Thursday, February 13, 2025

Latest Posts

ನಿಗೂಢವಾಗಿ ಸಾವನ್ನೊಪ್ಪಿದ ರಷ್ಯಾ ಅಧ್ಯಕ್ಷ ಪುಟಿನ್ ಆಪ್ತೆ

- Advertisement -

intrnational story

ಎಷ್ಟಿದ್ದರೇನು ಏನಿದ್ದರೇನು ಈ ಸಾವು ಎಂಬುವುದು  ಯಾವಾಗ, ಹೇಗೆ,  ಎಲ್ಲಿ ಬರುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಇಡಿ ದೇಶವನ್ನೇ ಬೆಚ್ಚಿಬೀಳಿಸಿದ ರಷ್ಯಾ ತನ್ನವರನ್ನೆ ರಕ್ಷಿಸಲು ವಿಫಲವಾಗುತ್ತಿದೆ. ಸದಾಕಾಲ ತನ್ನ ಪಕ್ಕದಲ್ಲಿರುವ ಆಪ್ತರನ್ನು ಕಾಪಾಡಿಕೊಳ್ಳಲು ಅಗುತ್ತಿಲ್ಲ ರಷ್ಯಾ ಅಧ್ಯಕ್ಷರ ಕೈಯಲ್ಲಿ. ಏನಿದು ಸ್ಟೋರಿ ಅಂತೀರಾ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರದ ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಣಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ವರದಿಯಾಗಿದೆ. ರಷ್ಯಾದ ಪೂರ್ವ ಮಿಲಿಟರಿ ವಲಯದ ಹಣಕಾಸು ಮುಖ್ಯಸ್ಥೆ 54 ವರ್ಷದ ಮರಿನಾ ಯಾಕಿನಾ ಸೇಂಟ್‌ ಪೀಟರ್ಸ್‌ಬರ್ಗ್‌ನ ಜಮಾಶೈನ್‌ ಹೋಟೆಲ್‌ ಒಂದರ ಕೋಣೆಯ ಕಿಟಕಿಯಿಂದ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸೇಂಟ್‌ಪೀಟರ್ಸ್‌ಬರ್ಗ್ ಪೊಲೀಸರು, ‘ಮರಿನಾ ಯಾಕಿನಾ ಹೋಟೆಲ್‌ನ 16 ನೇ ಮಹಡಿಯ 160 ಅಡಿಯಿಂದ ಬಿದ್ದು ಮೃತಪಟ್ಟಿದ್ದು. ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಮರೀನಾ ಅವರ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಆತ್ಮಹತ್ಯೆಯೋ-ಕೊಲೆಯೋ? ಎಂಬ ಅನುಮಾನ ಮೂಡುವಂತೆ ಮಾಡಿದೆ. ರಷ್ಯಾ ಉಕ್ರೇನ್‌ನ ಆಕ್ರಮಣ ಮಾಡುವುದಕ್ಕೆ ಏನೇನು ಹಣಕಾಸು ವ್ಯವಹಾರ ಮಾಡಿದೆ? ಎಂಬುದಕ್ಕೆ ಮರಿನಾ ಪ್ರಮುಖ ಸಾಕ್ಷ್ಯವಾಗಿದ್ದರು ಎನ್ನಲಾಗಿದೆ. ಅಂತೆಯೇ ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮರಿನಾ ಮಾಜಿ ಪತಿ, ‘ಮರಿನಾ ಯಾಕಿನಾ ತಂಗಿದ್ದ ಹೋಟೆಲ್‌ನಿಂದ ತನಗೆ ಕರೆ ಬಂದಿತ್ತು. ನಾನು ಒಂದು ವಿಷಯ ತಿಳಿಸಲು ಪೊಲೀಸರ ಬಳಿ ಹೋಗಬೇಕಿದೆ ಎಂದು ಹೇಳಿದ್ದಳು. ಆದರೆ, ಅದಾದ 10 ನಿಮಿಷದ ಬಳಿಕ ಆಕೆ ಸಾವಿನ ಸುದ್ದಿ ಬಂತು’ ಎಂದು  ಹೇಳಿದ್ದಾರೆ.

ಅನಿತಾ ಕುಮಾರಸ್ವಾಮಿ ಮತ್ತು ಅಶ್ವತ್ಥ್ ನಾರಾಯಣ ಮಧ್ಯೆ ಮಾತಿನ ಕಾಳಗ !

ಏರೋ ಇಂಡಿಯಾ ಶೋ; ಇಂದು ಅದ್ಧೂರಿ ತೆರೆ !

ವೈದ್ಯ ಲೋಕವನ್ನೆ ಅಚ್ಚರಿ ಮಾಡಿಸಿದ ಚಿಕಿತ್ಸೆ..!

- Advertisement -

Latest Posts

Don't Miss