Wednesday, April 16, 2025

Latest Posts

ನಾಲಿಗೆ ಮೂಲಕ ಪೈಂಟಿಂಗ್..! ನಿಬ್ಬೆರಗಾದ ಜನ..!

- Advertisement -

Special Story:

Feb:24: ನಾಲಿಗೆಯನ್ನು ರುಚಿ ಸವಿಯೋ ಸಲುವಾಗಿ  ಎಲ್ಲರೂ  ಬಳಸಿಕೊಂಡರೆ ಇಲ್ಲೊಬ್ಬ ತನ್ನ ನಾಲಿಗೆ ಮೂಲಕವೇ ಪೈಂಟಿಂಗ್  ಮಾಡಿ  ಆಶ್ವರ್ಯಕ್ಕೆ  ಕಾರಣವಾಗಿದ್ದಾನೆ. ಇಲ್ಲೊಬ್ಬ ವ್ಯಕ್ತಿ ನಾಲಿಗೆಯನ್ನು ಬಳಸಿ ಅದ್ಭುತ ಪೇಂಟಿಂಗ್‌ನ್ನೇ ಬಿಡಿಸ್ತಾನೆ. ನಾಲಿಗೆ ಬಳಸಿಕೊಂಡು ಪೇಂಟಿಂಗಾ ? ಅದು ಹೇಗೆ ಸಾಧ್ಯ  ಅಂತ  ಪ್ರಶ್ನೆ ಮೂಡಬಹುದು ಅದಕ್ಕೆ ಕಾರಣ ಆತನಿಗಿರೋದು ಅಷ್ಟು ಉದ್ದದ ನಾಲಿಗೆ.

ಜಗತ್ತಿನ ಅತೀ ಉದ್ದದ ನಾಲಿಗೆ ಹೊಂದಿದ ವ್ಯಕ್ತಿ ಈತ:
ಅಮೆರಿಕದ ನಿಕ್‌ ಸ್ಟೋಬಲ್ರಾ ಎಂಬ ವ್ಯಕ್ತಿ 10.1 ಸೆ.ಮೀ ಉದ್ದದ ನಾಲಿಗೆ ಯನ್ನು ಹೊಂದಿರುವ ಮೂಲಕ 2012ರಿಂದಲೂ ಜಗತ್ತಿನ ಅತೀ ಉದ್ದದ ನಾಲಿಗೆ ಹೊಂದಿದ ವ್ಯಕ್ತಿ ಎಂಬ ಗಿನ್ನೆಸ್‌ ವಿಶ್ವ ದಾಖಲೆ   ಹೊಂದಿದ್ದಾನೆ. ಆ ನಾಲಿಗೆಯಿಂದಲೇ ನಿಕ್ಕಿ ಪೇಂಟಿಂಗ್‌ ಮಾಡುವ ವಿಶಿಷ್ಟ ಹವ್ಯಾಸ ಬೆಳೆಸಿಕೊಂಡಿದ್ದಾನೆ. ನಿಕ್ಕಿ ತನ್ನ ನಾಲಿಗೆಯಿಂದ ಪೇಂಟಿಂಗ್‌ ಮಾಡುತ್ತಿರುವ ವೀಡಿಯೋ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿದ್ದು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟಿದ್ದಾರೆ. ಕೆಲವರು ವಿಶಿಷ್ಟಪ್ರತಿಭೆ ಎಂದು ಕೊಂಡಾಡಿದ್ದಾರೆ. 9.75 ಸೆ.ಮೀ ಉದ್ದದ ನಾಲಿಗೆ ಮೂಲಕ ಶನೆಲ್‌ ಟ್ಯಾಪರ್‌ ವಿಶ್ವದ ಅತೀ ಉದ್ದದ ನಾಲಿಗೆ ಇರುವವರು ಎಂಬ ಗಿನ್ನೆಸ್‌ ದಾಖಲೆ ಹೊಂದಿದ್ದಾರೆ ಎನ್ನಲಾಗಿದೆ.

ಉಸಿರು ನಿಂತ ಮಗುವಿಗೆ ಮರು ಜೀವ..! ಅಚ್ಚರಿಗೆ ಸಾಕ್ಷಿಯಾದ ವೈದ್ಯಲೋಕ..!

“ನಮಗೆ ಮೋದಿಯಂತಹ ನಾಯಕನನ್ನು ಕರುಣಿಸು”…! ಪಾಕ್ ಪ್ರಜೆಯ ಭಾವುಕ ಮಾತು ಇದು…!

ನಿಗೂಢವಾಗಿ ಸಾವನ್ನೊಪ್ಪಿದ ರಷ್ಯಾ ಅಧ್ಯಕ್ಷ ಪುಟಿನ್ ಆಪ್ತೆ

 

 

- Advertisement -

Latest Posts

Don't Miss