‌ ಪತ್ನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ನಟಿ, ಬಿಗ್‌ಬಾಸ್ ಚೆಲುವೆ ಅಂಕಿತಾ ಲೋಖಂಡೆ

ಅಭಿಮಾನಿಯ ನಡೆಗೆ ಸಿಟ್ಟಾಗಿ, ಮೈಕ್ ಬಿಸಾಡಿದ ಪಾಕಿಸ್ತಾನಿ ಸಿಂಗರ್

About The Author