Saturday, April 19, 2025

Latest Posts

ಇಸ್ರೇಲ್‌ಗೆ ಪಾಕ್ ಸಪೋರ್ಟ್: ಹಮಾಸ್ ವಿರುದ್ಧ ಶಸ್ತ್ರಾಸ್ತ್ರ ಸರಬರಾಜು..?

- Advertisement -

National News: ಎಲ್ಲ ಮುಸ್ಲಿಂ ರಾಷ್ಟ್ರಗಳು ಪ್ಯಾಲೇಸ್ತಿನ್, ಹಮಾಸ್ ಉಗ್ರರನ್ನು ಬೆಂಬಲಿಸುತ್ತಿದ್ದು, ಪಾಕ್ ಮಾತ್ರ ಇಸ್ರೇಲ್ ಪರ ನಿಂತಿದೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೇ, ಪಾಕ್ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸಹ ಪೂರೈಸುತ್ತಿದೆಯಂತೆ.

ಈ ಬಗ್ಗೆ ಪೀಪಲ್‌ ಟಾಕ್ ಶೋಸ್ ಟ್ವೀಟ್ ಮಾಡಿದ್ದು, ಪಾಕಿಸ್ತಾನವು ಇಸ್ರೇಲ್‌ಗೆ 155 ಎಂ ಎಂ ಶೆಲ್‌ಗಳನ್ನು ರಫ್ತು ಮಾಡುತ್ತಿದೆ. ಜಾಗತಿಕ ಪೂರೈಕೆಗಳ ಕೊರತೆಯಿಂದಾಗಿ, ಪಾಕಿಸ್ತಾನ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಸುತ್ತಿದೆ.

ಬ್ರಿಟೀಷ್ ಏರ್‌ಫೋರ್ಸ್ RRR6664/5 ಬಹ್ರೇನ್‌ನಿಂದ ರಾವಲ್ಪಿಂಡಿ PAF ನೂರ್ ಖಾನ್ ಬೇಸ್‌ಗೆ, ನೂರ್ ಖಾನ್ ಬೇಸ್‌ನಿಂದ ಮತ್ತೆ ಬಹ್ರೇನ್‌ಗೆ ಹಾರಿದೆ. ಮತ್ತೆ ಬಹ್ರೇನ್‌ನಿಂದ ಡುಕುಮ್, ಡುಕುಮ್‌ನಿಂದ ಓಮನ್‌, ಓಮನ್‌ನಿಂದ ಇಸ್ರೇಲ್‌ಗೆ ಪಾಕ್‌ನಿಂದ ಶಸ್ತ್ರಾಸ್ತ್ರ ಸರಬರಾಜಾಗಿದೆ. ಹಾಗಾಗಿ ಈಗ ಪ್ಯಾಲೇಸ್ತಿನ್ ನಾಗರಿಕರ ಮತ್ತು ಮಕ್ಕಳ ರಕ್ತವು ಪಾಕಿಸ್ತಾನ ಸೈನಿಕರ ಕೈಯಲ್ಲಿದೆ ಎಂದು ಟ್ವೀಟ್ ಮಾಡಿದೆ.

ಈ ಮೂಲಕ ಪಾಕ್ತಿಸ್ತಾನವು ಇಸ್ರೇಲ್‌ಗೆ ಸಪೋರ್ಟ್ ಮಾಡುತ್ತಿರುವುದು ಖಾತರಿಯಾಗಿದೆ. ಇನ್ನು ಅಮೆರಿಕವೂ ಕೂಡ ಇಸ್ರೇಲ್‌ಗೆ ಬೆಂಬಲಿಸುತ್ತಿದ್ದು, ಇಸ್ರೇಲ್‌ಗೆ ಬೇಕಾದಷ್ಟು ಶಸ್ತ್ರಾಸ್ತ್ರ್, ರಾಕೇಟ್ ಲಾಂಚರ್‌ ಸೇರಿ ಹಲವು ಯುದ್ಧೋಪಕರಣಗಳನ್ನು, ಸೇನಾ ಪಡೆಗಳನ್ನು ನೀಡಿದೆ.

ಎಲ್ಲ ಮುಸ್ಲಿಂ ರಾಷ್ಟ್ರಗಳು ಸೇರಿ, ಪ್ಯಾಲೇಸ್ತಿನ್‌ಗೆ ಬೆಂಬಲಿಸಬೇಕು. ಇಸ್ರೇಲ್‌ನ್ನು ಭಯೋತ್ಪಾದಕ ದೇಶವೆಂದು ಘೋಷಣೆ ಮಾಡಬೇಕು ಎಂದು ಇಸ್ರೇಲ್ ಶತ್ರುದೇಶ ಇರಾನ್ ಕರೆ ಕೊಟ್ಟಿತ್ತು. ಆದರೆ ಪಾಕಿಸ್ತಾನ ಇಸ್ರೇಲ್ ಪರ ನಿಂತಿದ್ದು, ಪ್ಯಾಲೇಸ್ತಿನ್ ವಿರುದ್ಧ ಹೋರಾಡಲು ಬೆಂಬಲ ನೀಡಿದೆ.

ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.

ಬರೀ ಆಸ್ಪತ್ರೆ ಅಷ್ಟೇ ಅಲ್ಲ, ಗಾಜಾದ ಶಾಲೆಗಳು ಉಗ್ರರ ಅಡ್ಡಾಗಳಾಗಿದೆ..

ಅಲ್-ಶಿಫಾ ಆಸ್ಪತ್ರೆಯಲ್ಲಿ ಅಗತ್ಯ ಸೇವೆಗಳು ಸ್ಥಗಿತ: ಶಿಶುಗಳು ಸೇರಿ 24 ರೋಗಿಗಳ ಸಾವು

- Advertisement -

Latest Posts

Don't Miss