Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್‌ನವರಿಗೆ ಇನ್ನೇನು ಮಾಡೋದಕ್ಕೆ ಸಾಧ್ಯ..? ಎಫ್ ಐ ಆರ್ , ಕೇಸ್ ಮಾಡಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಇದರಲ್ಲೆ ಅವರು ಅಧಿಕಾರ ನಡೆಸಿಕೊಂಡು ಬಂದಿದ್ದಾರೆ. ಡಿಕೆ ಸುರೇಶ್ ಅವರದ್ದು ದೇಶದ್ರೋಹದ ಹೇಳಿಕೆ ನೀಡಿದ್ದಾರೆ. ಅವರ ಮೇಲೆ ಕೇಸ್ ಹಾಕಬೇಕಿತ್ತು. ಸಿಟ್ಟು ಮತ್ತು ಆಕ್ರೋಶದಿಂದ ದೇಶ ಭಕ್ತ ಈಶ್ವರಪ್ಪ ಮೇಲೆ ಎಫ್ ಐ ಆರ್ ಮಾಡುವು ಶೋಭೆ ತರಲ್ಲಾ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಎಫ್ ಐ ಆರ್ ಮಾಡಿ ಏನು ಗಲ್ಲಿಗೇರಿಸುತ್ತಿರಾ?. ಈಶ್ವರಪ್ಪ ಹೇಳಿಕೆ ಹಿನ್ನೆಲೆ ಏನು ಅಂತ ಯೋಚನೆ ಮಾಡಬೇಕು. ಅದನ್ನು ಬಿಟ್ಟು ಕೇಸ್ ಗಳಿಂದ ಬಾಯಿ ಮುಚ್ಚಿಸುವ ಕೆಲಸ ಮಾಡಬಾರದು. ಡಿಕೆ ಸುರೇಶ್ ಸಾಮಾನ್ಯ ವ್ಯಕ್ತಿಯಲ್ಲಾ ಅವರು ಲಕ್ಷಾಂತರ ಜನರ ಪ್ರತಿನಿಧಿ. ಇಂತಹವರ ಬಾಯಿಯಲ್ಲಿ ದಕ್ಷಿಣ ಭಾರತ ರಾಷ್ಟ್ರ ಮಾಡುತ್ತೆವೆ ಎನ್ನುವುದು ಅವರಿಗೆ ಶೋಭೆ ತರಲ್ಲಾ. ಯಾವ ನಾಲಿಗೆಯಿಂದ ಹೇಳಿದ್ದಿರಿ, ಅದೇ ನಾಲಿಗೆಯಿಂದ ಹೇಳಿಕೆ ವಾಪಸು ಪಡೆಯಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನವರು ದೇಶ ವಿಭಜಕರು. ಪಾಕಿಸ್ತಾನ ಮಾಡಿದರು, ಬಾಂಗ್ಲಾದೇಶ ಮಾಡಿದರು ಇನ್ನೂ ಏನು ಮಾಡತ್ತಾರೋ ಗೊತ್ತಿಲ್ಲ. ಆದರೆ ನರೇಂದ್ರ ಮೋದಿ ಇರುವ ವರಿಗೂ ಒಂದು ಇಂಚು ಭೂಮಿ ಹೊಡೆಯೋದಕ್ಕೆ ಬಿಡೋದಿಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬೀದಿ ಬದಿ ವ್ಯಾಪಾರಿಗಳನ್ನು ಏಕಾಏಕಿ ತೆರವುಗೊಳಿಸುವ ಕಾರ್ಯ: ಅಧಿಕಾರಿ- ವ್ಯಾಪಾರಿಗಳ ಮಧ್ಯೆ ಜಟಾಪಟಿ