International News: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಿಂತ, ಆ ಚುನಾವಣೆಯ ಮೊದಲು ನಡೆದ ಹಲವು ದುರಂತಗಳು ಸದ್ದು ಮಾಡಿದ್ದವು. ಅಲ್ಲಲ್ಲಿ ಗ್ರೈನೇಡ್, ಬಾಂಬ್ ಸ್ಪೋಟಗಳಾಗುವುದು. ಸಾವು- ನೋವು ಉಂಟಾಗುವುದು ಇದೆಲ್ಲವೂ ನಡೆದಿತ್ತು. ಇದೀಗ ಸಾರ್ವತ್ರಿಕ ಚುನಾವಣೆಯ ರಿಸಲ್ಟ್ ಬಂದಿದ್ದು, ಲಾಹೋರ್‌ನಲ್ಲಿ ನವಾಜ್ ಷರೀಫ್ ಪಕ್ಷಕ್ಕೆ ಗೆಲುವಾಗಿದೆ.
ನವಾಜ್ ಷರೀಫ್ ಲಾಹೋರ್‌ನಲ್ಲಿ ಯಾಸ್ಮೀನ್ ರಷೀದ್ ವಿರುದ್ಧ 55 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೊದಲು ಪನಾಮಾ ಹಗರಣದಲ್ಲಿ ಜೈಲು ಪಾಲಾಗಿದ್ದ ನವಾಜ್ ಷರೀಫ್, ಮತ್ತೆ ಪಾಕಿಸ್ತಾನದಲ್ಲಿ ಗೆಲುವಿನ ಭಾಷಣ ಮಾಡಲು ರೆಡಿಯಾಗಿದ್ದಾರೆ.
ಇನ್ನು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಇಮ್ರಾನ್ ಕಾನ್ ಬೆಂಬಲಿಗರು 5 ಸ್ಥಾನವನ್ನು ಗಳಿಸುವಲ್ಲಿ ಸಫಲರಾಗಿದ್ದಾರೆ. ನವಾಜ್ ಷರೀಫ್ ಪಕ್ಷವಾದ ಪಾಕಿಸ್ತಾನ್ ಮುಸ್ಲೀಂ ಲೀಗ್ ಪಕ್ಷ, ನಾಲ್ಕು ಸ್ಥಾನವನ್ನು ಗೆದ್ದಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ, ಉಗ್ರರು ಹಲವೆಡೆ ಬಾಂಬ್ ದಾಳಿ, ಗ್ರೈನೇಡ್ ದಾಳಿ ನಡೆಸಿದ್ದರು. ಅಲ್ಲದೇ ಹಿಂಸಾಚಾರ ತಡೆಗಟ್ಟಲು, ಗುರುವಾರದ ದಿನ ಪಾಕಿಸ್ತಾನದಲ್ಲಿ ಮೊಬೈಲ್ ಸೇವೆ ಸ್ಥಗಿತಗೊಳಿಸಲಾಗಿತ್ತು.
ರಾಜ್ಯಕ್ಕೆ ಕೇಂದ್ರದಿಂದ ಆದ ಅನ್ಯಾಯ ವಿರೋಧಿಸುವುದು ತಪ್ಪೇ?: BSY ಟೀಕೆಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ..
ಡಿವೋರ್ಸ್ ವದಂತಿಗೆ ಫುಲ್‌ಸ್ಟಾಪ್ ಹಾಕಿದ ನಟಿ ಅಂಕಿತಾ ಲೋಖಂಡೆ- ವಿಕ್ಕಿ ಜೈನ್