Friday, September 20, 2024

Latest Posts

ಗಂಡು ಮಗು ಹುಟ್ಟಬೇಕೆಂದು ಪತ್ನಿಯ ಹಣೆಗೆ ಮೊಳೆ ಹೊಡೆದ ದುಷ್ಟ..

- Advertisement -

ಪೇಶಾವರ್- ಪಾಕಿಸ್ತಾನದ ಪೇಶಾವರ್‌ನಲ್ಲಿ ಭಯಾನಕ ಘಟನೆ ನಡೆದಿದ್ದು, ನೆಟ್ಟಿಗರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣೆಗೆ ಮೊಳೆ ಹೊಡೆದರೆ, ಗಂಡು ಮಗು ಹುಟ್ಟುತ್ತೆ ಎಂದು ಯಾರೋ ಹೇಳಿದ ಕಾರಣ, ಗಂಡ ತನ್ನ ಗರ್ಭಿಣಿ ಪತ್ನಿಯ ಹಣೆಗೆ ಮೊಳೆ ಹೊಡೆದ ಘಟನೆ, ಖೈಬರ್ ಪಂಖ್ತುಂಕ್ವಾ ಎಂಬಲ್ಲಿ ನಡೆದಿದೆ. ಸದ್ಯ ಆಕೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆರೋಪಿಗೆ ಈಗಾಗಲೇ 3 ಹೆಣ್ಣು ಮಕ್ಕಳಿದ್ದಾರೆ. ಹೀಗಾಗಿ ನಾಲ್ಕನೇಯದ್ದು ಎಲ್ಲಿ ಹೆಣ್ಣು ಹುಟ್ಟುತ್ತದೆ ಎಂದು ಹೆದರಿ ಈ ಬಗ್ಗೆ ಪರಿಹಾರ ಕೇಳಲು ಪೀರ್ (ಬಾಬಾ) ಬಳಿ ಹೋಗಿದ್ದಾನೆ. ಆ ಬಾಬಾ, ನಿನ್ನ ಹೆಂಡತಿಯ ಹಣೆಗೆ ಮೊಳೆ ಹೊಡಿದರೆ, ನಿನಗೆ ಗಂಡು ಮಗು ಹುಟ್ಟುತ್ತದೆ ಎಂದು ಹೇಳಿದ್ದಾನೆ. ಹಾಗಾಗಿ ಈ ವ್ಯಕ್ತಿ ಮನೆಗೆ ಬಂದು ಪತ್ನಿಯ ಹಣೆಗೆ ಮೊಳೆಯಿಂದ ಹೊಡೆಯಲು ಬಂದಿದ್ದಾನೆ. ಆದ್ರೆ ಆಕೆ ಈ ಕೆಲಸಕ್ಕೆ ನಿರಾಕರಿಸಿದ್ದಾಳೆ.

ಆಗ, ನೀನು ನಾಲ್ಕನೇಯದ್ದು ಹೆಣ್ಣು ಹೆತ್ತುಕೊಟ್ಟರೆ, ನಿನ್ನನ್ನು ಬಿಟ್ಟು ಬಿಡುತ್ತೇನೆಂದು ಹೆದರಿಸಿದ್ದಾನೆ. ಈ ಕಾರಣಕ್ಕೆ ಆಕೆ ಮೊಳೆ ಹೊಡೆಯಲು ಅನುಮತಿ ನೀಡಿದ್ದಾಳೆ. ಹಾಗೆ ಮೊಳೆ ಹೊಡೆದ ಕಾರಣ, ಅತೀ ರಕ್ತಸ್ರಾವವಾಗಿ ಗರ್ಭಿಣಿ ಅನಾರೋಗ್ಯಕ್ಕೀಡಾಗಿದ್ದಾಳೆ. ಹಾಗಾಗಿ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಆಸ್ಪತ್ರೆಯ ವೈದ್ಯರೇ, ಮಾಹಿತಿ ನೀಡಿದ್ದಾರೆ. ಇನ್ನು ಮಹಿಳೆಯ ಮೆದುಳಿಗೆ ಪೆಟ್ಟು ಬೀಳದ ಕಾರಣ, ಆಕೆ ಬದುಕಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.

- Advertisement -

Latest Posts

Don't Miss