ಬೆಳಗಾವಿ : ಕಾಂಗ್ರೆಸ್ ಪಕ್ಷ ಮುಗ್ಧ ಮುಸಲ್ಮಾನರನ್ನು ಬಳಸಿಕೊಂಡು ರಾಜಕಾರಣ ಮಾಡುತ್ತಿದೆ. ಮುಸ್ಲಿಂ ಯುವಕರು ರಾಜಕೀಯದಲ್ಲಿ ಬೆಳೆಯಲು ಅವಕಾಶ ನೀಡುತ್ತಿಲ್ಲ ಅಂತ ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಓವೈಸಿ, ಮುಸ್ಲಿಂ ಸಮುದಾಯದ ಯುವಕರು ನಾಯಕತ್ವ ಗುಣ ಅಳವಡಿಸಿಕೊಂಡು ರಾಜಕೀಯವಾಗಿ ಬೆಳೆಯಬೇಕು. ಕೆಲವು ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಬಳಸಿಕೊಂಡು ಗುಲಾಮರನ್ನಾಗಿ ಮಾಡಿಕೊಂಡಿವೆ. ಹೀಗಾಗಿ ಹಿಂದುಳಿದ ಸಮುದಾಯದ ಜನ ಎಚ್ಚೆತ್ತುಕೊಳ್ಳಬೇಕು ಅಂತ ಕರೆ ನೀಡಿದ್ರು.
ಇನ್ನು ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಎಐಎಂಐಎಂ ಪಕ್ಷದಿಂದ ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅವರ ಗೆಲುವು ನಿಶ್ಚಿತ ಅಂತ ವಿಶ್ವಾಸ, ವ್ಯಕ್ತಪಡಿಸಿದ ಓವೈಸಿ, ಕಳೆದ ಬಾರಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿದ್ದೆವು ಆದರೆ ನಂತರ ಕಾಂಗ್ರೆಸ್ ಜೊತೆ ಅವರು ಹೊಂದಾಣಿಕೆ ಮಾಡಿಕೊಂಡು ನಮಗೆ ದ್ರೋಹ ಮಾಡಿದ್ರು ಅಂತ ಓವೈಸಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ತಾಲಿಬಾನಿಯರ ಅಟ್ಟಹಾಸದ ಕುರಿತ ಪ್ರಶ್ನೆಗೆ ಪ್ರತಿಕ್ರಿಸಿದ ಅಸಾದುದ್ದಿನ್ ಓವೈಸಿ ಅಫ್ಘಾನಿಸ್ತಾನದಲ್ಲಿ ನಮ್ಮದು ಯಾವುದೇ ರೀತಿಯ ಸಂಬಂಧಗಳು ಇಲ್ಲ. ಈ ಕುರಿತು ನರೇಂದ್ರ ಮೋದಿ ಬಾಯ್ಬಿಟ್ಟು ಮಾತನಾಡಬೇಕು ಎಂದರು. ಜೊತೆಗೆ ತೈಲಬೆಲೆ ಏರಿಕೆ ಕುರಿತಾಗಿ ಕೇಂದ್ರ ಸ್ಪಷ್ಟನೆ ನೀಡಬೇಕು ಅಂತ ಇದೇ ವೇಳೆ ಕೇಂದ್ರಕ್ಕೆ ಕುಟುಕಿದ್ರು.