Saturday, April 26, 2025

Latest Posts

“ಆ” ದೇಶಗಳಿಗಾಗಿ ನಾವು “ಈ” ಕೊಳಕು ಕೆಲಸ ಮಾಡ್ತಿದ್ದೀವಿ : ಭಾರತಕ್ಕೆ ಹೆದರಿ ಸತ್ಯ ಬಾಯ್ಬಿಟ್ಟ ಪಾಕ್‌ ಸಚಿವ 

- Advertisement -

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆಸಲು ಪಾಕಿಸ್ತಾನದ ನೆರವು ಹಾಗೂ ಬೆಂಬಲ ಇದೆ ಎಂಬುದನ್ನು ಭಾರತ ಆರೋಪಿಸಿದ ಬಳಿಕ ಪಾಕಿಸ್ತಾನ ಹೆದರಿದೆ. ತನ್ನ ಗಡಿಯಾದ್ಯಂತ ಸೇನೆಯನ್ನು ನಿಯೋಜಿಸಿದೆ.

ಯಾವುದೇ ಕ್ಷಣದಲ್ಲಿ ಭಾರತ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಬಹುದು ಎಂದು ಭಯಭೀತಾಗಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಥಂಡಾ ಹೊಡೆದಿದ್ದಾನೆ. ಅಲ್ಲದೆ ಪಾಕಿಸ್ತಾನದ ಉಗ್ರರಿಗೆ ಆಶ್ರಯ ನೀಡುತ್ತಿರುವುದನ್ನುಒಪ್ಪಿಕೊಂಡಿದ್ದಾನೆ.

ಈ ಕುರಿತು ಸಂದರ್ಶವೊಂದರಲ್ಲಿ ಸತ್ಯ ಒಪ್ಪಿಕೊಂಡಿರುವ ಆಸಿಫ್‌, ಕಳೆದ ಮೂರು ದಶಕಗಳಂದ ನಾವು ಅತಿದೊಡ್ಡ ತಪ್ಪು ಮಾಡುತ್ತಿದ್ದೇವೆ. ಇದರಿಂದಲೇ ನಮಗೆ ಬಹಳಷ್ಟು ತೊಂದರೆಯಾಗುತ್ತಿದೆ. ಅಲ್ಲದೆ ಸೋವಿಯತ್‌ ಒಕ್ಕೂಟದ ಯುದ್ಧದಲ್ಲಿ ಹಾಗೂ ಅದರ ನಂತರದ ದಾಳಿಗಳಲ್ಲಿ ನಾವು ಪಾತ್ರವಹಿಸದಿದ್ದರೆ, ಯಾವುದೇ ಕಳಂಕ ಇರದ ರಾಷ್ಟ್ರವಾಗಿ ನಾವು ದಾಖಲೆ ಬರೆಯುತ್ತಿದ್ದೇವು. ಆದರೆ ಇಂತಹ ಕೊಳಕು ಕೆಲಸವನ್ನು ಅಮೆರಿಕ ಹಾಗೂ ಬ್ರಿಟನ್‌ಗಳಿಗಾಗಿ ನಾವು ಮಾಡುತ್ತ ಬಂದಿದ್ದೇವೆ ಎಂದು ಸತ್ಯವನ್ನು ಒಪ್ಪಿಕೊಂಡಿದ್ದಾನೆ.

80 ರ ದಶಕದಲ್ಲಿ ಹೋರಾಡಿದ್ದೇವೆ..

ಈ ಭಾಗದಲ್ಲಿ ಈ ರೀತಿಯ ಯಾವುದೇ ದುರ್ಘಟನೆ ನಡೆದಾಗ ಪಾಕಿಸ್ತಾನದ ಮೇಲೆ ದೋಷಾರೋಪ ಮಾಡುವುದು ದೊಡ್ಡವರಿಗೆ ಬಹು ಸುಲಭ. 80ರ ದಶಕದಲ್ಲಿ ನಾವು ಅಮೆರಿಕ ಪರವಾಗಿ ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಡುತ್ತಿದ್ದರೆ, ಇಂದಿನ ಈ ಎಲ್ಲಾ ಭಯೋತ್ಪಾದಕರು ವಾಷಿಂಗ್ಟನ್‌ನಲ್ಲಿ ಕೂತು ಸಂಭ್ರಮಿಸುತ್ತಾ ಊಟ ಮಾಡುತ್ತಿದ್ದರು ಎಂದು ಪಾಕ್‌ ಸಚಿವ ಆರೋಪಿಸಿದ್ದಾನೆ

ನಾವು ದಾಳಿ ನಡೆಸ್ತೀವಿ, ಖ್ವಾಜಾ ಹುಂಬತನ..!

