ರಾಜ್ಯ ಸರ್ಕಾರ ರೈತರಿಗಾಗಿ ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದೆ. ರೈತರು ಇಲ್ಲಿಯವರೆಗೂ ಒಂದಲ್ಲಾ ಒಂದು ದಾಖಲೆಗಳನ್ನು ತೆಗೆದುಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದುç, ಅಲೆದರೂ ಕೆಲವುರೈತರು ದಾಖಲೆ ಸಿಗದೆ ಅಸಮಾಧಾನದಿಂದ ಹೊರಬರುತ್ತಿದ್ದರು, ಇದೆಲ್ಲದಕ್ಕೂ ಸರ್ಕಾರ ಬ್ರೇಕ್ ಹಾಕಿ ರೈತರ ಮನೆಬಾಗಿಲಿಗೆ ಪಹಣಿ, ಆದಾಯಪ್ರಮಾಣ ಪತ್ರ, ಜಾತಿ ಪ್ರಮಾಣಪತ್ರಗಳನ್ನು ನೀಡುವ ಯೋಜನೆಗೆ ಕೈ ಹಾಕಿದೆ.
ರಾಜ್ಯದ 62.85 ಲಕ್ಷ ರೈತರ ಪಹಣಿ, ಅಟ್ಲಾಸ್ (ಹಿಸ್ಸಾ ಸ್ಕೆಚ್) ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಅವರವರ ಮನೆಬಾಗಿಲಿಗೆ ಉಚಿತವಾಗಿ ತಲುಪಿಸುವ ಯೋಜನೆಗೆ ಇದೇ 26 ರಂದು ಸರ್ಕಾರ ಚಾಲನೆ ನೀಡಿದೆ.
ಅಂದಾಜು 62,85819 ಜನ ರೈತರಿಗೆ ದಾಖಲೆಗಳು ಸಿಗುತ್ತವೆ,
ಈ ಯೋಜನೆಗೆ ರಾಜ್ಯಮಟ್ಟದಲ್ಲಿ ಗಣರಾಜ್ಯೋತ್ಸವ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಚಾಲನೆ ನೀಡಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರು ಚಾಲನೆ ನೀಡಲಿದ್ದಾರೆ.
ಈ ಯೋಜನೆಗೆ ಸುತ್ತೋಲೆ ಹೊರಡಿಸಿರುವ ಕಂದಾಯ ಇಲಾಖೆಯ ಫ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಇ ಆಡಳಿತ ಇಲಾಕೆಯಿಂದ
ಪಹಣಿ, ಜಾತಿ , ಆದಾಯ ಪ್ರಮಾಣಪತ್ರವನ್ನು ಕುಟುಂಬವಾರು ಪಡೆದು ಮತ್ತು ಮೋಜಣಿ ತಂತ್ರಾoಶದಿoದ ಸರ್ವೇ ಮುಗಿಸಿ ಆ ದಾಖಲೆಯನ್ನು ಫೈಲ್ ನಲ್ಲಿ ತೈತ ಕುಟುಂಬದ ಮನೆಬಾಗಿಲಿಗೆ ತಲುಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಟಲ್ ಜಿ ಜನಸ್ನೇಹಿ ನಿರ್ದೇಶನಾಲಯವು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಜಿಲ್ಲಾ ಮಟ್ಟದಲ್ಲಿ ಮುದ್ರಿಸಲು ಅನುಕೂಲವಾಗುವಂತೆ
ಜಿಲ್ಲಾಧಿಕಾರಿಗಳಿಗೆ ಜ.15 ರ ಒಳಗೆ ಕಳುಹಿಸಬೇಕು. ನಂತರ ಕಂದಾಯ ಅಧಿಕಾರಿಗಳು ಪರಿಶೀಲಿಸಿ ಜನವರಿ 26 ವರಂದು ರೈತರ ಮನೆಬಾಗಿಲಿಗೆ
ತಲುಪಿಸುವುದು ಈ ಯೋಜನೆಯಾಗಿದೆ.