Sunday, April 20, 2025

Latest Posts

Dr.G parameshwar-ಜೈನ ಮುನಿಗಳ ಹತ್ಯೆಗೆ ರಾಜಕೀಯ ಬಣ್ಣ ಹಚ್ಚಬೇಡಿ

- Advertisement -

ಹುಬ್ಬಳ್ಳಿ: ಜೈನ ಮುನಿಗಳ ಹತ್ಯೆ ಪ್ರಕರಣಕ್ಕೆ ಸಂಭಂಧಿಸಿದಂತೆ  ಉಪವಾಸ ವ್ರತ ಕೈಗೊಂಡಿರುವ ಗುಣಧರನಂದಿ ಸ್ವಾಮೀಜಿ ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಜಿ ಪರಮೇಶ್ವರ ಅವರುಸ್ವಾಮೀಜಿ ಅವರಿಗೆ ಭಕ್ತಿ ಪೂರ್ವಕ ಪ್ರಣಾಮಗಳು.ಬಹಳ ವಿಭಿನ್ನವಾದ ಸಂದರ್ಭದಲ್ಲಿ ನಾವು ಸ್ವಾಮೀಜಿ ಭೇಟಿ ಮಾಡಿದ್ದೇವೆ..ಚಿಕ್ಕೋಡಿಯಲ್ಲಿ ಕಾಮಕುಮಾರ ನಂದಿ ಸ್ವಾಮೀಜಿಯ ಬರ್ಬರ ಹತ್ಯೆಯಾಗಿದೆ.ಇದು ಇತಿಹಾಸದಲ್ಲಿ ನೋಡದ ಹತ್ಯೆ ಎಂದ ಪರಮೇಶ್ವರ ಇಗಾಗಲೇ ಅರೆಸ್ಟ್ ಮಾಡಿ ಕಾನೂನು ಕ್ರಮ ಆಗ್ತಿದೆ.

DYSP ನೇತೃತ್ವದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ತನಿಖೆ ಆಗ್ತಿದೆ.ತನಿಖೆಯ ಬಳಿಕ ಇನ್ನು ಕೆಲ ವಿಚಾರಗಳು ಬಯಲಿಗೆ ಬರಬಹುದು..ಇದು ಯಾರ ವೈಫಲ್ಯದಿಂದ ನಡೆದ ಘಟನೆಯಲ್ಲ.ವರೂರಿನ ಗುಣಧರನಂದಿ ಸ್ವಾಮೀಜಿ ಇನ್ನ ಮುಂದೆ ಹೀಗೆ ಆಗಬಾರದು ಎಂದು ಉಪವಾಸ ಆರಂಭಿಸಿದ್ರು..ನಮ್ಮ ಜಿಲ್ಲಾಧ್ಯಕ್ಷರು ನಮ್ಮ ಗಮನಕ್ಕೆ ತಂದಿದ್ರು. ಉಪವಾಸ ಬಿಡೋದಾಗಿ ಸ್ವಾಮೀಜಿ ಜೊತೆ ನಾನು ನಿನ್ನೆ ಮಾತಾಡಿ ವಿನಂತಿ ‌ಮಾಡಿಕೊಂಡೆ.

ಗೃಹ ಇಲಾಖೆಯ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ..ನಾನು ನಿಮ್ಮ ಜೊತೆ ಇದ್ದೇವೆ,ಸರ್ಕಾರ ಜೈನ ಸಮುದಾಯದ ಜೊತೆ ಇರೋ ಭರವಸೆ ನೀಡಿದ್ದೇನೆ.ಸ್ವಾಮೀಜಿ ಗಳು ಉಪವಾಸ ಸತ್ಯಾಗ್ರಹವನ್ನು ನಿಲ್ಲಸಿದ್ದಾರೆ.ನಾನು ಅವರಿಗೆ ಆಭಾರಿ.ಕಾನೂನು ಸುವ್ಯವಸ್ಥೆ ADGP ಕಳಸಿಕೊಟ್ಟಿದ್ದೆ,ಅವರು ನಮಗೆ ಮಾಹಿತಿ ನೀಡಿದ್ದಾರೆ..ಸರ್ಕಾರದ ಪರವಾಗಿ ಸ್ವಾಮೀಜಿ ಅವರಿಗೆ ಭರವಸೆ ಕೊಟ್ಟಿದ್ದಾರೆ..ಈಗ ಮುಖ್ಯಮಂತ್ರಿಗಳು  ಕೂಡಾ ಕರೆ ಮಾಡಿ ವಿಚಾರಿಸಿದ್ರು.

ಸ್ವಾಮೀಜಿ ನಾಲ್ಕು ಬೇಡಿಕೆ ಇಟ್ಟಿದ್ದಾರೆ..

ಜೈನ ಸ್ವಾಮೀಜಿಗಳ ಯಾತ್ರೆ ವೇಳೆ ರಕ್ಷಣೆ ಕೊಡಬೇಕು ಎಂದು ತಿಳಸಿದ್ದಾರೆ..

ಜೈನ ಮಂಡಳಿ ಮಾಡಬೇಕು ಎಂದು ಹೇಳಿದ್ದಾರೆ

ಅವರು ತಂಗೋ ಜಾಗ ಅಧಿಕೃತ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ

ಜೈನ ಸ್ವಾಮೀಜಿ ಶಾಲಾ ಕಾಲೇಜುಗಳಲ್ಲಿ ಉಳಿದುಕೊಳ್ತಾರೆ

ಜೈನ ಮಂದಿರಗಳಿಗೆ ರಕ್ಷಣೆ ಕೊಡಬೇಕು ಎಂದಿದ್ದಾರೆ.

