International News: ಹೆಣ್ಣು ಗರ್ಭಿಣಿಯಾದರೆ, ಆ ಮನೆಯಲ್ಲಿ ಖುಷಿಯ ವಾತಾವರಣವಿರುತ್ತದೆ. ಈ ವೇಳೆ ಎಲ್ಲರಿಗಿಂತ ಹೆಚ್ಚು, ಖುಷಿ, ಆತಂಕ, ಜವಾಬ್ದಾರಿ ಎಲ್ಲವೂ ಬರುವುದು ತಂದೆಗೆ. ತನ್ನ ಮಗು ಯಾವಾಗ ಈ ಭೂಮಿಗೆ ಬರುತ್ತದೆಯೋ, ತಾನು ಯಾವಾಗ ಅದನ್ನು ಹಿಡಿದು ಮುದ್ದಾಡುತ್ತೇನೋ, ಹೀಗೆ ಹಲವು ಯೋಚನೆಗಳು ಅವನಲ್ಲಿರುತ್ತದೆ.
ಆದರೆ ಇಲ್ಲೋರ್ವ ವ್ಯಕ್ತಿ ತನ್ನ 15 ದಿನದ ಹೆಣ್ಣು ಮಗುವನ್ನು ಜೀವಂತವಾಗಿ ಹೂತು ಹಾಕಿದ್ದಾನೆ. ಇದಕ್ಕೆ ಕಾರಣವೇನೆಂದರೆ, ಆ ಶಿಶುವಿಗೆ ಆರೋಗ್ಯ ಸಮಸ್ಯೆ ಇದೆ. ಆದರೆ, ಅದಕ್ಕೆ ಚಿಕಿತ್ಸೆ ಕೊಡಿಸಲು, ಆ ತಂದೆಯ ಬಳಿ ಹಣವಿಲ್ಲ. ಹಾಗಾಗಿ ಆ ಮಗುವನ್ನು ಆ ತಂದೆ ಜೀವಂತವಾಗಿ ಹೂತಿಟ್ಟಿದ್ದ. ಕ್ರೂರಿಗಳು ಇರುವ ದೇಶದಲ್ಲೇ ಇಂಥ ಘಟನೆ ನಡೆಯೋಕ್ಕೆ ಸಾಧ್ಯವಾಗೋದು. ಈ ಘಟನೆ ನಡೆದಿದ್ದು ಕೂಡ ಅಂಥ ಕ್ರೂರ ದೇಶವಾದ ಪಾಕಿಸ್ತಾನದಲ್ಲಿ.
ತಂದೆಯ ಬಳಿ ಹಣವಿಲ್ಲದಿದ್ದರೂ, ತನ್ನ ಮಗುವನ್ನು ಉಳಿಸಿಕೊಳ್ಳಲು ತಂದೆಯಾದವನು, ಏನಾದರೂ ಮಾಡಿ, ಹಣ ಹೊಂದಿಸಿ, ಮಗುವಿಗೆ ಚಿಕಿತ್ಸೆ ಕೊಡಿಸುತ್ತಾನೆ. ಆದರೆ ಪಾಕಿಸ್ತಾನದಲ್ಲಿ ನಜೀರ್ ಎಂಬ ಕ್ರೂರಿ, ತನ್ನ 15 ದಿನದ ಮಗುವನ್ನು ಅನಾರೋಗ್ಯ ಕಾರಣದಿಂದ ಹೂತಿದ್ದಾನೆ. ಮಗುವಿಗೆ ಅನಾರೋಗ್ಯವಿದೆ ಎಂದು ಗೋಣಿಚೀಲದಲ್ಲಿ ಮಗುವನ್ನು ಕಟ್ಟಿ, ಜೀವಂತವಾಗಿ ಅದನ್ನು ಹೂತಿದ್ದಾನೆ. ಪಾಪ ಅಂಥ ಕ್ರೂರತ್ವವನ್ನು ಸಹಿಸಲಾಗದೇ, ಮಗು ಸಾವನ್ನಪ್ಪಿದೆ.
ಘಟನೆ ಬಳಿಕ ನಜೀರ್ ತಾನಾಗಿಯೇ ಪೊಲೀಸ್ ಠಾಣೆಗೆ ಬಂದು ಅರೆಸ್ಟ್ ಆಗಿದ್ದಾನೆ. ಅವನು ಮಗುವನ್ನು ಎಲ್ಲಿ ಹೂತಿದ್ದಾನೆಂದು ಪರಿಶೀಲಿಸಿದ ಪೊಲೀಸರು ಆ ಮಗುವಿನ ಮೃತದೇಹ ಹೊರ ತೆಗೆದು, ಶವ ಪರೀಕ್ಷೆ ನಡೆಸಿದ್ದಾರೆ.