ಲಷ್ಕರ್ ಎ ತೋಯ್ಬಾ ಪಾಕಿಸ್ತಾನದಲ್ಲಿ ಈಗ ಇಲ್ಲ, ಅದು ನಶಿಸಿದೆ. ಮೂಲ ಸಂಘಟನೆಯೇ ಇಲ್ಲದಿರುವಾಗ, ಅದರ ಅಂಗ ಸಂಸ್ಥೆ ಹುಟ್ಟಲು ಹೇಗೆ ಸಾಧ್ಯ ಎಂದು ಆಸಿಫ್ ಪ್ರಶ್ನಿಸಿದ್ದಾನೆ. ಆದರೆ ಪಹಲ್ಗಾಮ್ ಘಟನೆ ನಡೆದ ಬಳಿಕ ಭಾರತದ ಹೇರಿರುವ ನಿರ್ಬಂಧಗಳಿಗೆ ಪ್ರತ್ಯುತ್ತರ ನೀಡಲು ಸಿದ್ಧರಿದ್ದೇವೆ. ಒಂದೊಮ್ಮೆ ಅವರು ದಾಳಿ ನಡೆಸಲು ಮುಂದಾದರೆ, ಅದು ಯುದ್ಧಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಆಸಿಫ್‌ ಹುಂಬತನದ ಹೇಳಿಕೆ ನೀಡಿದ್ದಾನೆ. ಪಾಕಿಸ್ತಾನವು ಉಗ್ರ ಸಂಘಟನೆಗಳನ್ನು ಬೆಂಬಲಿಸುವುದರ ಜೊತೆಗೆ ತರಬೇತಿ ಹಾಗೂ ಆರ್ಥಿಕ ನೆರವನ್ನು ಒದಗಿಸುತ್ತಿದೆ ಎಂದು ಖ್ವಾಜಾ ಆಸಿಫ್‌ ಹೇಳಿಕೊಂಡಿದ್ದಾನೆ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ, ಅಮೆರಿಕ ಹೇಳಿದಂತೆ ನಾವು ಮಾಡುತ್ತಿದ್ದೇವೆ ಎಂದು ತಮ್ಮ ನೀಚ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಪಾಶ್ಚಿಮಾತ್ಯ ದೇಶಗಳ ಕಾರ್ಯತಂತ್ರವಾಗಿದೆ..!

ನಾವು ಮೂರು ದಶಕಗಳಿಂದ ಪಾಶ್ಚಿಮಾತ್ಯ ದೇಶಗಳಿಗೆ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸಿದ್ದೇವೆ. ಅವರ ಯೋಜನೆಯಾಗಿತ್ತು, ಉಗ್ರವಾದವನ್ನು ಬೆಳೆಸುವ ಅವರ ಕಾರ್ಯತಂತ್ರದ ದೊಡ್ಡ ಕಾರ್ಯತಂತ್ರವಾಗಿದೆ ಎಂದು ಹೇಳುವ ಮೂಲಕ ಅಮೆರಿಕದ ನಿಜಬಣ್ಣವನ್ನು ಪಾಕ್‌ ಸಚಿವ ಬಯಲು ಮಾಡಿದ್ದಾನೆ. ಇನ್ನೂ ಭಾರತವೂ ಕೂಡ ಈ ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನದ ವಿರುದ್ಧ ಆರೋಪಿಸುತ್ತಲೇ ಬರುತ್ತಿದೆ. ಆದರೆ ಇದೀಗ ಅದನ್ನು ಅಮೆರಿಕದ ಕೃಪಾಪೋಷಿತ ಎಂದು ಹೇಳುವ ಮೂಲಕ ಉಗ್ರ ಪೋಷಕ ದೇಶಗಳನ್ನು ಜಾಗತಿಕ ಮಟ್ಟದಲ್ಲಿ ಖ್ವಾಜಾ ಬೆತ್ತಲುಗೊಳಿಸಿದ್ದಾರೆ.

- Advertisement -

Latest Posts

Don't Miss