ಪಾಕಿಸ್ತಾನದ ಗ್ಯಾಂಗ್‌ಸ್ಟರ್ ಅಮೀರ್‌ ಬಾಲಾಜ್ ಗುಂಡಿಕ್ಕಿ ಹತ್ಯೆ

Pakistan News: ಪಾಕಿಸ್ತಾನದ ಗ್ಯಾಂಗ್‌ಸ್ಟರ್ ಅಮೀರ್ ಬಾಲಾಜ್ ಟಿಪ್ಪುವನ್ನು ಮದುವೆಯ ಕಾರ್ಯಕ್ರಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಫೆಬ್ರವರಿ 18ರಂದು ಪಾಕಿಸ್ತಾನದ ಲಾಹೋರ್‌ನ ಚುಂಗ್ ಪ್ರದೇಶದಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಭೂಗತ ಪಾತಕಿ ಅಮೀರ್ ಬಾಲಾಜ್ ಟಿಪ್ಪು ಭಾಗವಹಿಸಿದ್ದ. ಈ ವೇಳೆ ಅಪರಿಚಿತರು ಅಮೀರ್‌ ಮೇಲೆ ಗುಂಡಿನ ದಾಳಿ ನಡೆಸಿದ್ದು, ತಕ್ಷಣ ಅಮೀರ್‌ನನ್ನು ಜಿನ್ನಾ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಜಿನ್ನಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಇನ್ನು ಅಮೀರ್ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಗುಂಡು ಹಾರಿಸಿದ್ದವರು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇನ್ನು ಅಮೀರ್ ತಂದೆ, ಅಜ್ಜ ಎಲ್ಲರೂ ಭೂಗತ ಪಾತಕಿಗಳೇ, ಇವರ ತಂದೆ ಏರ್ಪೋರ್ಟ್‌ನಲ್ಲಿ ಕೊಲೆಯಾಗಿದ್ದರೆ, ಅಜ್ಜ ಕೂಡ ಹಳೆಯ ದ್ವೇಷಕ್ಕೆ ಬಲಿಯಾಗಿದ್ದರು.

ನಟಿ ರಶ್ಮಿಕಾ ಮಂದಣ್ಣ ಚಲಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

ನಟ ಜಗ್ಗೇಶ್ ನಿಂದನೆಗೆ ವರ್ತೂರು ಸಂತೋಷ್ ಹೇಳಿದ್ದೇನು..?

ಮೋದಿ ಸಾಹೇಬರು ಟಿವಿಯಲ್ಲಿ ಬರಲಾರದೆ ಒಂದು ವೋಟ್ ಕೇಳಿ: ಪ್ರಧಾನಿಗೆ ಲಾಡ್ ಸವಾಲ್

About The Author