ಗಾಲೆ: ಆರಂಭಿಕ ಬ್ಯಾಟರ್ ಅಬ್ದುಲ್ ಶಫೀಕ್ ಅವರ ಅಜೇಯ ಶತಕದ ನೆರೆವಿನಿಂದ ಪಾಕಿಸ್ಥಾನ ತಂಡ 342 ರನ್‍ಗಳ ಬೃಹತ್ ಮೊತ್ತವನ್ನು ಗುರಿ ಮುಟ್ಟಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ.
ಇದು ಟೆಸ್ಟ್‍ನಲ್ಲಿ ಪಾಕ್ ತಂಡ ಚೇಸ್ ಮಾಡಿದ ಎರಡನೆ ಅತಿ ದೊಡ್ಡ ಮೊತ್ತವಾಗಿದೆ. 2015ರಲ್ಲಿ ಪಲ್ಲೆಕೆಲ್ಲೆಯಲ್ಲಿ ಪಾಕ್ ತಂಡ ಲಂಕಾ ವಿರುದ್ಧ 377 ರನ್ ಗಳನ್ನು ಚೇಸ್ ಮಾಡಿತ್ತು.
ನಾಲ್ಕನೆ ದಿನದಾಟದ ಪಂದ್ಯದಲ್ಲಿ ಪಾಕ್ 3 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತ್ತು. ನಿರ್ಣಾಯಕ 5ನೇ ದಿನದಾಟದ ಪಂದ್ಯದಲ್ಲಿ ಬ್ಯಾಟರ್‍ಗಳಾದ ಅಬ್ದುಲ್ಲಾ ಶಫೀಕ್ ಮೊಹ್ಮದ್ ರಿಜ್ವಾನ್ ವೇಗವಾಗಿ ರನ್ ಕಲೆ ಹಾಕಿದರು.
ಆದರೆ 40 ರನ್ ಗಳಿಸಿ ಮುನ್ನಗುತ್ತಿದ್ದ ಮೊಹ್ಮದ್ ರಿಜ್ವಾನ್ ಜಯಸೂರ್ಯ ಎಸೆತದಲ್ಲಿ ಎಲ್‍ಬಿ ಬಲೆಗೆ ಬಿದ್ದರು. ಆಗಾ ಸಲ್ಮಾನ್ 12, ಹಸನ್ ಅಲಿ 5 ರನ ಗಳಿಸಿದರು. ಏಕಾಂಗಿ ಹೋರಾಟ ನಡೆಸಿದ ಅಬ್ದುಲ್ ಶಾಫೀಕ್ 7 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 160 ರನ್ ಗಳಿಸಿದರು. ಮೊಹ್ಮದ ನವಾಜ್ ಅಜೇಯ 19 ರನ್ ಗಳಿಸಿದರು.
ಪಾಕ್ ತಂಡ 6 ವಿಕೆಟ್ ನಷ್ಟಕ್ಕೆ 344 ರನ್ ಗಳಿಸಿ 4 ವಿಕೆಟ್‍ಗಳ ಭರ್ಜರಿ ಗೆಲುವು ಪಡೆಯಿತು. ಲಂಕಾ ಪರ ಪ್ರಭಾತ್ ಜಯಸೂರ್ಯ 4 ವಿಕೆಟ್ ಪಡೆದರು.