ಜೈನ ಸಮುದಾಯದ ಸಂಘ ಸಂಸ್ಥೆಗಳ ಲಿಖಿತ ರೂಪದಲ್ಲಿ ತಿಳಿಸಿದ್ರೆ ನಾವು ರಕ್ಷಣೆ ಕೊಡ್ತೀದಿವಿ.ಇನ್ನು ಹೆಚ್ಚಿನ ರಕ್ಷಣೆ ಕೊಡ್ತೀವಿ.ಈ ವಿಚಾರವಾಗಿ ನಾನು ಮಧು ಬಂಗಾರಪ್ಪ ಜೊತೆ ಮಾತಾಡ್ತೀನಿ.ಈಗಾಗಲೇ ಹಿಂದೂಳಿದ ವರ್ಗಗಳ ಮಂಡಳಿ ನಿಮಗ ಇದೆ.ಮುಖ್ಯಮಂತ್ರಿ ಗಮನಕ್ಕೆ ತಂದು ಜೈನ ಸಮುದಾಯದ ಮಂಡಳಿ ಮಾಡೋಕೆ ಕ್ರಮ ನಿರ್ದಾರ.ಬಜೆಟ್ ಮೊದಲೆ ಆಗಿದ್ರೆ ನಾವು ಪ್ರಕಟನೆ ಮಾಡ್ತಿದ್ವಿ..ನಾವು ಜೈನ ಮಂದಿರಕ್ಕೆ ರಕ್ಷಣೆ  ಕೊಡ್ತೀವಿ.ರಾಜ್ಯದಲ್ಲಿ ಇಂತಹ ಘಟನೆ ಆಗಬಾರದು..

ಇಲಾಖೆ ವತಿಯಿಂದ ಮುಂದಿನ ದಿನದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೆ.ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು.ಪ್ರಣಾಳಿಕೆ ಅಧ್ಯಕ್ಷನಾಗಿ ನಾನೇ ಬರೆದಿದ್ದು.ಈ ಮಾತಿಗೆ ಸರ್ಕಾರ ನಿಲ್ಲುತ್ತದೆ.ಇಡೀ ಸರ್ಕಾರ ಇದೇ ಮಾತಿಗೆ ದುಡಿಯುತ್ತೇವೆ,ಇಡೀ ದೇಶ ನೋಡ್ತಾ ಇದೆ, ಇಂತಹ ಘೋರ ಹತ್ತೆಯಾಗಿದೆ,ಹೀಗಾಗಿ ಪ್ರಪಂಚ ಇದನ್ನು ಗಮನಸ್ತಿದೆ.ಇದಕ್ಕೆ ರಾಜಕೀಯ ಬಣ್ಣ ಕೊಡಬಾರದು..ಯಾರು ರಾಜಕೀಯ ಮಾಡೋಕೆ ಹೋಗ್ತೀದಾರೆ ಅವರಿಗೆ ಒಂದು ಮಾತು ಹೇಳ್ತೀನಿ.ಇದರಲ್ಲಿ ನಿಮ್ಮ ಬೇಳೆ ಬೇಯಿಸಕೊಳ್ಳಬೇಡಿ.ಇಂತಹದರಲ್ಲಿ ರಾಜಕೀಯ ಬೇಡಾ.ಹಿಂದೆ ಕೈಗಳು ಇವೆ ಎಂದು ಮಾತಾಡೋದನ್ನ ನಿಲ್ಲಸಬೇಕು.ಯಾರೂ ಗಂಭೀರ ಕೃತ್ಯ ಮಾಡಿದಾರೆ ಅನ್ನೋದ ತನಿಖೆಯಲ್ಲಿ ಗೊತ್ತಾಗತ್ತೆ.ಗೃಹ ಸಚಿವನಾಗಿ ನಾನು ವಿವರಣೆ ಮಾಡಲ್ಲ.ಇಲಾಖೆ ಅಧಿಕಾರಿಗಳಿಗೆ ಬಿಡ್ರೀನಿ.ಆರೋಪಿಗಳನ್ನ ಸರ್ಕಾರ ರಕ್ಷಣೆ ಮಾಡ್ತಿರೋ ಆರೋಪ.ಇಂತಹ ಮಾತುಗಳನ್ನ ಹೇಳಬಾರದು.ಜನ‌ ಪ್ರತಿನಿಧಿಗಳು ಯಾರೂ ಕೂಡಾ ಹೀಗೆ ಮಾತಾಡಬಾರದು.ಜೈನ ಮುನಿ ಹತ್ಯೆಯನ್ನು ಸಿಬಿಐಗೆ ವಹಿಸೋ ಅನಿವಾರ್ಯತೆ ಇಲ್ಲ.

ತಾಯಿಯ ಟ್ರಿಪ್ ಶೋಕಿಗೆ ಬಲಿಯಾದ ಒಂದೂವರೆ ವರ್ಷದ ಬಾಲಕಿ

RRR ಸಿನಿಮಾ ವಿಲನ್ ನಿಧನ: ಈ ಸುದ್ದಿ ನಂಬಲಸಾಧ್ಯವೆಂದ ರಾಜಮೌಳಿ..

ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳವ ಅಗತ್ಯವಿದೆ -ಮೋದಿ

- Advertisement -

Latest Posts

Don't Miss